Okಬಹರೇನ್ ದ್ವೀಪ ರಾಷ್ಟ್ರದಲ್ಲಿ ತುಳು ಕನ್ನಡ ಸಂಘಟನೆಗಳಲ್ಲಿ ಚಿರಪರಿಚಿತ ವ್ಯಕ್ತಿತ್ವ. ತನ್ನ ಜೀವಮಾನದ ಅತ್ಯಮೂಲ್ಯ 39 ವರ್ಷಗಳಸುದೀರ್ಘ ಸೇವೆಯನ್ನು ರಾಯಲ್ ಕೋರ್ಟ್ ಪ್ಯಾಲೇಸ್ ನಲ್ಲಿ ಸಲ್ಲಿಸಿ, ಈಗ ತಾಯಿನಾಡಿನಲ್ಲಿ ನೆಲೆಯೂರಲು ಹೊರಟು ನಿಂತಿರುವದಿನಕರಣ್ಣ ನಿಮಗಿದೋ ಬಹರೇನ್ ನ ಸಮಸ್ತ ತುಳು, ಕನ್ನಡ, ಸಹೃದಯರ ಆತ್ಮೀಯ ಬೀಳ್ಕೊಡುಗೆ.
ತನ್ನ ಬದುಕಿನ ದೀರ್ಘವಧಿಯ ಸೇವೆಯನ್ನು ಇಲ್ಲಿ ಸಲ್ಲಿಸಿ, ಕನ್ನಡ ಸಂಘ, ಗುರುಸೇವಾ ಸಮಿತಿ ಬಹರೇನ್ ಬಿಲ್ಲವಾಸ್ ಆಡಳಿತಮಂಡಳಿಗಳಲ್ಲಿ ಪದಾಧಿಕಾರಿಯಾಗಿ ಹಲವು ವರ್ಷಗಳ ಕಾಲ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ, ಪರೋಪಕಾರಿಯಾಗಿ ತಾವು ಸಲ್ಲಿಸಿದಸೇವೆ ಅನನ್ಯ ಹಾಗು ಅಮೂಲ್ಯವಾದದ್ದು.
ಜೀವನದ ನಿವೃತ್ತಿಯ ಕಾಲಘಟ್ಟದಲ್ಲಿ ತಾಯಿನಾಡಿನಲ್ಲಿ ತಮ್ಮ ಮುಂದಿನ ಬದುಕು ಕುಟುಂಬದ ಸಹಪಾರಿವಾರದೊಂದಿಗೆ ತಾವುನಂಬಿರುವ ತುಳುನಾಡಿನ ಸಮಸ್ತ ಶಕ್ತಿಗಳು ನಿಮಗೆ ಆಸರೆಯಾಗಿ ನಿಂತು. ನಿಮ್ಮ ಮುಂದಿನ ಜೀವನ ಉತ್ತಮ ಆರೋಗ್ಯದೊಂದಿಗೆಸುಖ, ಶಾಂತಿ, ನೆಮ್ಮದಿಯೊಂದಿಗೆ ಸಾಗಲಿ ಎಂಬುದೇ ನಮ್ಮೆಲ್ಲರ ಶುಭ ಹಾರೈಕೆ.
ಮನ ತುಂಬಿ ಹಾರೈಸುವ
ಅಧ್ಯಕ್ಷರು ಹಾಗು ಪದಾಧಿಕಾರಿಗಳು
ಬಹರೇನ್ ಬಿಲ್ಲವಾಸ್
✍ ಬಿಲ್ಲವಾಸ್ ಗುರುಪುರ ಕೈಕಂಬ