TOP STORIES:

FOLLOW US

ಅಮ್ಮ ಹಚ್ಚಿದ ದೀಪಾವಳಿಯ ಹಣತೆ..!! ಬರಹ: ವಿಜೇತ್ ಪೂಜಾರಿ ಶಿಬಾಜೆ


ಬೆಳಗ್ಗೆ ಮಾಡಿದ್ದ ಒಣಗಿದ ರೊಟ್ಟಿಯ ತುಂಡನ್ನು ಸೂರ್ಯ ಇನ್ನೇನೋ ಮುಳುಗುವ ಹಂತಕ್ಕೆ ಬಂದಿದ್ದಾನೆ ಎನ್ನುವ ಅವಸರದಲ್ಲಿ ಕೈಯಲ್ಲಿ ಹಿಡಿದ ಮಗ,ಅದರ ಜೊತೆಗೆ ಬಿಟ್ಟು ಬಿಡದ ಹಾಳಾದ ತಲೆ ನೋವಿಗೆ ಇಳಿ ಸಂಜೆ ಮೂರರ ಹೊತ್ತಿಗೆ ಮಾಡಿದ ತಾಯಿಯ ಕರಿ “ಟೀ”ಯ ಉಳಿದ ಒಂದಿಷ್ಟನ್ನೂ ಕುಡಿಯುತ್ತಾ, ಸೊಟ್ಟಗಿನ ಪಾತ್ರೆಯ ತಳದಲ್ಲಿ ಇದ್ದ ಟೀ ಪುಡಿಯನ್ನು ಬಾಯಿಯಿಂದ ಉಫ್ ಉಫ್ ಎಂದು ಬದಿಗೆ ಸರಿಸಿ ತುಂಡು ರೊಟ್ಟಿಯ ಒಂದು ಭಾಗವನ್ನು ಇನ್ನೇನು ಅದರಲ್ಲಿ ಅದ್ದಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಅದೇ ಮರುಗಿದ ಧ್ವನಿಯ ಲಯದಲ್ಲಿ ಒಳಗಿಂದ ಕೇಳಿದ ಆ ಮಾತಿಗೆ ಇದ್ದ ರೊಟ್ಟಿಯನ್ನು ಮೂಲೆಯಲ್ಲಿ ಅರ್ಧ ಕಬ್ಬಿನ ಸರಪಳಿ ಮತ್ತು ಗೋಣಿ ಚೀಲದಲ್ಲಿ ಮಾಡಿದ ಹಗ್ಗದಲ್ಲಿ ಬಂಧಿಯಾದ ಟಾಮಿಗೆ ಕೂತಲ್ಲಿಂದ ಎಸೆದು ಬಿಟ್ಟ,ಆ ರೊಟ್ಟಿಯ ತುಂಡು ಪಕ್ಕದಲ್ಲಿ ಬೀಳದೆ ತನ್ನ ಕಾಲು ಮತ್ತು ಕೈಯಿಂದ ಹೇಗೋ ಮಾಡಿ ಮಣ್ಣಿನ ಮುದ್ದೆಯ ಜೊತೆಗೆ ಆ ರೊಟ್ಟಿಯ ತುಂಡನ್ನು ತಿಂದು ಬಿಟ್ಟ..!

ಮತ್ತೇ ಆ ಧ್ವನಿ ಬಿರುಸಾಗಿತ್ತು..

“ನಮ ನರಮನಿ ಲೆಕಾ ಏಪಾ ಆಪನ”(ನಾವು ಯಾವಾಗ ಮನುಷ್ಯರಂತೆ ಆಗುತ್ತಿವೋ).

ಇತ್ತ ಮಗ ಚಂದು ಅದೇನೋ ಟಾಮಿಯನ್ನು ನೋಡುತ್ತಿರುವಾಗ ಮುಂದಿನ ವಾರ ದೀಪಾವಳಿ ಅಲ್ಲವ ಎಂದು ಒಂದು ಸಲ ಆಲೋಚಿಸಿ,ಅಮ್ಮನಲ್ಲಿ “ಅಮ್ಮ ಬರ್ಪುನ ವಾರ ಪರ್ಬ ಅತ”(ಮುಂದಿನ ವಾರ ದೀಪಾವಳಿ ಅಲ್ಲವೇ) ಎಂದು ಬಳಲಿದ ಧ್ವನಿಯಲ್ಲಿ ಇತ್ತ ಹೇಳದಂತೆಯು ಇತ್ತ ಕಡೆ ಕೇಳದಂತೆಯು ಹೇಳಿ ಬಚ್ಚಲು ಮನೆಗೆ ಬಿಸಿ ನೀರು ಕಾಯಿಸಲು ನಿನ್ನೆ ಇಟ್ಟ ಚಿಮಿಣಿ ದೀಪದ ಕಡೆ ಕೈಯಾಡಿಸಿ ಮಸಿ ಬಳಿದ ಆ ದೀಪವನ್ನು ಎತ್ತಿಕೊಂಡು ಹೊರ ನಡೆದನು ಚಂದು..!

ಇತ್ತ ಕಡೆ ಚಂದುನ ಅಮ್ಮ ಒಲೆಯ ಮೇಲೆ ಮೂಲೆಯಲ್ಲಿ ಇದ್ದ ಮಣ್ಣಿನ ಪಾತ್ರೆ ಮಸಿಯಿಂದ ಕಪ್ಪಾಗಿದ್ದನ್ನು ತೊಳೆಯಲು ಎಟುಗದ ಕೈಯಿಂದ ಹೇಗೋ ಕೆಳಗೆ ಇಳಿಸಿ ಹೊರ ನಡೆದಳು.

ಬಚ್ಚಲು ಮನೆ ದಾಟಿ ಸಾಗುವಾಗ “ಒಂದು ಸಿಹಿ ಮಾಡಲು ಒಂದು ಬೆಲ್ಲ ಕೂಡ ಇಲ್ಲಿ ಇಲ್ಲ” ಎಂದು ಗೊಣಗುತ್ತಾ ಹಳೆಯ ಕಲ್ಲಿನ ಮೆಟ್ಟಿಲನ್ನು ದಾಟಿ ತೋಟದ ತೊರೆಯತ್ತ ಸಾಗಿದಳು.ಇತ್ತ ಕಡೆ ಚಂದು ಆ ಮಣ್ಣಿನ ಮಡಿಕೆಯನ್ನು ನೋಡುತ್ತಾ,ಕಳೆದ ಬಾರಿ ಅಕ್ಕ ಗಂಡನ ಮನೆಯಿಂದ ಬಂದಾಗ ರಫೀಕಜ್ಜನ ಅಂಗಡಿಯಿಂದ ತಂದ ಆ ಮಡಿಕೆಯ ಪಾತ್ರೆಗಳು,ಅದರ ಜೊತೆಗೆ ಒಂದಿಷ್ಟೂ ತಂದ ದಿನಸಿಯ ಹಣವನ್ನು ಮೊನ್ನೆ ಮೊನ್ನೆ ಇದ್ದ ಕರಿ ಮೆಣಸನ್ನು ಮಾರಿ ಕೊಟ್ಟು ಬಂದಾಗ,ಕೋಪದಿಂದ ಅಜ್ಜ ಬಾಯಿಗೆ ಬಂದ ಹಾಗೆ ಬೈದು ನೀನು ಇನ್ನು ಇಲ್ಲಿಗೆ ಬರಬೇಡ ಅಂದದ್ದು ಕೂಡ ನೆನಪಾಗಿ ಹೋಯಿತು..!

ಇಂತಹ ಕಷ್ಟದಿಂದ ಇನ್ಯಾವಾಗ ನಾವು ಬರುತ್ತೇವೆ ಎನ್ನುತ್ತಾ,ಈ ದೀಪಾವಳಿಗೂ ಅಕ್ಕಾ ಬರುವಳು ಎನ್ನುವ ಮಾಹಿತಿಯನ್ನೂ ಮೊನ್ನೆ ಮೊನ್ನೆ ಪಕ್ಕದ ಮನೆಯ ಗೌಡರು ಹೇಳಿದ್ದು ನೆನಪಾಯಿತು.!( ಅಲ್ಲಿ ಮಾತ್ರ ದೂರವಾಣಿಯ ಸಂಪರ್ಕ ಇತ್ತು.)

ಇತ್ತ ಕಡೆ ತಾಯಿ ಆ ಪಾತ್ರೆಯನ್ನು ಮೊದಲಿನಂತೆ ಸ್ವಚ್ಚ ಮಾಡಿ ಸುಸ್ತಾದ ದೇಹದಿಂದ ಮೆಟ್ಟಿಲು ಹತ್ತುತ್ತಾ ಮನೆಯ ಒಳಗಡೆ ನಡೆದಳು.

ಯಾವುದೋ ವಸ್ತುವನ್ನು ಹುಡುಕುತ್ತಾ ಸಾಗಿದ ಚಂದುನ ಅಮ್ಮನಿಗೆ ಎಂದೋ ಇಟ್ಟಿದ್ದ “ಹಣತೆ”ಯ ಕಟ್ಟು ಧೋಪ್ಪನೆ ಕೆಳಗೆ ಬಿದ್ದು ಬಿಡ್ತು..!
ಅದರಲ್ಲಿ ಒಡೆಯದೆ ಇದ್ದ ಎರಡೂ ಮೂರು ಹಣತೆಯನ್ನು ತೆಗೆದು ದೇವರ ಪಟದ ಹತ್ತಿರ ಇದ್ದ ನಿನ್ನೆ ಉಳಿದ ಬತ್ತಿಯ ತುಂಡನ್ನು ತೆಗೆದು ಎಣ್ಣೆ ಹಾಕಿ ಹಣತೆಯನ್ನು ಹಚ್ಚಿ ಬಿಟ್ಟಳು..!

ಇತ್ತ ಚಂದು ಆ ಹಣತೆಯ ಬೆಳಕನ್ನು ನೋಡಿ ಏನೋ ಖುಷಿಯಾಗಿ “ಅಮ್ಮ ಹಚ್ಚಿದ ದೀಪಾವಳಿಯ ಹಣತೆ “ಎಂದುಕೊಂಡು,ತೋಟದ ಬದಿಯಲ್ಲಿ ನೆಟ್ಟಿದ್ದ ಮರ ಗೆಣಸು ಎರಡು ಮೂರು ದಿನದಿಂದ ಹಂದಿ ಮತ್ತು ಹೆಗ್ಗಣದ ಬಾಯಿಗೆ ತುತ್ತಾಗಿದ್ದನು ಬೆಳಗ್ಗೆ ಕಂಡಿದ್ದನು.

ಸಿಕ್ಕಿದಷ್ಟು ಸಿಗಲಿ ಎಂಬ ಭಾವದಿಂದ ಹಳೆಯ ಹಾರೆಯನ್ನು ಕೊಟ್ಟಿಗೆಯ ಮೇಲಿಂದ ತೆಗೆದು ಹೆಗಲಿಗೆ ಇರಿಸಿ ಇನ್ನೇನೋ ಕತ್ತಲೆ ಆಗಬೇಕು ಎನ್ನುವ ಸಮಯದಲ್ಲೇ ಹೊರ ನಡೆದನು..

ಬರಹ: ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »

ಉಜಿರೆ ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ


Share       ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್  & ಬೈಟ್ ಐಟಿ ಕಂಪನಿಯ ಶ್ರೀ ಪ್ರಕಾಶ್ ರಾವ್ ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ


Read More »