ಶ್ರೀ ಗುರು ನಾರಾಯಣ ಸೇವಾ ಸಂಘ ಅರಸಿನಮಕ್ಕಿ (ಹತ್ಯಡ್ಕ,ರೆಖ್ಯಾ,ಶಿಶಿಲ,ಶಿಬಾಜೆ) ಮತ್ತು ಯುವವಾಹಿನಿ ಸಂಚಲನ ಸಮಿತಿ ಅರಸಿನಮಕ್ಕಿ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 166ನೇ ಜನ್ಮದಿನಾಚರಣೆಯ ಅಂಗವಾಗಿ ಗುರು ನಾರಾಯಣ ಸೇವಾ ಸಂಘ ಅರಸಿನಮಕ್ಕಿಯಲ್ಲಿ ಗುರು ಪೂಜೆ ಮತ್ತು ಗೌರವಾರ್ಪಣೆಯ ಕಾರ್ಯಕ್ರಮದಲ್ಲಿ 2019-2020ನೇ ಸಾಲಿನ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಶ್ರೀ ಪಿಯುಸಿ ವಿದ್ಯಾರ್ಥಿಗಳಿಗೆ ಬಿಲ್ಲವ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಶ್ರೀ ಜಾನಕಿ ಮತ್ತು ಶ್ರೀ ವಸಂತ ಪೂಜಾರಿ ಇವರ ಪುತ್ರಿಯಾದ ಕುಮಾರಿ ವಿನುತಾ ಇವರು ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪೂರೈಸಿರುತ್ತಾರೆ. 2019-2020ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 542 ಅಂಕ ತೆಗೆದು ಡಿಸ್ಟಿಂಕ್ಸನ್ ಪಾಸ್ ನಮ್ಮ ಸಂಘ,ಸಂಸ್ಥೆಗೆ ಕೀರ್ತಿ ತಂದು ಕೊಟ್ಟಿರುತ್ತಾರೆ.
ಕುಮಾರಿ ವಿನುತಾ ಇವರ ಮುಂದಿನ ಬಿ. ಕಂ ವಿದ್ಯಾಭ್ಯಾಸಕ್ಕೆ ಬೇಕಾದ ಯುನಿಫಾರ್ಮ್ ವ್ಯವಸ್ಥೆಯನ್ನು ಬ್ರಹ್ಮಶ್ರೀ ಪ್ರೆಂಡ್ಸ್ ವಾಟ್ಸಪ್ಪ್ ಗ್ರೂಪ್ ನ ಸಮಾಜ ಸೇವಕರು ಆದ ಸುರೇಂದ್ರ ಕೋಟ್ಯಾನ್ ಇವರು ಉಚಿತವಾಗಿ ನೀಡುವುದಾಗಿ ತಿಳಿಸಿದ್ದು ನಿಮ್ಮ ಈ ಸಮಾಜ ಸೇವೆಗೆ ನಾವು ನಿಮ್ಮ ಪ್ರೀತಿಗೆ ಅಭಾರಿ. ನಮ್ಮ ಈ ಸಂಘ,ಸಂಸ್ಥೆಗೆ ನೀಡುವ ಸಹಕಾರಕ್ಕೆ ಹೃದಯಪೂರ್ವಕವಾದ ಅಭಿನಂದನೆಗಳು.