ಮಂಗಳೂರು : ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಜನ್ಮದಿನದ ಅಂಗವಾಗಿ ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಅಸೈಗೋಳಿಯ ಅಭಯಾಶ್ರಮಕ್ಕೆ ಧ್ವನಿವರ್ಧಕ ಕೊಡುಗೆ ಹಾಗೂ ಸಹಾಯಧನ ನೀಡಲಾಯಿತು.
ಅಭಯಾಶ್ರಮದ ಆಡಳಿತ ವ್ಯವಸ್ಥಾಪಕ ಶ್ರೀನಾಥ್ ಹೆಗ್ಡೆ ಮಾತಾನಾಡಿ ಗುರುಬೆಳದಿಂಗಳು ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸುತ್ತಾ, ಆಶ್ರಮದ ಸೌಕರ್ಯಗಳ ಸ್ಥಿತಿಗತಿ ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ಆರ್., ಉಪಾಧ್ಯಕ್ಷ ರಘುನಾಥ್ ಮಾಬಿಯಾನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪ್ರಮುಖರಾದ ಪ್ರವೀಣ್ ಅಂಚನ್, ಶ್ರೀಧರ್, ಬಾಲಚಂದ್ರ, ಗಜೇಂದ್ರ ಉಪಸ್ಥಿತರಿದ್ದರು.