ಆರ್ಥಿಕವಾಗಿ ದಿಕ್ಕು ತೋಚದ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ
ಪಡುಬಿದ್ರಿ: ಅನಾರೋಗ್ಯ ಪೀಡಿತ ತಂದೆ ಹಾಗೂ ಇಬ್ಬರು ಸಹೋದರರನ್ನು ಕಳೆದುಕೊಂಡ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ 50,000ರೂ. ನೆರವು ನೀಡಲಾಯಿತು.
ಕುಟುಂಬದ ಆಧಾರವಾಗಿದ್ದ ಸಹೋದರರನ್ನು ಕಳೆದುಕೊಂಡು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ವೃದ್ಧೆ ತಾಯಿ ಹಾಗೂ ಅವಿವಾಹಿತ ಸಹೋದರಿಯರ ಮನೆಗೆ ಭೇಟಿ ನೀಡಿ ಅವರ ಪರಿಸ್ಥಿತಿ ಅವಲೋಕಿಸಿ ಸಹಾಯಧನ ವಿತರಿಸಲಾಯಿತು.
ಅನಾರೋಗ್ಯಪೀಡಿತ ತಂದೆ ಹಾಗೂ ಸಹೋದರರ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿ, ಇದ್ದ ಮನೆಯ ಮೇಲೆ ಕೂಡ ಸಾಲ ಮಾಡಿ ದಿಕ್ಕೇ ತೋಚದಂತಿದ್ದ ಕುಟುಂಬದ ಪರಿಸ್ಥಿತಿ ಕರುಣಾಜನಕವಾಗಿತ್ತು. ಹಾಗಾಗಿ ನಮ್ಮ ಸಂಸ್ಥೆಯ ವತಿಯಿಂದ ಅವರ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿ, ಆರ್ಥಿಕ ಸಹಾಯ ನೀಡಿದ್ದೇವೆ ಎಂದು ಗುರುಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್. ಹೇಳಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪದಾಧಿಕಾರಿ ಯೋಗೀಶ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಮಂಡಳಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಯುವವಾಹಿನಿ ಪಡುಬಿದ್ರಿ ಘಟಕದ ಮಾಜಿ ಅಧ್ಯಕ್ಷ ಯೋಗೀಶ್ ಪೂಜಾರಿ ಪಾದೆಬೆಟ್ಟು, ಗುರುಬೆಳದಿಂಗಳು ಸಂಸ್ಥೆ ಸದಸ್ಯರಾದ ಪ್ರವೀಣ್ ಅಂಚನ್, ವಿವೇಕ್ ಕೋಟ್ಯಾನ್ ಉಪಸ್ಥಿತರಿದ್ದರು.
ನಮ್ಮೊಂದಿಗೆ ನೀವೂ ಕೈಜೋಡಿಸಬಹುದು:
ಜಾತಿ- ಮತ- ಪಕ್ಷ ಭೇದ ರಹಿತವಾಗಿ ಸಮಾಜಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ, ಶಿಕ್ಷಣ, ಆರೋಗ್ಯ, ಆಸರೆ ಎಂಬ ಧ್ಯೇಯಗಳೊಂದಿಗೆ ಗುರುಬೆಳದಿಂಗಳು ಯೋಜನೆ ಅನುಷ್ಠಾನಗೊಂಡಿದ್ದು, ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ, ರೋಗಿಗಳಿಗೆ ಸಂಜೀವಿನಿಯಾಗಿ, ನೊಂದವರಿಗೆ ಕರುಣಾಮಯಿಯಾಗಿರುವ ಯೋಜನೆಯೇ ಗುರುಬೆಳದಿಂಗಳು. ಈಗಾಗಲೇ ಗುರುಬೆಳದಿಂಗಳು ಫೌಂಡೇಶನ್ ಮೂಲಕ ನೊಂದವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮದುವೆ, ನೂರಾರು ರೋಗಿಗಳಗೆ ಔಷಧಕ್ಕೆ ನೆರವು, ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ನಮ್ಮ ಸಾರ್ಥಕ ಸೇವೆಗೆ ನೀವೂ ಕೈಜೋಡಿಸಬಹುದು.
Name : GURU BELADINGALU
Bank: CANARA BANK
Account No: 110000894880
IFSC Code: CNRB0010241
Google Pay Phone Pay : 919901246123
UPI : 301617062894880@cnrb