ಒಬ್ಬರಿಗಿಂತ ಒಬ್ಬರನ್ನು ಮೀರಿಸುವ ಅದ್ಭುತ ಪ್ರತಿಭೆಗಳು ದೂರದ ಊರದ ಮುಂಬೈನಲ್ಲಿ ಕುಳಿತು ಅದೆಷ್ಟೋ ಚಲನ ಚಿತ್ರ ನಟರ, ಗಣ್ಯ ವ್ಯೆಕ್ತಿಗಳ ಚಿತ್ರ ಬಿಡಿಸಿ ತನ್ನ ಪ್ರತಿಭೇನ ಹೊರ ಜಗತ್ತಿಗೆ ತೋರಿಸಿದ ಅದ್ಭುತ ಪ್ರತಿಭೆ ಜಯ ಪೂಜಾರಿ ಮತ್ತು ಸವಿತಾ ಪೂಜಾರಿ ದಂಪತಿಗಳ ಮಗಳು ದೀಪು ಪೂಜಾರಿ
ಹುಟ್ಟಿದ್ದು ಮೂಡಬಿದ್ರೆಯಲ್ಲಿ ಆದರೂ ಬೆಳೆದ್ದದು ಮಯಾ ನಗರಿ ಮುಂಬೈನಲ್ಲಿ ಪೈಂಟಿಂಗ್, ಡ್ರಾಯಿಂಗ್, ಮ್ಯೂಸಿಕ್, ರೈಟಿಂಗ್, ಟೀಚಿಂಗ್, ರಿಡಿಂಗ್ ಇವರ ಹವ್ಯಾಸ. ಮೊದಲು ಸೀನಿಯರ್ಆರ್ಟ್ ಟೀಚರ್ ಆಗಿ ಸೈಟ್ ಕ್ಸಾವಿರ್ಸ್ ಹೈ ಸ್ಕೂಲ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು ಈಗ ಪ್ರಸ್ತುತ ಇಂಟರ್ಷಿಪ್ ಜಾಹಿರಾತು ಸೆಟ್ ಡಿಸೈನಿಂಗ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ .ಚಿತ್ರ ಕಲೆ ಎಂದರೆ ಸಣ್ಣ ವಯಸ್ಸಿನಿಂದಲೂ ಪಂಚ ಪ್ರಾಣ ಶಾಲಾ ದಿನಗಳಲ್ಲಿ ಸಣ್ಣ ಸಣ್ಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದರು ಹೀಗೆ ಪದವಿಯನ್ನು ಮಾಡಿ ಮುಗಿಸಿದ ಬಾಲ್ಯದಿಂದಲೇ ಕಲೆನಾ ಬೆಳೆಸುತ್ತ ಜಗತ್ತಿನ ಅದ್ಭುತ ಚಿತ್ರಗಾರ್ತಿ ಯಾಗುವ ಹಾದಿಯಲ್ಲಿ ನಡೆಯುತ್ತಿದ್ದಾರೆ
ಇಷ್ಟು ಮಾತ್ರ ಅಲ್ಲದೆ ಇವರು ಇಂಟರಿಯೋ ಡಿಸೈನರ್ ಮತ್ತು ವಾಸ್ತು ಸಲಹೆಗಾರ ಮತ್ತು ಮಾನವನ ಭಾವಚಿತ್ರ ಹಾಗೂ ವೃತ್ತಿ ಪರ ಗೊರಂಟಿ (ಮೆಹಂದಿ ಡಿಸೈನ್) ಬಿಡಿಸುವುದು ಇವರ ಅಭಿರುಚಿ ಇವರು ಬಿಡಿಸಿದ ಅದೆಷ್ಟೋ ಪ್ರತಿರೂಪಕ್ಕೆ ಜೀವ ಇದೆ ಎನ್ನುವ ಭಾವನೆ ಉಂಟಾಗುತ್ತದೆ ಚಿತ್ರಗಳಿಗೆ ಜೀವ ತುಂಬುವ ಶಕ್ತಿ ಇದೆ ಈ ಪ್ರತಿಭೆಗೆ
ಇಡೀ ಜಗತ್ತೆ ಸಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗಿತ್ತು ಅವಾಗ ಆನ್ಲೈನ್ ನಲ್ಲಿ ನಡೆದ ವಿಶ್ವದ ಅತಿ ದೊಡ್ಡ ಆನ್ಲೈನ್ ಸೃಜನ ಶೀಲತೆ ಕಾರ್ಯಕ್ರಮದಲ್ಲಿ ಇವರ ಪ್ರತಿಭೆ ಪ್ರದರ್ಶಿಸಲು ಒಂದು ದೊಡ್ಡ ವೇದಿಕೆ ಸಿಕ್ಕಿತ್ತು ಮತ್ತು ಇವರ ಕಲಾಕೃತಿಗನ್ನು ಶ್ಲಾಘನೀಯ ಚಿತ್ರ ಕಲಾ ವಿಜೇತ ವರ್ಗ ಕ್ಕೆ ಆಯ್ಕೆ ಯಾಗಿರುವುದು ಹೆಮ್ಮೆಯ ವಿಷಯ. ನವಂಬರ್ 7ರಂದು ನಡೆದ ಈ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ದೇಶಗಳು ಮತ್ತು 10,000 ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಇವರಿಗೆ ಇವರ ಮೇಲಿರುವ ನಂಬಿಕೆ, ಸ್ವಾಭಿಮಾನ, ಛಲ ಇವರಿಗೆ ಸಾಧನೆಯ ಹಾದಿಯಲ್ಲಿ ನಡೆಯುಲು ಸಾಧ್ಯವಾಯಿತು. ತಂದೆ ತಾಯಿ ಮತ್ತು ಫ್ಯಾಮಿಲಿ ಯ ಸಂಪೂರ್ಣ ಪ್ರೋತ್ಸಾಹ ಸಹಕಾರದಿಂದ ಇವರಿಗೆ ಮುನ್ನಡೆಯಲ್ಲೂ ಮತ್ತಷ್ಟು ಸ್ಫೂರ್ತಿ ಸಿಕ್ಕಿತ್ತು.
ಇವರ ಕನಸಿನಂತೆ ದೊಡ್ಡ ಆರ್ಟಿಸ್ಟ್ ಅಂದರೆ ಭಾರತದ ಹೆಸರುವಾಸಿ ಆರ್ಟಿಸ್ಟ್ ಆಗುವ ಕನಸು ನನಸಾಗಲಿ ದೊಡ್ಡ ಸಾಧನೆ ಮಾಡುವಂತಾಗಲಿ ಎಂದು ತುಳುನಾಡಿನ ದೈವ ದೇವರಲ್ಲಿ ಪ್ರತಿಸುವ ಮತ್ತು ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುವ.
✍️ ಬರಹ : ಪ್ರಶಾಂತ್ ಅಂಚನ್ ಮಸ್ಕತ್ತ್