ಮಂಗಳೂರು: ಇತಿಹಾಸದಲ್ಲಿ ಎಲ್ಲೂ ಕೋಟಿ ಚೆನ್ನಯ್ಯರ ಮೂಲಸ್ಥಾನ ಗೆಜ್ಜೆಗಿರಿ ಎಂದು ಸಂಶೋಧಕರು ಉಲ್ಲೇಖಿಸಿಲ್ಲ,ಎಂದು ನಗರದಲ್ಲಿ ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಹರಿಕ್ರಷ್ಣ ಬಂಟ್ವಾಳ್ ರವರು ಹೇಳಿದ್ದಾರೆ.
ಆದ್ದರಿಂದ ಪಡುಮಲೆಯಲ್ಲಿರುವ ನಿಜವಾದ ಮೂಲಸ್ಥಾನ ಅಭಿವೃದ್ಧಿಪಡಿಸುವ ಕೆಲಸ ಭರದಿಂದ ಸಾಗುತ್ತಿದ್ದು, ಮುಂಬರುವ ಜನವರಿ 14 ರಂದು ಪಡುಮಲೆಯಲ್ಲಿ ಕೋಟಿಚೆನ್ನಯ್ಯ ಜನ್ಮಸ್ಥಾನ ಅಭಿವೃದ್ಧಿ ಸಂಚಯನ ಸೇವಾ ಟ್ರಸ್ಟ್ ನ ಕಚೇರಿ ಉದ್ಘಾಟನೆಗೊಳ್ಳಲಿದೆ ಅಂತಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಅಷ್ಟಮಂಗಲದ ಪ್ರಶ್ನೆಯ ಸಂದರ್ಭ ನೀಡಲಾದ ಆದೇಶದಂತೆ ನಮ್ಮ ಕೆಲಸ ಕಾರ್ಯಗಳು ಸಾಗುತ್ತಿದ್ದು, ಐದು ಶತಮಾನಗಳಿಂದ ಕತ್ತಲಲ್ಲಿರುವ ಕೋಟಿ ಚೆನ್ನಯ್ಯರ ಮೂಲಸ್ಥಾನ ಬೆಳಕಿಗೆ ತರುವ ಕೆಲಸ ನಡೆಯುತ್ತಿದೆ.
ಈಗಾಗಲೇ ದೇಯಿ ಬೈದೆತಿ ಸಮಾಧಿ ಸ್ಥಳದ ಜೀರ್ಣೋದ್ಧಾರ ಕಾರ್ಯ ಮುಗಿದಿದೆ ಎಂದರು. ಅಲ್ಲದೇ, ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ಮೂಲಸ್ಥಾನವಿದೆ ಅನ್ನೋದು ಸರಿಯಾದ ವಾದವಿಲ್ಲ. ಅದಕ್ಕೆ ಪೂರಕ ಕುರುಹುಗಳಾಗಲೀ, ಐತಿಹ್ಯಗಳಾಗಲೀ ಇಲ್ಲ. ಅದಕ್ಕೂ ಮಿಕ್ಕಿ ಗೆಜ್ಜೆಗಿರಿ ಟ್ರಸ್ಟ್ ಹೆಸರಲ್ಲಿ ತುಂಡು ಭೂಮಿಯೂ ಇಲ್ಲದಿರುವುದು ಇದು ಬಿಲ್ಲವ ಸಮುದಾಯಕ್ಕೆ ಮಾಡಿದ ಮೋಸವಾಗಿದೆ, ಇದು ಸಾರ್ವಜನಿಕರ ಹಣ, ತನಿಖೆಯಾಗಲಿ ಎಂದರು. ಸುದ್ದಿಗೋಷ್ಟಿಯಲ್ಲಿ ಆಡಳಿತ ಮೊಕ್ತೇಸರ ವಿನೋದ್ ಆಳ್ವ, ರುಕ್ಮಯ ಪೂಜಾರಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.