ವಾಷಿಂಗ್ಟನ್:- ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇಎಮೋಜಿಗಳನ್ನು ( Emoji can be used) ಬಳಸಲು ವಾಟ್ಸಪ್ ಅನುಮತಿ ನೀಡಿದೆ.
ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲುಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಈ ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರುವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ.
ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.
ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂಪರೀಕ್ಷೆಯಲ್ಲಿದೆ.