ಕೋಟ : ಬಿಲ್ಲವ, ಈಡಿಗ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಈಗಾಗಲೇ ನಾರಾಯಣಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದೆ. ಆದರೆ ಹೆಚ್ಚಿನ ಅನುದಾನ ಹಾಗೂ ಸಮಾಜ ಬಾಂಧವರಿಗೆ ನಿಗಮದ ನಿರ್ದೇಶಕರಾಗಿ ಪ್ರಾತಿನಿಧ್ಯ ಸಿಗುವಂತಾಗಲುನಾರಾಯಣಗುರು ಬಿಲ್ಲವ ನಿಗಮ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದೆ. ನಾನು ಹಾಗೂ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿಪ್ರತಿನಿಧಿಸುವ ಬಿಲ್ಲವ ಸಮಾಜದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಬಿಲ್ಲವ ಅಭಿವೃದ್ಧಿ ನಿಗಮದ ಅಗತ್ಯತೆ ಕುರಿತು ಮನವರಿಕೆಮಾಡಿದ್ದು ಮುಖ್ಯಮಂತ್ರಿಗಳು ಶೀಘ್ರದಲ್ಲಿ ಬಿಲ್ಲವ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಲಿದ್ದಾರೆ ಎಂದು ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ರವಿವಾರ ಸಾಸ್ತಾನದಲ್ಲಿ ಜರಗಿದ ಬಿಲ್ಲವ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದರು.
ನಾರಾಯಣ ಗುರುಗಳ ಹೆಸರಲ್ಲಿ ವಸತಿ ಶಾಲೆ, ಕೋಟಿ ಚೆನ್ನಯ್ಯ ಹೆಸರಲ್ಲಿ ಸೈನಿಕ ತರಬೇತಿ ಶಾಲೆ ಸ್ಥಾಪಿಸುವ ಮೂಲಕ ಬಿಲ್ಲವಸಮಾಜಕ್ಕೆ ಸಾಕಷ್ಟು ಗೌರವವನ್ನು ನೀಡಲಾಗಿದೆ. ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆನೀಡಲಾಗುವುದು ಎಂದರು.