TOP STORIES:

FOLLOW US

ಉಳ್ಳಾಲದಲ್ಲೋರ್ವ ಸಂಸ್ಕೃತಿಯ ಹರಿಕಾರ ಅರುಣ್ ಉಳ್ಳಾಲ್


ಸಂಸ್ಕೃತಿ ಸರದಾರ-ಸಂಸ್ಕಾರದ ಆಗರ ಅರುಣ್ ಉಳ್ಳಾಲ್

ಸಾಧನೆ ಎಂದರೆ ತಪಸ್ಸು, ಯಶಸ್ಸಿಗೆ ಯಾವುದೇ ನಿರ್ದಿಷ್ಟ ಅಂಕೆಯ ಮೆಟ್ಟಿಲುಗಳಿಲ್ಲ.

ಸಾಧನೆಯ ಶಿಖರವನ್ನೇರಲು ನಿತ್ಯ ನಿರಂತರವಾದ ತಪಸ್ಸು ಅತ್ಯಗತ್ಯ. ಪ್ರಜ್ವಲಿಸುವ ದೀಪದ ಬೆಳಕು ಜಗಕ್ಕೆಲ್ಲ ಪಸರಿಸಿ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸಿ ಸರ್ವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ*. ಇದಕ್ಕೆ ಸಾಕ್ಷಾತ್ ನಿದರ್ಶನ ಬಹುಮುಖ ಪ್ರತಿಭೆ, ಧಾರ್ಮಿಕ ಹಿತಚಿಂತಕ, ಉಪನ್ಯಾಸಕ,ಸಾಮಾಜಿಕ ಸಂಶೋಧಕ ಧರ್ಮಪ್ರವರ್ತಕ, ಧರ್ಮಪ್ರಚಾರಕ, ನಿರೂಪಕ,ವಿದ್ವಾಂಸ,ಖ್ಯಾತ ಬರಹಗಾರ ನೈತಿಕ ನೆಲೆಯ ಮಾರ್ಗದರ್ಶಕ, ಆಧ್ಯಾತ್ಮಿಕಚಿಂತಕ, ಸುಶಿಕ್ಷಿತ, ಸುಶೀಲ, ಗುಣ ಸಂಪನ್ನ,ವಿಮರ್ಶಕ, ಸಜ್ಜನ -ಸದ್ಗುಣ ,ನಿಸ್ವಾರ್ಥ ಸಮಾಜಸೇವಕ, ಪ್ರತಿಭಾವಂತ, ನೇರನುಡಿ, ಧೀಮಂತನಾಯಕ, ಶೀಲವಂತ ,ಗುಣವಂತ,
ತುಳುನಾಡಿನ ಕಡಲ ಸೀಮೆಯ ಅಬ್ಬಕ್ಕ ರಾಣಿ ಊರಿನಲ್ಲಿ ಮಿಂಚುವ ಅಪರೂಪ ವ್ಯಕ್ತಿತ್ವದ ಸೇವಾ ಮಾಣಿಕ್ಯ, ಹೆಮ್ಮೆಯ ಬಹುರಂಗ ಸಾಧಕ ಅರುಣ್ ಉಳ್ಳಾಲ್

ದಕ್ಷಿಣ ಕನ್ನಡದ ಉಳ್ಳಾಲ ಗ್ರಾಮದ ತೊಕ್ಕೊಟ್ಟು ನಿವಾಸಿಯಾಗಿರುವ ಬಿ. ಎಸ್. ಎನ್. ಎಲ್ ಉದ್ಯೋಗಿ ಶ್ರೀನಾಗೇಶ್ ತೊಕ್ಕೊಟ್ಟು ಮತ್ತು ಶ್ರೀಮತಿ ದಿವ್ಯಾ ನಾಗೇಶ್ ದಂಪತಿಗಳ ಇರ್ವರು ಮಕ್ಕಳಲ್ಲಿ ಹಿರಿಯರಾದ ಅರುಣ್ ಉಳ್ಳಾಲ್ ಇವರು ತೊಕ್ಕೊಟ್ಟಿನ ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಸಮೂಹ ಸಂಸ್ಥೆಗಳಲ್ಲಿ ಪದವಿ ಪೂರ್ವವರೆಗಿನ ಶಿಕ್ಷಣ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ ಪದವಿ, ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ ಸ್ನಾತಕೋತರ ಪದವಿ,
ಬಳ್ಳಾರಿಯ ಹಂಪಿ ವಿಶ್ವ ವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯ ಎಂ.ಫಿಲ್ ಪದವಿ, ದೆಹಲಿ ಯು.ಜಿ.ಸಿ ಯಿಂದ ರಾಷ್ಟ್ರಮಾನ್ಯತೆಯ ಎನ್.ಇ.ಟಿ ಉನ್ನತ ಪದವಿಗಳ ವ್ಯಾಸಂಗ ಮಾಡಿ ವಿದ್ಯೆ ಎಂಬ ಜ್ಞಾನ ಬಂಡಾರವನ್ನು
ಮುಡಿಗೇರಿಸಿಗೊಂಡ ಪ್ರವೀಣರು,ಮುಂದೆ ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಕಾಲೇಜಿನಲ್ಲಿ ಸತತ ಒಂಬತ್ತು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಪ್ರಸ್ತುತ ತಲಪಾಡಿ ಕಿನ್ಯದ ಶ್ರೀ ಶಾರದಾ ವಿದ್ಯಾನಿಕೇತನ ಪದವಿ ಕಾಲೇಜಿನ ತರಗತಿಯ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಪಿ.ಹೆಚ್.ಡಿ ನಲ್ಲಿ ಭಗವತಿ ಆರಾಧನೆ ಸಾಂಸ್ಕೃತಿಕ ಅಧ್ಯಯನ ವಿಷಯದಡಿ ಪ್ರೊ.ಆರ್.ನಾಗಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಪ್ರಬುದ್ಧ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿರುವ ಸಂಶೋಧಕರಾಗಿದ್ದಾರೆ, ಇನ್ನು ಕೆಲವೇ ಕಾಲಾವಧಿಯಲ್ಲಿ ಅತ್ಯುನ್ನತವಾದ ಡಾಕ್ಟರೇಟ್ ಪದವಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದ್ದಾರೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪೂರ್ವಜರ ಗಾದೆ ಮಾತಿನಂತೆ ಅರುಣ್ ಉಳ್ಳಾಲ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಜಾನಪದ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದು, ಪದ್ಮಶ್ರೀ ಪದ್ಮಭೂಷಣ ಡಾ. ಜೇಸುದಾಸ್ ಬಳಗದ ಗಾನ ವಿದ್ವಾನ್ ಶ್ರೀ ವೆಂಕಟಕೃಷ್ಣ ಭಟ್ ರವರ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿ. ಇಂದಿನ ಯುವ ಪೀಳಿಗೆಯ ತರುಣನಾದರೂ ಪುಸ್ತಕ ,ಗ್ರಂಥಗಳ ಕಡೆಗೆ ಮುಖಮಾಡಿ ಸತತ ಆಳವಾಗಿ ಅಧ್ಯಯನ ಮಾಡಿ ತನ್ನನ್ನು ತಾನು ಸಾಹಿತ್ಯ ರಚನೆಯಲ್ಲಿ ಸಮರ್ಥನನ್ನಾಗಿ ತೊಡಗಿಸಿ ಕೊಂಡು ತುಳು-ಕನ್ನಡ ಮಾತ್ರವಲ್ಲದೆ ಸ್ಥಳೀಯ ಮಲಯಾಳಂ ಭಾಷೆಯಲ್ಲೂ ಅತ್ಯಾಕರ್ಷಕವಾಗಿ ಛಂದೋಬದ್ಧವಾಗಿ ಬರೆಯುವ ಪ್ರಬುದ್ಧ ಪಾಂಡಿತ್ಯವುಳ್ಳವರು.ಭಕ್ತಿಗೀತೆ, ಭಾವಗೀತೆ ನಾಡಿನ ವಿದ್ವಾಂಸರಿಂದ ಪ್ರಶಂಸಿಸಿದ ಅರುಣೋದಯ ಇವರ ಪ್ರಥಮ ಕವನ ಸಂಕಲನ. ಪತ್ತಬತಾರೊಲು(ದಶಾವತಾರಂ) ಎಂಬ ಭರತನಾಟ್ಯ ರೂಪಕ ಕಾರ್ಣಿಕೊದ ಸಿರಿದೇವಿ ಕಿಸಾಗೋತಮಿ, ಯೇಸುಕೊರಿ ತೀರ್ಪು, ತುಳುನಾಡ ಅಬ್ಬಕ್ಕ, ಬ್ರಹ್ಮಶ್ರೀ ನಾರಾಯಣ ಗುರು ಮುಂತಾದ ಶಾಸ್ತ್ರಬದ್ಧ ತುಳು ನಾಟ್ಯರೂಪಕಗಳು.”ಬ್ರಹ್ಮಶ್ರೀ ನಾರಾಯಣ ಗುರು” ತುಳು ನಾಟ್ಯ ರೂಪಕ ‌ಶ್ರೀಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಮೊದಲನೇ ದಿನದಂದು ಧಾರ್ಮಿಕ ಮತ್ತು ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಯಶ್ವಸಿಯಾಗಿ ಪ್ರದರ್ಶನ ಕಂಡು ಸಾವಿರಾರು ಸಭಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜನನಿ ಜನ್ಮಭೂಮಿಶ್ಚ ಶ್ರೀಹರಿ ದಶವತಾರಂ, ಕರ್ನಾಟಕ ದರ್ಶನ ಸುಮಾರ್ತ ಕಥನ ,ಜ್ಞಾನನಿಧಿ ಶ್ರೀರಾಮ, ಒಂದು ಮರದ ಕಥೆ, ಶ್ರೀಕೃಷ್ಣಚರಿತಾಮೃತಂ, ನೆರೆಯವನು ಶ್ರೀದೇವಿ ಲೀಲಾಮೃತ ಜೀಮೂತವಾಹನ ಇತ್ಯಾದಿ ಕನ್ನಡ ನಾಟ್ಯ ರೂಪಕಗಳನ್ನು ರಚಿಸಿದ್ದು ವಿವಿಧ ನಾಟ್ಯ ಸಂಸ್ಥೆಗಳಿಂದ ನಾಡಿನಾದ್ಯಂತ ವೇದಿಕೆಗಳಲ್ಲೂ ಪ್ರದರ್ಶನ ಕಂಡಿದೆ. ವೀರರಾಣಿಅಬ್ಬಕ್ಕ, ಮರೆಯಬಾರದ ಸತ್ಯ ಸುರಕ್ಷಾ ಪೆಟ್ಟಿಗೆ ,ಮಳೆಗಾಗಿ, ದೀಕ್ಷಾ ಪರೀಕ್ಷಾ,ಕನಸಿನ ಭಾರತ, ಬೆಟ್ಟಿಂಗ್ ರಾದ್ಧಾಂತ,ಯೋಧ ಕಥನ ಕಾಲಚಕ್ರ ಬರೆದಿರುವ ನಾಟಕಗಳು ದಿವ್ಯಚೇತನ ,ಸಾಯಿ ನಾಮ ಗೊಂಚಿಲ್,ಉಳ್ಳಾಲ ಶ್ರೀ ಚೀರುಂಭಾ ಭಗವತಿ ದೀಪಾಂಜಲಿ ಸಿಡಿಗೀತೆಗಳಿಗೆ ಗೀತೆ ರಚಿಸಿರುವ ಇವರು ತುಳು ಕನ್ನಡ ಆಲ್ಬಮ್ ಗೀತೆಗಳಿಗೆ ಕಿರುಚಿತ್ರಗಳಿಗೆ ಸಾಹಿತ್ಯ ಬರೆದಿದ್ದಾರೆ. ನಿತ್ಯ ಸುವರ್ಣ ಎಂಬ ಅರ್ಥಪೂರ್ಣ ಸ್ಮರಣ ಸಂಚಿಕೆಯನ್ನು ಸಂಪಾದಿಸಿರುವ ಇವರ ಲೇಖನ, ಕವಿತೆ ,ಕತೆ ವಿಮರ್ಶೆ ಸಂಶೋಧನಾ ಬರಹಗಳು ನಾಡಿನ ವಿವಿಧ ಪತ್ರಿಕಾ ಗ್ರಂಥಗಳಲ್ಲಿ ಮುದ್ರಣಗೊಂಡಿದೆ.ಪ್ರಸಿದ್ದ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಲ್ ಬೈಲ್ ಅವರ ಜನಪ್ರಿಯ ಶಿವದೂತ ಗುಳಿಗೆ ತುಳು ನಾಟಕಕ್ಕೆ ಗೀತ ರಚನೆ ಮಾಡಿದ್ದು ಹಾಗೇ ಬಹುನಿರೀಕ್ಷೆಯ ಹೊಸ ಕನ್ನಡ ಚಲನಚಿತ್ರಕ್ಕೆ ಗೀತಸಾಹಿತ್ಯ ನೀಡಿದ್ದು ಇನ್ನೇನು ಬಿಡುಗಡೆಯಾಗಲಿದೆ. ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ತೊಕ್ಕೊಟ್ಟು ಚರ್ಚಿನ ಶತಮಾನೋತ್ಸವದಲ್ಲಿ ಪ್ರದರ್ಶನ ಕಂಡ ಸಿಪಾಯಿ ಸಂತ ಸೆಬೆಸ್ಟಿಯನ್ ಗೀತನಾಟಕ ,ಶತಮಾನೋತ್ಸವ ಗೀತೆ, ರೋಜಾರಿಯೋ ಚರ್ಚ್ ನ 450ನೇ ವರ್ಷಾಚರಣೆಯ ಶೀರ್ಷಿಕೆ ಗೀತೆ ಅನೇಕ ಶಾಲಾ-ಕಾಲೇಜುಗಳಿಗೆ ಪ್ರಾರ್ಥನಾ ಗೀತೆಗಳನ್ನು ಇವರು ರಚಿಸಿದ್ದು ಅವು ಇಂದಿಗೂ ಪ್ರತಿನಿತ್ಯ ಹಾಡಿ ಜನಮನ್ನಣೆ ಗಳಿಸಿದೆ.

ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಅರುಣ್ ಉಳ್ಳಾಲ್ ಅವರು ಒಂಬತ್ತನೇ ತರಗತಿಯ ಶಿಕ್ಷಣದ ಎಳವೆಯ ಪ್ರಾಯದಲ್ಲಿ ಟಿವಿ ಕ್ಯಾಮೆರಾ ಎದುರು ಮಾತಿನಲ್ಲಿ ಪ್ರಾವೀಣ್ಯತೆ ತೋರಿದವರು, ಇಂದು ವಿವಿಧ ರಾಜ್ಯಮಟ್ಟ, ರಾಷ್ಟ್ರಮಟ್ಟದ ವೇದಿಕೆಯಲ್ಲಿ ಕೀರುತಿ ಪಡೆದ ಹಿರಿಮೆಯ ಗರಿ ಇವರದ್ದಾಗಿದೆ. ಇಲ್ಲಿಯವರೆಗೆ ಒಂದೂವರೆ ಸಾವಿರಕ್ಕಿಂತಲೂ ಮಿಗಿಲಾದ ಕಾರ್ಯಕ್ರಮ ನೀಡಿರುವುದು ವಿಶೇಷಣೀಯ.ಕಿರುಮಟ್ಟ ಸಭೆಯಿಂದ ಹಿಡಿದು ಅಂತರಾಷ್ಟ್ರೀಯ ಬೃಹತ್ ಸಮ್ಮೇಳನವನ್ನು ಸಮರ್ಥರಾಗಿ, ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ವಾಕ್ ಚಾತುರ್ಯತೆಯಿಂದ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಪಡೆದ ಹೆಗ್ಗಳಿಕೆ ಇವರದ್ದು.ತುಮಕೂರಿನ ದಸರಾ ಮಹೋತ್ಸವ, ಮೈಸೂರ್ ಅಬ್ಬಕ್ಕ ಮಹೋತ್ಸವ, ಉಳ್ಳಾಲ ಬೀಚ್ ಉತ್ಸವ, ಕರಾವಳಿ ಉತ್ಸವ,ಅಬ್ಬಕ್ಕ
ಉತ್ಸವದಡಿ ವರ್ಗನೌಕರರ ರಾಜ್ಯ ಸಮ್ಮೇಳನ ಸೂರಜ್ ಕಲಾಸಿರಿ, ಮಂಗಳೂರು ರಾಮಕೃಷ್ಣ ಮಠ ಸಮ್ಮೇಳನ, ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ, ಮಂಗಳೂರು ದಸರಾ, ವಿಶ್ವ ಸಮ್ಮೇಳನ,ತುಳು ಉದ್ಯಾವರ ತುಳು ಉತ್ಸವ, ಅಡ್ಯಾರ್ ವಿಶ್ವ ತುಳು ಸಮ್ಮೇಳನ, ಪಟ್ಟತೂರು ತೀಯಾ ಸಮ್ಮೇಳನ ,ಉಳ್ಳಾಲ ತೀಯರೆ ಕೂಟುಕ್ಕಳಿ, ನಿರ್ವಹಿಸಿದ ಪ್ರಮುಖ ಸಮಾರಂಭಗಳು.
2018ರ ಏಪ್ರಿಲ್ 27ರಂದು ಸಾಗರದಾಚೆಯ ಕೊಲ್ಲಿ ರಾಷ್ಟ್ರ ವಾದ ಕತಾರ್ ಗೆ ಕರ್ನಾಟಕ ಸಂಘದ ಬೃಹತ್ ವಸಂತೋತ್ಸವ ಸಮಾರಂಭಕ್ಕೆ ಪ್ರಧಾನ ನಿರೂಪಕರಾಗಿ ಆಹ್ವಾನಿಸಿ ,ಇವರ ನಿರರ್ಗಳ ಶುದ್ದ ಕನ್ನಡದ ಸಂಭಾಷಣೆಗೆ, ಮನ ಸೋತು ಖ್ಯಾತ ಚಲನಚಿತ್ರ ನಟ ಅನಂತನಾಗ್ ಮತ್ತು ಶ್ರೀಮತಿ ಗಾಯತ್ರಿ ದಂಪತಿಗಳು ಮುಕ್ತಕಂಠದಿಂದ ಸಾರ್ವಜನಿಕವಾಗಿ ಸನ್ಮಾನಿಸಿದ್ದಾರೆ. ಬಂಟ್ಸ್ ಕತಾರ್ ಸಂಸ್ಥೆ ಕತಾರ್ ಆಲ್ ವಕ್ತ್ ನಲ್ಲಿ ಆಯೋಜಿಸಿದ್ದ ಪಟ್ಲ ಸತೀಶ್ ಶೆಟ್ಟಿ ಖ್ಯಾತ ಭಾಗವತರ ಕಾರ್ಯಕ್ರಮಕ್ಕೂ, ದೋಹ ಕತಾರ್ ನ ಇಂಡಿಯನ್ ಕಲ್ಚರ್ ಸೆಂಟರ್ ತಾಳಮದ್ದಳೆಯ ಸಮಾರಂಭದ ನಿರೂಪಣೆಗೆ ದೋಹದ ಐಸಿಸಿ ಅಧ್ಯಕ್ಷೆ ಮಿಲನ್ ಅರುಣ್ ರವರು ಅಭಿಮಾನದಿಂದ ಸನ್ಮಾನಿಸಿದ್ದು ಹತ್ತು ದಿನಗಳ ಕಾಲ ಕತಾರ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದು ತುಳುನಾಡಿನ ಹೆಸರಿನ ಕಂಪನ್ನು ಸಾಗರದಾಚೆಯೂ ವಿದೇಶದಲ್ಲಿ ಹಬ್ಬಿಸಿದ್ದ ಅಂತರಾಷ್ಟ್ರೀಯ ನಿರೂಪಕ.ಮುಂಬೈಯಲ್ಲಿನ ಸಾಫಲ್ಯ ಸೇವಾ ಸಂಘದ ಅಮೃತ ಮಹೋತ್ಸವದ ವಿಜೃಂಭಣೆಯ ಸಮಾರಂಭದ ನಿರೂಪಣೆ ಹಾಗೆ ಮುಂಬೈಯ ತೀಯಾ ಸಮಾಜದ ಅಮೃತ ಮಹೋತ್ಸವದಲ್ಲಿ ವಿಶಿಷ್ಟ ವಿಚಾರೋಪನ್ಯಾಸ ಮೆಚ್ಚುಗೆಗೆ ಪಾತ್ರವಾಗಿದೆ, ಅರುಣ್ ಉಳ್ಳಾಲ್ ಯೂಟ್ಯೂಬ್ ಚಾನೆಲ್ ಸ್ಥಾಪಿಸಿ ಆ ಮೂಲಕ ಆಳವಾದ ಅಧ್ಯಯನ, ಸಂಶೋಧನಾ ಮುಖೇನ ವಿವಿಧ ವಿಭಿನ್ನ ವಿಚಾರಧಾರೆ, ಪ್ರಚಾರ, ಸಂಸ್ಕೃತಿ,ಸಂಸ್ಕಾರದ ಪರಿಪಾಠದ ಜಾಗೃತಿ ಯುವಜನತೆಗೆ ಮೂಡಿಸಿದ್ದಾರೆ.
ಅಬ್ಬಕ ಟಿವಿಯಲ್ಲಿ ಪ್ರತಿವಾರ ತೆರೆಮರೆಯಲ್ಲಿ ಉಳಿದಿರುವ ಪ್ರಾಮಾಣಿಕ ಸಾಧಕರನ್ನು ಪರಿಚಯಿಸುವ ARUN’S WEEKEND ಎಂಬ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಕಂಚಿನ ಸ್ವರಮಾಂತ್ರಿಕ, ಮಾತಿನ ಚಾಣಕ್ಯ

ಅರುಣ್ ಉಳ್ಳಾಲ್ ಅವರು ನಿರೂಪಕರಾಗಿ ಕೈಯಲ್ಲಿ ಮೈಕ್ ಹಿಡಿದರೆ ಕಂಚಿನ ಕಂಠದ ಗಡುಸಾದ ಮಾತಿನಿಂದ ಸ್ಪಷ್ಟ ಉಚ್ಚಾರದ ಶುದ್ಧ ಕನ್ನಡ,ತುಳು ಭಾಷೆ ನುಡಿ ನಿಪುಣತೆಯಿಂದ ಪೇಕ್ಷಕರನ್ನು ಗಾಂಭೀರ್ಯತೆಯಲಿ ತನ್ನಡೆಗೆ ಸೆಳೆದು ಕೊಂಡಿರುವ ಮಾತಿನ ಪ್ರವೀಣ, ಅಪರೂಪದ ಸ್ವರ ಮಾಂತ್ರಿಕ, ಸ್ವರಮಾಣಿಕ್ಯ, ಮಾತಿನ ಚಾಣಕ್ಯ.ನಿರೂಪಕರಾಗಿ ಮಾತಿನ ಕಲಾ ಚಾತುರ್ಯದಿಂದ ಹೊಸ ಛಾಪನ್ನು ಮೂಡಿಸಿ ಜನಸ್ತೋಮವನ್ನು ಲೆಕ್ಕಿಸದೇ ಅರಳು ಹುರಿದಂತೆ ಮಾತಾಡಿ ಸಭಿಕರನ್ನು ದಂಗಾಗಿಸಿ ಅಪಾರ ಮಟ್ಟದ ಅಭಿಮಾನಿಗಳನ್ನು ಗಳಿಸಿರುವ ಶ್ರೇಷ್ಠ ಪ್ರಸಿಧ್ಧ ನಿರೂಪಕರಲ್ಲಿ ಇವರು ಓರ್ವರು.ಶ್ರೀಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮುಖ್ಯ ನಿರೂಪಕರಾಗಿ ತನ್ನ ವಾಕ್ ಚಾತುರ್ಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ನಡೆದ ತಂಬೂರಿ 2020 ಕುಂಪಲದ ಬಾಲಕೃಷ್ಣ ಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ತುಳು ಭಜನೆ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ವಿಶೇಷ ಪ್ರಶಂಸೆಗೆ ಭಾಜನರಾಗಿರುತ್ತಾರೆ.
ಜಾನಪದ, ಧಾರ್ಮಿಕ, ಸಾಹಿತ್ಯ ಸಾಂಸ್ಕೃತಿಕ ವಿಷಯಗಳ ಕುರಿತು ವಿವಿಧ ವೇದಿಕೆಗಳಲ್ಲಿ ನೀಡಿರುವ ಪಾಂಡಿತ್ಯಪೂರ್ಣ ಉಪನ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಡಿಕೆಗೆ ಒಳಪಟ್ಟು ವೇಗದ ಪ್ರಸಾರದಿಂದ ಸಾಮಾಜಿಕವಾಗಿ ಜನಮಾನಸದ ಹೃದಯ ವೈಶ್ಯಾಮ್ಯದೀ ಮೆರೆದು ಶಭಾಷ್ ಗಿರಿಗೆ ಪಾತ್ರರಾಗಿದ್ದಾರೆ. ರೂಪಕಗಳಲ್ಲಿ
ಕಥೆ, ಸಾಹಿತ್ಯ, ಸಂಭಾಷಣೆಗೆ ಧ್ವನಿ ನೀಡಿರುತ್ತಾರೆ, ಐವತ್ತಕ್ಕೂ ಅಧಿಕ ಕವಿಗೋಷ್ಠಿ, ಕಥಾಗೋಷ್ಠಿ, ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದು ಮಂಗಳೂರು, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮಾಧ್ಯಮಗಳ ನಿರೂಪಕರಾಗಿದ್ದು ಸಂಪನ್ಮೂಲ ವ್ಯಕ್ತಿಯಾಗಿ ನೇರಪ್ರಸಾರದ ವೀಕ್ಷಕ ವಿವರಣಾ ಕಾರನಾಗಿದ್ದು ಸಾಮಾಜಿಕವಾಗಿ ಪ್ರತಿಯೊಬ್ಬರ ಮನೆ ಮನೆಯಲ್ಲೂ ತನು ಮನ ಗೆದ್ದ ಚಿರಪರಿಚಿತರು.ಹಲವು ಬಡವಿದ್ಯಾರ್ಥಿಗಳ ಶುಲ್ಕದ ಬಹುಪಾಲು ಮತ್ತು ಆದಾಯದ ಒಂದು ಪಾಲನ್ನು ಬಡವರ ಮನೆಗಳಿಗೆ ಆಸ್ಪತ್ರೆಗಳಲ್ಲಿರುವ ಬಡರೋಗಿಗಳಿಗೆ, ಅನಾಥ ಆಶ್ರಮಕ್ಕೆ ಅರ್ಪಿಸಿರುವುದು ಶ್ಲಾಘನೀಯ.
ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಮತ್ತು ಆಗಿನ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆದ ಧೈರ್ಯವಂತ.

ನನ್ನೀ ಜೀವನದ ಪುಟದಲಿ ಅಭಿಮಾನದಲ್ಲಿ ಅತೀವ ಅಭಿಮಾನ ಇಟ್ಟು ಕೊಂಡಿರುವ ಅಪರೂಪದ ಅಸಾಧಾರಣ,ಧನ್ಮಾತ್ಮಕ ಚಿಂತನೆಯ ಕ್ರಿಯಾಶೀಲ ಆದರ್ಶವ್ಯಕ್ತಿತ್ವ ಅರುಣ್ ಉಳ್ಳಾಲ್ ಸರ್ ಅವರದ್ದು.ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಮತ್ತು ಯುವವಾಹಿನಿ(ರಿ) ಕೊಲ್ಯ ಘಟಕದಲ್ಲಿ ಒಂದು ವರ್ಷದ ಹಿಂದಿನ ದಿನಗಳಲ್ಲಿ ಪ್ರತಿ ಮಂಗಳವಾರ ರಾತ್ರಿ ಏಳರಿಂದ ಎಂಟು ಘಂಟೆವರೆಗೆ ಹಿಂದೂ ಧರ್ಮ ಶಿಕ್ಷಣ, ಧಾರ್ಮಿಕ ಭಜನಾ ಕಮ್ಮಟ, ಭಜನೆ ತರಬೇತಿಗೆ ಕಾರಣೀ ಭೂತರಾಗಿರುತ್ತಾರೆ ಉಚಿತವಾಗಿ ಭಜನಾ ತರಬೇತಿ ಕೊಟ್ಟು ನೂರಕ್ಕಿಂತಲೂ ಹೆಚ್ಚು ಶಿಬಿರಾರ್ಥಗಳಿಂದ ತುಂಬಿ ತುಳುಕುತ್ತಿದ್ದು ನಾರಾಯಣ ಮಂದಿರದಲ್ಲಿ ಭಕ್ತಿ,ಭಾವ,ಶೃಧ್ಧೆ,
ಮೌನ,ಧ್ಯಾನ, ಶ್ಲೋಕ, ಭಜನೆಗಳಿಂದ ಆವರಿಸಿದ್ದ ಸುಂದರ ಕ್ಷಣ. ಹಿಂದೂ ಸನಾತನ ಧರ್ಮದಲ್ಲಿ ಅಪಾರ ಜ್ಞಾನಭಂಡಾರ ಹೊಂದಿರುವ ಇವರು ಶ್ಲೋಕ,ಭಜನೆಯ ಒಂದೊಂದು ಅಕ್ಷರ,ಪದವನ್ನುಎಳೆ ಎಳೆಯಾಗಿ ಬಿಡಿಸಿ ಹೇಳಿಕೊಟ್ಟು,ಭಜನೆ ಹಿನ್ನಲೆ, ಪುರಾಣ, ಕಥೆ, ಉಪಕಥೆ, ಮಂತ್ರ, ಪೂಜಾವಿಧಿವಿಧಾನ,ತಾಳ, ರಾಗ ಜ್ಞಾನ, ಪಾರಾಯಣ, ಧರ್ಮಚರಿತ್ರೆ, ಧರ್ಮಗ್ರಂಥ ಶಾಸ್ತ್ರ,ಅನುಷ್ಠಾನ ವಿಧಗಳ ಬಗ್ಗೆ ಸುವಿಸ್ತಾರವಾಗಿ ಶಿಕ್ಷಣ ಕೊಟ್ಟು ಶಿಬಿರಾರ್ಥಿಗಳ ಗೌರವ, ಅಭಿಮಾನದೀ ಹೃದಯ ಮನದಲ್ಲಿ ಶೃಂಗರಿಸಿರುವ ಪಾತ್ರ ಅರುಣ್ ಉಳ್ಳಾಲ್ ಸರ್ ಅವರದ್ದು. ಅವರಂತಹ ಧಾರ್ಮಿಕ ಮಾರ್ಗದರ್ಶಕ,ಧರ್ಮ ಶಿಕ್ಷಕರನ್ನಾಗಿ ಪಡೆದಿರುವುದು ಪುಣ್ಯವೇ ಸರಿ.ಇವರ ಮಾತಿನಲ್ಲಿರುವ ಸ್ಪಷ್ಟ ಉಚ್ಚಾರ,ಮೌನ,ಸುಶೀಲ, ಸರಳತೆಯ ಉಡುಪು ,ಸುಶೀಲ,ನೇರನುಡಿ,ಗಂಭೀರ ನಡೆನುಡಿ, ಶಿಷ್ಟಾಚಾರ,ಸುಶ್ರಾವ್ಯಸ್ವರ ಮತ್ತು ಕಂಚಿನ ಗಡುಸಾದ ಸ್ವರದಲ್ಲಿ ಇವರು ವಾಚಿಸುವುದನ್ನು ಕಂಡಾಗ ಅವರ ನಡೆ ನುಡಿ ಸಂಸ್ಕಾರವನ್ನು ನೋಡುವುದು ನಮ್ಮೆಲ್ಲರ ಭಾಗ್ಯವೇ ಸರಿ. ಕೇವಲ ಭಜನೆಯನ್ನು ಶಿಬಿರಾರ್ಥಿಗಳಿಗೆ ಹೇಳಿಕೊಡದೆ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ಶಿಸ್ತು ,ಸಂಯಮವನ್ನು ಕಾಪಾಡಿಕೊಳ್ಳುವ ಸಾಕಾರಮೂರ್ತಿ. ಭಜನೆ ಎಂದರೆ ಭಜಿಸು,ಜಪಿಸು
ತನ್ನನ್ನು ತಾನು ದೇವರಲ್ಲಿ ಲೀನವಾಗಿ ತೊಡಗಿಸಿಕೊಳ್ಳುವ ಎಕೈಕ ಮಾರ್ಗ.ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಏಕೆ ಹೋಗಬೇಕು? ಹೇಗೆ ಕೈ ಮುಗಿಯಬೇಕು? ನಿಂತುಕೊಳ್ಳುವ ಭಂಗಿ,ದೇವಾಲಯಕ್ಕೆ ಹೋಗುವ ಧ್ಯೇಯ ಇತ್ಯಾದಿ ವಿಷಯಗಳನ್ನು ಪರಿಪರಿಯಾಗಿ ಬಿಡಿಸಿ ಹೇಳುವ ಜಾಣ್ಮೆ ಇವರದ್ದು. ಧಾರ್ಮಿಕ ಶಿಕ್ಷಣದ ಧ್ಯೇಯ, ಉದ್ದೇಶ ಏನೆಂದರೆ ಸಮಾಜದಲ್ಲಿ ಪ್ರತಿಯೊಬ್ಬನು ಧಾರ್ಮಿಕವಾಗಿ ಸುಶಿಕ್ಷಿತನಾಗಿರಬೇಕು.ಕೊನೆ ಪಕ್ಷ ಹಿಂದೂ ಸನಾತನ ಧರ್ಮದ ಪ್ರಾಥಮಿಕ ಅರಿವಾದರೂ ನಮ್ಮಲ್ಲಿ ಇರಬೇಕು ಎನ್ನುವ ಆಶಯ ಇವರದ್ದು. ಶಬ್ದಕೋಶದ ಜ್ಞಾನ ಭಂಡಾರವನ್ನೇ ಹೊಂದಿರುವ ಇವರು ಉಚಿತವಾಗಿ ತರಬೇತಿ ಕೊಟ್ಟು ಏಕತಾ ಭಾವನೆಯಲ್ಲಿ ಮುನ್ನಡೆಸುವ ಗುರು, ಎಳೆಯರಿಂದ ಹಿಡಿದು ಹಿರಿಯ ವಯಸ್ಸಿನ ನಿರ್ಬಂಧವಿಲ್ಲದೆ ಇವರ ಮಾತನ್ನು ಆಲಿಸುತ್ತಾ ಪದ್ಮಾಸನದಲ್ಲಿ ಕುಳಿತು ತರಬೇತಿ ಪಡೆಯುವುದೇ ಸೋಜಿಗ ಮತ್ತು ಗೌರವನೀಯ.ಹಾಗೇ ಕಳೆದ ನಾಲ್ಕು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ನಿರಂತರವಾಗಿ ನೂರ ಇಪ್ಪತ್ತು ವಿದ್ಯಾರ್ಥಿಗಳಿಗೆ ಉಚಿತ ಧರ್ಮ ಶಿಕ್ಷಣ ತರಗತಿ ಮತ್ತು 2019 ರಲ್ಲಿ ಬಂದ್ಯೋಡ್ ಕುಣಿತ ಭಜನಾ ತರಗತಿಗಳನ್ನು ನಡೆಸಿಕೊಂಡು ತನ್ನ ಅಮೂಲ್ಯ ಸಮಯವನ್ನು ಸದ್ದುದ್ದೇಶಕ್ಕಾಗಿ ವಿನಿಯೋಗಿಸಿಕೊಂಡು ಬಂದ ಮಹನೀಯರು.

ಸಂಸ್ಕೃತಿ ಗೃಹ ಪ್ರವೇಶ

ತೊಕ್ಕೊಟ್ಟು ಪರಿಸರದಲ್ಲಿ ನೂತನಗೃಹದ ಗೃಹ ಪ್ರವೇಶ ಮಾಡಿ ನವಿರಾದ ವಿಶಿಷ್ಟ ನಾಮಧೇಯ ಇಟ್ಟಿರುವ ಸಂಸ್ಕೃತಿ ಸರದಾರ. ಗೃಹದ ವೈಶಿಷ್ಟ್ಯ ಏನೆಂದರೆ ಸಂಸ್ಕೃತಿ ಎಂಬ ಪದವನ್ನು ತುಳು ಲಿಪಿಯಲ್ಲಿ ಮುದ್ರಿಸಿರುವುದು, ಧರ್ಮ ಪ್ರಚಾರಕ, ಧರ್ಮ ಪ್ರವರ್ತಕ ,ಧಾರ್ಮಿಕ ಭಜನೆಯ ಗುರು,ವಿದ್ವಾಂಸ,ಬರಹಗಾರ ಧಾರ್ಮಿಕ ಉಪನ್ಯಾಸ ನೀಡಿರುವ ಇವರು ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಕೇವಲ ಮಾತಿನಲ್ಲಿ, ಭಾಷಣದಲ್ಲಿ ಹೇಳಿಕೊಳ್ಳದೆ ತಮ್ಮ ಕೃತಿಯಲ್ಲಿ ಬರೆದು ತೋರಿಸಿಕೊಟ್ಟಂತವರು. ಇವರು ಈಗಿನ ಯುವಜನಾಂಗದ ಮನೋಸ್ಥಿತಿಗೆ ಸಿಲುಕದೆ ಅಪ್ಪಟ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅಜಾತಶತ್ರು.ಪ್ರಸ್ತುತ ಡಿಜೆ ಕಾಲದಲ್ಲಿರುವ ಮದ್ಯಪಾನ ಹಾಡು-ಕುಣಿತ ಮೋಜು-ಮಸ್ತಿ ಮಾಡುವ ಯುವಜನತೆಯ ನಡುವೆ ದಿನವಿಡಿ ರಾತ್ರಿ ಧಾರ್ಮಿಕ ವಿಧಿವಿಧಾನ ಆಚರಿಸಿ, ಕಲಿಯುಗದಲೀ ಪರಿವರ್ತನೆ ಬಯಸುವ ಧಾರ್ಮಿಕ ಕ್ರಾಂತಿಕಾರಿ ಯುವಕ. ಸುಂದರವಾದ ಗೃಹ “ಸಂಸ್ಕೃತಿ”ಗೆ ಶೋಭೆ ತರಲು ಹಿತ ಚಿಂತಕರಾದ, ತುಳುನಾಡಿನ ಸಂಸ್ಕೃತಿ ಆಚಾರ-ವಿಚಾರವನ್ನು ಒಳಗೊಂಡ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮಾನ್ಯ ಅಧ್ಯಕ್ಷರಾದ ತುಳುವಬೊಳ್ಳಿ ಶ್ರೀ ದಯಾನಂದ್ ಕತ್ತಲ್ ಸಾರ್ ಅವರು ಆಗಮಿಸಿ ಗೃಹಪ್ರವೇಶ ಬೌದ್ಧಿಕ್ ವಿಚಾರಧಾರೆ ಪ್ರಸ್ತುತ ಪಡಿಸಿದ್ದು ಹಾಗೇ ಸಂದೇಶ್ ಕುಮಾರ್ ಅವರ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ, ಮಂಗಳೂರು ಭಜನಾ ತಂಡದವರಿಂದ ಸುಶ್ರಾವ್ಯವಾದ ಭಜನೆ ಹಾಡಿಸಿ ಅಂದಿನ ದಿನ ಅತಿಥಿಗಳಿಗೆ ಅವಸ್ಮರಣೀಯ ದಿನವನ್ನಾಗಿಸಿದ್ದಾರೆ. ಸಂಸ್ಕೃತಿ ಮನೆಗೆ ಅತಿಥಿಗಳ ಪ್ರಬಲ ಅತಿಥಿಗಳ ವಿದ್ವಾನ್ ವಿದ್ವಾಂಸರು, ಅತಿಥಿಗಳು, ನೆರೆಹೊರೆಯವರು, ಸಂಬಂಧಿಗಳು, ವಿದ್ಯಾರ್ಥಿಗಳು, ಪರಿಚಯಸ್ತರು ಹೀಗೆ ಬಂಧು ಮಿತ್ರರ ಮಹಾಪೂರವೇ ಹರಿದು ಬಂದಿತ್ತು.ಸಂಜೆ 5.30 ರಿಂದ ಸಾಮೂಹಿಕ ಸಂಕೀರ್ತನೆ ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ರಾತ್ರಿ 7:00 ರಿಂದ ಅವರೇ ತರಬೇತಿ ಕೊಟ್ಟ ಅಂಬಾವನ ಧರ್ಮ ಶಿಕ್ಷಣ ಕೇಂದ್ರ ಕೃಷ್ಣನಗರ ತೊಕ್ಕೊಟ್ಟು ಎಳೆಯರ ಆಕರ್ಷಕ ಕುಣಿತ ಭಜನೆ, ಸುಂದರವಾದ ಭಕ್ತಿ ಪೂರ್ವಕವಾದ ಧಾರ್ಮಿಕ ಹಿತಚಿಂತನೆಯ ಏಕತಾ ಮನೋಭಾವದ ಸಮವಸ್ತ್ರ ಧರಿಸಿ ಮಧ್ಯೆ ದೀಪವನ್ನಿಟ್ಟು ಕುಣಿತಾ ಭಜನೆಯನ್ನು ಪ್ರಾರಂಭಿಸಿದ ಅಂದವೇ ವಿಶಿಷ್ಟ.ಮಧುರ ಸುಮಧುರವಾದ ಭಕ್ತಿಸಿಂಚನದ ಸುಸಂದರ್ಭ ಇಂದಿನ ಕಾಲಘಟ್ಟಕ್ಕೆ ಮಾದರಿಯಾಗಲಿ.
ನಗು ಎಂಬುದು ಮನುಷ್ಯನ ಆಯಸ್ಸು, ಆರೋಗ್ಯವನ್ನು ವೃದ್ಧಿಸುವ ಔಷಧಿ ಇದ್ದಂತೆ. ಅನಂತರದ ಮನರಂಜನೆ ಕಾರ್ಯಕ್ರಮ” ನಗುವಿಗೆ ಸವಾಲ್” ಅಂದಿನ ದಿನ ನಗುವಿಗೆ ಔಷಧಿ ಆಗಿ ಆಗಮಿಸಿದ ಗೀತಾ ಸಾಹಿತ್ಯ ಸಂಭ್ರಮ ಖ್ಯಾತಿಯ ತಮಿಳುನಾಡಿನ ಜನಪ್ರಿಯ ವಾಗ್ಮಿ ಶ್ರೀ ಕಲ್ಲಡ್ಕ ವಿಠಲ್ ನಾಯಕ್ ಅವರು ರಸ ಸಂದೇಶ ಕಾರ್ಯಕ್ರಮವನ್ನಿತ್ತು ಮನರಂಜಿಸಿ ವಿಶೇಷವಾಗಿ ಎಲ್ಲಾ ಪ್ರೇಕ್ಷಕರನ್ನು ನಗೆ ಸಾಗರದಲ್ಲಿ ತೇಲಾಡಿಸಿ, ರಂಜಿಸಿರುವುದು ಅವಿಸ್ಮರಣೀಯ. ಅರುಣ್ ರವರ ಗೃಹಪ್ರವೇಶಕ್ಕೆ ಎಲ್ಲಾ ಜಾತಿ, ಧರ್ಮಗಳ ಬೇಧವಿಲ್ಲದೇ ಆಗಮಿಸಿರುವ ಅತಿಥಿಗಳಿಗೆ ಊಟ ಉಪಚಾರಕ್ಕಿಂತ ಅರುಣ್ ಅವರ ಆತ್ಮೀಯತೆಯ ಉಪಚಾರವೇ ಅತೀವ ಪ್ರಿಯವೆನಿಸಿರುವುದು ಶ್ಲಾಘನೀಯ. ಅರುಣ್ ಉಳ್ಳಾಲ್ ಅವರ ಸಂಸ್ಕೃತಿ ಗೃಹ ಹೊಸ ಇತಿಹಾಸ ಸೃಷ್ಟಿಸಿರುವುದನ್ನು ಯುವಜನೆತೆ ನಿದರ್ಶನವನ್ನಾಗಿಸಿ ಇನ್ನಾದರೂ ಎಚ್ಚೆತ್ತುಕೊಂಡು ಕಲಿಯುಗದ ಅವೇಗದ ಪಾಶ್ಚಾತ್ ಬದಲಾವಣೆಯನ್ನು ಮಿಥ್ಯಗೊಳಿಸಿ ಕಡ್ಡಾಯವಾಗಿ ಧಾರ್ಮಿಕ, ಆಚಾರ-ವಿಚಾರಗಳ ಚಿಂತನ- ಮಂಥನ ಮಾಡುತ್ತಾ ಪ್ರೋತ್ಸಾಹ ಕೊಡೋಣ.

ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರಬಂಧ ಪ್ರಶಸ್ತಿ 2009 ,ಮಂಗಳೂರು ವಿಶ್ವ ವಿದ್ಯಾನಿಲಯ ವರ್ಷದ ಪ್ರತಿಭಾ ಪುರಸ್ಕಾರ 2011, ತೊಕ್ಕೊಟ್ಟು ಕೋಟಿ ಚೆನ್ನಯ ಗೌರವ ಪುರಸ್ಕಾರ 2019, ಮಡಿಲು ಸಮ್ಮಾನ್ ಪ್ರಶಸ್ತಿ 2019 ಮತ್ತು ಇತ್ತೀಚೆಗಷ್ಟೇ ಕಲ್ಲಚ್ಚು ವಿಶಂತಿ ಪುರಸ್ಕಾರ 2020 ಪ್ರಶಸ್ತಿ ವಿಜೇತರಾಗಿರುವ ಅರುಣ್ ಉಳ್ಳಾಲ್ ರವರು ಅಧ್ಭುತ,ಅನನ್ಯ ಸಾಧಕರೆನ್ನುವುದರಲ್ಲಿ ಎರಡು ಮಾತಿಲ್ಲ. ಸತತವಾಗಿ ಇಷ್ಟೆಲ್ಲಾ ಬಹುರಂಗದ ಸಾಧನೆಯ ಉತ್ತುಂಗದಲ್ಲಿ ಜನಪ್ರಿಯತೆ ಗಳಿಸಿದ್ದರೂ ಸರಳತೆ, ವಿಧೇಯತೆ, ಗುರು ಹಿರಿಯರಲ್ಲಿ ತೋರುವ ಗೌರವ, ವಿನಯತೆ, ಸರಳ ಸಜ್ಜನಿಕೆ, ಸರ್ವಗುಣ ಸಂಪನ್ನ, ಸರ್ವ ಧರ್ಮ ಪ್ರಿಯರಾಗಿರುವ ಇವರು ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎಂಬ ಮಾತಿಗೆ ಅತ್ಯುತ್ತಮ ನಿದರ್ಶನ. ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳ ಅನಾವರಣವಾಗಲಿ. ಇವರ ಸಂಸ್ಕೃತಿ-ಸಂಸ್ಕಾರದ ಆದರ್ಶ ಜೀವನದ ಮೌಲ್ಯಗಳು, ನೈತಿಕತೆ, ಧನಾತ್ಮಕ ಕ್ರಿಯಾಶೀಲ ವ್ಯಕ್ತಿತ್ವ, ಇವರ ಸಾಧನೆಗಳು, ಜೀವನ ಚರಿತ್ರೆ ಯುವಪೀಳಿಗೆಗೆ ಮಾದರಿಯಾಗಲಿ, ದಾರಿದೀಪವಾಗಲಿ ಎಂದು ಆಶಿಸೋಣ. ಶ್ರೀದೇವಿ ಕೃಪಾಕಟಾಕ್ಷ ಸದಾ ಇವರ ಮೇಲಿರಲಿ ಎಂದೂ ಹಾರೈಸುತ್ತ ಸಕಲಾ ಕಲಾವಲ್ಲಭ ರಿಗೆ ಪದಪುಂಜದೀ ಸಿಂಚನಗೈದ ಗೌರವದ ನನ್ನೀ ನುಡಿಮಾಲೆ ಅರ್ಪಣೆಯಾಗಲಿ.

ಶ್ರೀಮತಿ ಅರ್ಚನ ಎಂ ಬಂಗೇರ ಕುಂಪಲ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »