ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇ ವರ್ಷದ ಬೆಳ್ಳಿ ಹಬ್ಬಕ್ಕೆ ರೇಣುಕ ಮಠದ ಸೋಲೂರು ಶ್ರೀ ವಿಖ್ಯಾತನಂದಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ ಆರ್ಶಿವಚನ ಮಾಡಲಿದ್ದಾರೆ ಹಾಗೂ ಎಪ್ರಿಲ್ 22 ರಂದು ಬೆಳಿಗ್ಗೆಯಿಂದಸಾಯಂಕಾಲದ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ತಿಳಿಸಿದರು.ಎಪ್ರಿಲ್ 22 ರಂದು ನಗರದ ಶೇಖ್ ಝಯೆದ್ ರಸ್ತೆಯ ಕ್ರೌನ್ ಪ್ಲಾಜಾ ದಲ್ಲಿ ನಡೆಯುವ ಬಿಲ್ಲವಾಸ್ ಫ್ಯಾಮಿಲಿ ದುಬೈಯ 25 ನೇವರ್ಷದ “ದುಬೈ ಬಿಲ್ಲವೋತ್ಸವ”ದ ಸಲುವಾಗಿ ಎಪ್ರಿಲ್ 7 ರಂದು ನಗರದ ಊದ್ ಮೇತದ ಬಿರಿಯಾನಿ 2020 ರೆಸ್ಟೋರೆಂಟ್ ನಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈಯ ಕಾರ್ಯದರ್ಶಿ ದೀಪಕ್ ಎಸ್.ಪಿ. ಮಾತನಾಡುತ್ತಾ ಬೆಳಿಗ್ಗೆಯಿಂದಸಂಜೆಯವರೆಗೆ ನಡೆದ ಬಿಲ್ಲವಾಸ್ ಫ್ಯಾಮಿಲಿ ದುಬೈಯ ಸ್ನೇಹ ಸಮ್ಮಿಲನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿದ್ವಾನ್ಸುರೇಶ್ ಅತ್ತಾವರ್ ಇವರ ನಿರ್ದೇಶನದಲ್ಲಿ ” ಬಿರುವ ಬೊಲ್ಲಿಲು” ಎಂಬ ತುಳು ನೃತ್ಯ ರೂಪಕ, ಬಿರುವೆರ್ ಕುಡ್ಲ ದುಬೈತಂಡದವರಿಂದ “ಬಿರ್ದುದ ಪಿಲಿಕುಲು”(ಪಿಲಿನಲಿಕೆ) ಮತ್ತು ತೆಲಿಕೆದ ತೆನಾಲಿ ಸುನೀಲ್ ನೆಲ್ಲಿಗುಡ್ಡೆಯವರ ನೇತೃತ್ವದಲ್ಲಿ ಊರಿನಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ” ಗಮ್ಜಲ್ ಕಾಮಿಡಿ” ಎಂಬ ಹಾಸ್ಯ ಕಾರ್ಯಕ್ರಮ ಜರಗಲಿದೆ.ಕುಡ್ಲ ಕುಸಲ್ ರವಿರಾಮರಾಮಕುಂಜ,ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ,ಕುಸಾಲ್ದ ಗುರಿಕಾರೆ ಸುಜಿತ್ ಕೋಟ್ಯಾನ್, ಹರೀಶ್ ಬಂಗೆರ,ಸಂಗೀತನಿರ್ದೇಶಕ ಶುಭಕರ ಬೆಳಪುರವರು ಊರಿಂದ ಆಗಮಿಸಲಿದ್ದು ಎಲ್ಲರನ್ನೂ ಮನರಂಜಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈಯ ನಿಕಟ ಪೂರ್ವ ಅಧ್ಯಕ್ಷರಾದ ಸತೀಶ್ ಪೂಜಾರಿ,ನಿಕಟ ಪೂರ್ವಉಪಾಧ್ಯಕ್ಷರಾದ ಆನಂದ ಬೈಲೂರು,ಈಗಿನ ಉಪಾಧ್ಯಕ್ಷರಾದ ಸತೀಶ್ ಉಳ್ಳಲ್,ಪ್ರಕಾಶ್ ಪೂಜಾರಿ,ಸಾಂಸ್ಕೃತಿಕ ಕಾರ್ಯದರ್ಶಿ ರವಿಕೋಟ್ಯಾನ್,ಕೋಶಾಧಿಕಾರಿ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ವರದಿ– ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)