TOP STORIES:

FOLLOW US

“ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ”..


ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಇತಿಹಾಸ ಸಾರುತ್ತದೆ. ಮನೆಗಳ ಮೆಟ್ಟಿಲೂ ಚರಿತ್ರೆ ಹೇಳು ತ್ತದೆ. ಬಟ್ಟೆ ಒಗೆಯುವ ಕಲ್ಲುಗಳಲ್ಲೂ ಶಾಸನದ ಕಲ್ಲುಗಳಾಗಿವೆ.
ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಿನ ಇತಿಹಾಸ ಇಂದು ಬೀದಿ ಪಾಲಾಗಿದೆ. ಅರಮನೆ ನಾಶವಾಗಿದೆ. ಅರಮನೆ ಇದ್ದ ಜಾಗ ಪಾಳು ಬಿದ್ದಿದೆ. ಆನೆ, ಕುದುರೆ ಕಟ್ಟಿ ಹಾಕುತ್ತಿದ್ದ ಕಲ್ಲುಗಳು ಈಗ ದನ ಮೇಯಿಸಲು ಕಟ್ಟುವ ಕಲ್ಲುಗಳಾಗಿ ಮಾರ್ಪಾಡಾಗಿವೆ. 365 ದೇವಸ್ಥಾನಗಳಿದ್ದ ಬಾರಕೂರಲ್ಲಿ ಶೇ.75ರಷ್ಟು ದೇವಸ್ಥಾನಗಳು ನಾಮಾವಶೇಷವಾಗಿವೆ.

ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರ. ಅಲ್ಲಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು, ತುಳುನಾಡ ಹಂಪೆ ಬಾರಕೂರು.

ಗತ ಇತಿಹಾಸಗಳನ್ನು ಬದಿಗೆ ಸರಿಸಿ ನಡುವಲ್ಲಿ ಬಾರಕೂರು ಪುಟ್ಟ ನಗರವಾಗಿದೆ. ಈ ಸಣ್ಣ ಪೇಟೆ ಯನ್ನು ಬಿಟ್ಟು ಸುತ್ತ ಎತ್ತ ಹೋದರೂ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ಕೆರೆಗಳು, ದೇವಸ್ಥಾನಗಳು, ಬಾವಿಗಳು ಸಿಗುತ್ತವೆ. ಸುತ್ತ ಕೋಟೆ ಮತ್ತು ಅರಮನೆ ಇದ್ದ ಜಾಗ ಇವತ್ತಿಗೂ ಇದೆ. ಸುಮಾರು 25 ಎಕರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ ನಿರ್ಮಿಸ ಲಾಗಿರುವುದು ಇವತ್ತಿಗೂ ಕಾಣಬಹುದು. ಅರಮನೆ ನೆಲಸಮವಾಗಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳು ಇವತ್ತಿಗೂ ಉಳಿದಿವೆ. ಸುತ್ತ ಹಸಿರು ಬೆಳೆದಿರುವುದರಿಂದ ಈ ಕಲ್ಲು ದನಗಳನ್ನು ಕಟ್ಟಲು ಉಪಯೋಗವಾಗುತ್ತಿದೆ. ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ಬಾವಿಯಲ್ಲಿ ಈಗಲೂ ನೀರಿದೆ.

6 ವರ್ಷದ ಹಿಂದೆ ಇಲ್ಲಿ ಉತ್ಕನನ ಮಾಡಿದಾಗ ಅರಮನೆಯ ಅಡಿಪಾಯ ಗುರುತಿಸಲು ಸಾಧ್ಯ ವಾಗಿದೆ.

ಸ್ವಲ್ಪ ದೂರದಲ್ಲಿ ಇವತ್ತು ಕತ್ತಲೆ ಬಸದಿ ಎಂದು ಕರೆಯಲಾಗುತ್ತಿರುವ ಬಸದಿ ಇದೆ. ಬಾರಕೂರಿನ ಸೋಮನಾಥೇಶ್ವರ ದೇವಾಲಯ ಚಾಲುಕ್ಯ ಶೈಲಿಯಲ್ಲಿದ್ದು, ಚಾಲುಕ್ಯ ಸಂಬಂಧವನ್ನು ಹೇಳಿ ದರೆ, ಈ ಬಸದಿ ಹೊಯ್ಸಳರ ಜತೆಗಿನ ನಂಟನ್ನು ತಿಳಿಸುತ್ತದೆ. ಇಲ್ಲಿ 24 ತೀರ್ಥಂಕರರ ಕಲ್ಲು ಇದೆ. ಅಚ್ಚರಿ ಎಂಬಂತೆ ಬಸದಿಯ ಒಳಗೆ ಶಿವಲಿಂಗ ಇದೆ. ಇದು ಬಳಿಕ ನಡೆದ ಧರ್ಮಾಕ್ರಮಣದ ಕುರುಹು ಇರಬಹುದು.

ಬಾರಕೂರು ಪೇಟೆ ಸಮೀಪ ಸಿಂಹಾಸನಗುಡ್ಡೆ ಎಂಬ ಪ್ರದೇಶವಿದೆ. ಇಲ್ಲೇ ಬೇತಾಳೇಶ್ವರ ದೇವ ಸ್ಥಾನ ಇರುವುದು. ಈ ಪ್ರದೇಶದಲ್ಲಿ ತ್ರಿವಿಕ್ರಮನ ಸಿಂಹಾಸನ ಇದ್ದು, ಇದನ್ನು ರಾಜನೊಬ್ಬ ಏರಲು ಬಂದಾಗ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಇದ್ದ ಗೊಂಬೆಗಳು ಕತೆ ಹೇಳುತ್ತಾ ಹೊರಟು ಹೋದಮೇಲೆ ಸಿಂಹಾಸನ ಭೂಗತವಾಯಿತು ಎಂಬುದು ಪ್ರತೀತಿ. ತ್ರಿವಿಕ್ರಮ ಇದ್ದಲ್ಲಿ ಬೇತಾಳ ಇರುವುದರಿಂದ ಬೇತಾಳೇಶ್ವರ ದೇವಸ್ಥಾನ ಇಲ್ಲಿದೆ.

ಬಾರಕೂರು ಇತಿಹಾಸ ಭೂತಾಳ ಪಾಂಡ್ಯ ಇಲ್ಲಿ ಆಳುತ್ತಿದ್ದ ಎಂಬುದು ನಂಬಿಕೆ.ತುಳುನಾಡಿನಲ್ಲಿ ಮೊದಲೇ ಇದ್ದ ಅಳಿಯಕಟ್ ಅಥವಾ ಮಾತೃ ಸಂಸ್ಕೃತಿಯನ್ನು ಕಾನೂನು ಮೂಲಕ ಜಾರಿ ಮಾಡಿದಾತ ಈತ ಎಂಬ ಹೆಸರಿದೆ. ಸಂಸ್ಕೃತದ `ಭೂತಾಳ ಪಾಂಡ್ಯ ಚರಿತಂ’ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ. 77ರಲ್ಲಿ ಬಾರಕೂರಲ್ಲಿ ಆಳ್ವಿಕೆ ನಡೆಸು ತ್ತಿದ್ದ ಎಂಬ ಮಾಹಿತಿ ಇದೆ. ಮಹಿಷಾಸುರ ಆತನ ಆರಾಧ್ಯದೈವವಾಗಿದ್ದು, ಮಹಿಷಾಸುರ ದೇವಸ್ಥಾ ನ ಬಾರಕೂರಲ್ಲಿ ಈಗಲೂ ಇದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು `ಭೂತಾಳ ಪಾಂಡ್ಯ ಚರಿತಂ ‘ ಹೇಳುತ್ತದೆ. ಭೂತಾಳ ಪಾಂಡ್ಯನ ನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಅಳುಪರ ಆಡಳಿತವೇ ಕಾಣುವುದು.

ಏಳನೇ ಶತಮಾನದ ಆರಂಭದಲ್ಲಿ ಅಳುವರಸ ಬಾರಕೂರಲ್ಲಿ ಆಳ್ವಿಕೆ ನಡೆಸಲು ಆರಂಭಿಸಿದ. ಈತ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿಯ ಸಂಬಂ. ಇಲ್ಲಿಂದ ಅಳುಪರ ಆಳ್ವಿಕೆ ಆರಂಭ ಗೊಂಡಿದ್ದು 800 ಕ್ಕೂ ಅಧಿಕ ವರ್ಷ ಆಳ್ವಿಕೆ ನಡೆಸಿದೆ. ಆರಂಭದಲ್ಲಿ ಚಾಲುಕ್ಯರ ಸಂಬಂಧವಿದ್ದ ಅಳುಪರು ಬಳಿಕ ಹೊಯ್ಸಳರ ಜತೆ ಸಂಬಂಧ ಬೆಳೆಸಿದರು. ಅದರ ಪರಿಣಾಮವಾಗಿ ಬಾರಕೂ ನಲ್ಲಿ ಜೈನಬಸದಿಗಳು ನಿರ್ಮಾಣಗೊಂಡವು. ಹೊಯ್ಸಳ ದೊರೆ ವಿಷ್ಣುದೇವ ಜೈನ ಧರ್ಮಬಿಟ್ಟು ವೈಷ್ಣವ ಧರ್ಮ ಸ್ವೀಕರಿಸಿ ದಾಗ ಬಾರಕೂರಲ್ಲೂ ವೈಷ್ಣವ ದೇವಾಲಯಗಳು ರಚನೆಯಾದವು.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಅವರ ಸ್ಥಾನಿಕ ದೊರೆಗಳಾಗಿ ಆಳ್ವಿಕೆ ಮಾಡಿದ್ದರು. ನಂತರ ಕೆಳದಿ, ಇಕ್ಕೇರಿ ದೊರೆಗಳು, ಹೈದರಾಲಿ, ಟಿಪ್ಪು ಸಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರು ಆಳ್ವಿಕೆ ನಡೆಸಿದರು. ಸೀತಾನದಿಯ ಹಂಗಾರಕಟ್ಟೆ ಆಗ ವಾಣಿಜ್ಯ ಬಂದರು ಆಗಿತ್ತು. ಈ ನದಿಯಲ್ಲಿ ಸ್ವಲ್ಪ ದೂರ ಸಾಗಿದರೆ ಅರಬ್ಬಿ ಸಮುದ್ರ ಸಿಗುವುದರಿಂದ ಸರ್ವಋತು ಬಂದರಾಗಿತ್ತು.

ಪ್ರತಿ ಜಾತಿ ಸಮುದಾಯಕ್ಕೆ ಸಂಬಂಸಿದ ದೇವಸ್ಥಾನಗಳು ಬಾರಕೂರಲ್ಲಿದ್ದವಂತೆ. ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರಕೂರಾಗಿತ್ತು. ಇಲ್ಲಿ 365 ದೇವಸ್ಥಾನಗಳಿದ್ದು, ಪ್ರತಿ ದಿನ ಜಾತ್ರೆ ನಡೆಯುತ್ತಿತ್ತು. ರಾಜಪರಿವಾರ ದಿನಕ್ಕೊಂದು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದ ಎನ್ನಲಾಗಿದೆ. ಈಗ ಶೇ.75ಕ್ಕೂ ಅಧಿಕ ದೇವಾಲಯಗಳು ನಾಶವಾಗಿವೆ. ಉಳಿದಿರುವ ದೇವಸ್ಥಾನಗಳಲ್ಲಿ ಕೆಲವನ್ನು ಪಟ್ಟಿಮಾಡಲಾಗಿದೆ.

ಬಟ್ಟೆ ವಿನಾಯಕ, ಮಹಾಲಿಂಗೇಶ್ವರ, ಪಂಚಲಿಂಗೇಶ್ವರ, ಚಿಪ್ಪಿ ಹನುಮಂತ, ಕಾಳಭೈರವೇಶ್ವರ, ಭುವನೇಶ್ವರಿ, ರೇವಂತ, ಕಚ್ಚೂರು ಮಾಲ್ತಿದೇವಿ, ಬಬ್ಬುಸ್ವಾಮಿ, ಕೊರಗ ತನಿಯ, ಬೇತಾಳೇಶ್ವರ, ಆಂಜನೇಯ, ಸರಸ್ವತಿ ನಾರಾಯಣಿ, ವೇಣುಗೋಪಾಲಕೃಷ್ಣ, ತರಡೇಶ್ವರ, ತಮಟೇಶ್ವರ, ಸೋ ಮೇಶ್ವರ, ಮಹಿಷಾಸುರ, ಕಚ್ಚೂರು ನಾಗೇಶ್ವರ, ಕಾಳಿಕಾಂಬಾ, ವೀರಭದ್ರ, ಸೋಮನಾಥೇಶ್ವರ, ಬನಶಂಕರಿ, ಸಿದ್ಧನಾಥ ಸಿದ್ಧೇಶ್ವರ, ಬಾಲಯಕ್ಷಿಣಿ ಅಮ್ಮನವರು, ರಸದಬಾವಿ ನಾಗಯಕ್ಷ ದೇವರು, ರಸದಬಾವಿ ಸುಬ್ರಾಯ ದೇವರು, ಮಹಾಲಕ್ಷ್ಮೀ, ಕುಲಮಾಹಾಸ್ತ್ರೀ ಅಮ್ಮ, ಮಹಾ ಗಣಪತಿ, ಕಪಿ ಲೇಶ್ವರ, ಜನಾರ್ದನ, ಸುಬ್ರಹ್ಮಣ್ಯ, ಪಡಸಾಲೆ ವಿಶ್ವನಾಥ, ದುರ್ಗಪರಮೇಶ್ವರಿ, ವೆಂಕಟೇಶ್ವರ, ನಾಗಬ್ರಹ್ಮ.

10 ಕೆರೆಗಳು :
ಕೋಟೆಕೇರಿ, ಮೂಡುಕೇರಿ, ಚೌಳಿಕೇರಿ, ಪಡಸಾಲೆ ಕೇರಿ, ಹೊಸಕೇರಿ, ಬಳೆಗಾರಕೇರಿ (ಪಟಗಾ ರಕೇರಿ), ಮಣಿಗಾರ ಕೇರಿ, ಭಂಡಾರಕೇರಿ, ರಂಗನ ಕೇರಿ, ಬೆಳಚಿಕೇರಿ.

ಇಲ್ಲಿನ ಪ್ರಸಿದ್ಧರು :
ಪಿ.ಕಾಳಿಂಗರಾವ್ ( ಸಂಗೀತ), ಬಿ.ಪಿ.ಬಾಯರಿ( ಚಿತ್ರಕಲೆ), ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ( ಯೋಗ), ಸುನಿಲ್(ಚಲನಚಿತ್ರ), ಬುಡನ್ ಬಾಷಾ ಸಾಹೇಬ್ (ರಂಗಕಲೆ), ವಿ.ವಿ.ನಾಯಕ್ (ರಂಗಕಲೆ), ಕೃಷ್ಣನ್ ನಂಬಿಯಾರ್ (ಆಯುರ್ವೇದ), ನೀಲಕಂಠಶಾಸ್ತ್ರೀ (ಜ್ಯೋತಿಷ್ಯ), ಬಂಡೀ ಮಠ ತಮ್ಮಯ್ಯ ಆಚಾರ್ಯ (ಶಿಲ್ಪಕಲೆ), ವಿಶ್ವೇಶ್ವರ ಭಟ್ (ಸಂಸ್ಕೃತ ನಿಘಂಟು), ವಿ.ಎಲ್.ರೋಚ್ (ರಾಷ್ಟ್ರ ಪ್ರಸಿದ್ಧ ಗುತ್ತಿಗೆದಾರ) ಕ್ರಿಸ್ತಶಕ 600ರಿಂದ 1400ರವರೆಗೆ ಆಳಿದ ಅಳುಪ ದೊರೆಗಳು ಅಳುವರಸ, ಗಂಗಸಾಗರ, ಚಿತ್ರವಾಹನ. ಎರಡನೇ ಅಳುವರಸ, 2 ನೇ ಚಿತ್ರವಾಹನ, ರಂಗಸಾ ಗರ, ಪೃಥ್ವಿಸಾಗರ, ಮರಾಮ, ವಿಮಲಾದಿತ್ಯ, ಆಳ್ವ ರಣಂಜಯ, ದತ್ತಲುಪ, ಕುಂದವರ್ಮ, ಜಯ ಸಿಂಹ, ಬೆಂಕಿದೇವ, ಪಟ್ಟಿ ಒಡೆಯ, ಪಾಂಡ್ಯ ಪಟ್ಟಿ ಒಡೆಯ, ಕವಿ ಅಳುಪ, ಕುಲಶೇಖರ, ಕುಂದಣ್ಣ, ವಲ್ಲಭ ದೇವ ದತ್ತುಪುತ್ರ, ವೀರಪಾಂಡ್ಯ, ರಾಣಿ ಬಲ್ಲಾಳ ಮಹಾದೇವಿ-ನಾಗದೇವರಸ, ೨ನೇ ಬೆಂಕಿದೇವ, ಸೋಯಿದೇವ, ೨ನೇ ಕುಲಶೇಖರ, ೩ನೇ ಬೆಂಕಿ ದೇವ, ೩ನೇ ಕುಲಶೇಖರ, ೨ನೇ ವೀರಪಾಂಡ್ಯ.

2003ರಲ್ಲಿ ಉತ್ಖನನ ಇವು ಸುಮಾರು 150 ವರ್ಷಗಳ ಹಿಂದೆ ನಿರ್ನಾಮಗೊಂಡಿವೆ. ರಾಜ್ಯ ಪ್ರಾಕ್ತನ ಮತ್ತು ಪುರಾತತ್ವ ಇಲಾಖೆ ವತಿಯಿಂದ ಎಂ.ಎಚ್. ಕೃಷ್ಣ ಅವರ ನೇತೃತ್ವದಲ್ಲಿ 2003ರಲ್ಲಿ ಉತ್ಖನನ ನಡೆದಿದೆ.

ಇಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಸರಕಾರ ಇದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂಬುವುದು ಸ್ಥಳಿಯರ ಅಗ್ರಹವಾಗಿದೆ.

Courtesy : © Beauty of Tulunad
ವರದಿಗಾರರು : ಪ್ರವೀಣ್ ಪ್ರಭಾಕರ್,
ಕೃಪೆ – ಉಡುಪಿಸುದ್ದಿ.ಬ್ಲಾಗ್ಸ್ಪಾಟ್. ಕಂ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »