ಕೊಲ್ಲಿ ರಾಷ್ಟ್ರವಾದ ಒಮಾನ್ ದೇಶದ ಮಸ್ಕತ್’ನ “ಒಮಾನ್ ಬಿಲ್ಲವಾಸ್”* ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಂತರಾಷ್ಟ್ರೀಯ ಆರ್ಥಿಕ ಮತ್ತು ಶಿಕ್ಷಣ ತಜ್ಞ, ಗ್ಲೋಬಲ್ ಸ್ಪೀಕರ್, ವಾಗ್ಮಿ, ಇಂಗ್ಲಿಷ್ ಪತ್ರಿಕೆಯ ಬರಹಗಾರ, ಕೊಡುಗೈ ಧಾನಿಗಳು, ವರ್ಲ್ಡ್ ವೈಡ್ ಬಿಸಿನೆಸ್ ಹೌಸ್ ಮ್ಯಾನೇಜಿಂಗ್ ಡೈರೆಕ್ಟರ್, ಬಿಲ್ಲವ ಸಮಾಜದ ಪ್ರಭಲ ನಾಯಕರಾಗಿ ಮಿನುಗುತ್ತಿರುವ ಸಮರ್ಥ ನಾಯಕ, ಒಮಾನ್ ಬಿಲ್ಲವಾಸ್ ಕೂಟದ ಫೌಂಡಿಂಗ್ ಮೆಂಬರ್ ಡಾ! ಸಿ ಕೆ ಅಂಚನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಡಾ.ಅಂಚನ್ ಸಿ.ಕೆ, ಶಿಕ್ಷಣದ ಮೌಲ್ಯವನ್ನು ತಿಳಿದಿದ್ದರು, ಶಿಕ್ಷಣದ ಅನ್ವೇಷಣೆಯಲ್ಲಿ ಅವರು ಅತ್ಯುತ್ತಮ ಶೈಕ್ಷಣಿಕ ಅರ್ಹತೆಗಳು, ಅತ್ಯುತ್ತಮ ಅಕಾಡಾಮಿಕ್ ಅರ್ಹತೆಯೊಂದಿಗೆ, ಕಾಸ್ಟ್ ಅಕೌಂಟೆಂಟ್, ಸರ್ಟಿಫೈಡ್ ಐಟಿ ಪ್ರೊಫೆಷನಲ್, ಮಾರ್ಕೆಟಿಂಗ್, ಮಾಸ್ಟರ್ಸ್ ಮತ್ತು ಎಕನಾಮಿಕ್ಸ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ವಿದ್ಯಾರ್ಥಿವೇತನ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವಂತಹ ವಿವಿಧ ಕಾರ್ಯಕ್ರಮಗಳ ಮೂಲಕ ಭಾರತೀಯ ಸಮುದಾಯದ ಕಲ್ಯಾಣವನ್ನು ಉತ್ತೇಜುಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
✒️ ಪ್ರಶಾಂತ್ ಪೂಜಾರಿ ಮಸ್ಕತ್, ಪಜೀರ್