ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ 150ನೇ ಸಂಭ್ರಮ ಮಾರ್ಚ್ 7ರಂದು ನಾಗಬ್ರಹ್ಮ ಮಂಡಲದೊಂದಿಗೆ ಅತ್ಯಂತ ಅದ್ದೂರಿಹಾಗು ಸಹಸ್ರಾರು ಸ್ವಯಂಸೇವಕರು, ಕ್ಷೇತ್ರಾಡಳಿತ ಅಧ್ಯಕ್ಷರು, ಸಮಿತಿ ಸದಸ್ಯರ ಪ್ರೋತ್ಸಾಹದಿಂದ ಯಶಸ್ವಿಯಾಗಿಸಂಪನ್ನಗೊಂಡಿತು. ಆದರೆ ಈ ಉತ್ಸವದ ಪೂರ್ವಭಾವಿ ಸಭೆಯಿಂದ ಹಿಡಿದು ಉತ್ಸವ ಸಂಪನ್ನಗೊಳ್ಳುವ ತನಕ ಪ್ರಮುಖಆಕರ್ಷಣೆಯಾಗಿದ್ದು, ಹತ್ತಿರ ಬಂದು ನೀರು ಕೊಡುತ್ತಿದ್ದ ಹಿರಿಯ ವಯಸ್ಸಿನ ಓರ್ವ ವ್ಯಕ್ತಿ.
ಹೌದು; ಇಡೀ ಉತ್ಸವ ಸಂಪನ್ನಗೊಳ್ಳುವ ತನಕ ಎಳೆಯ ಪ್ರಾಯದಿಂದ ಹಿಡಿದು ವಯಸ್ಸಾದವರಿಗೂ ಯಾವುದೇ ತಾರತಮ್ಯನೋಡದೆ ‘ಅಣ್ಣ ನೀರ್ ಬೋಡೆ, ಅಕ್ಕ ನೀರ್ ಬೋಡೆ, ಬಾಲೆ ನೀರ್ ಬೋಡೆ ಉಂದು ದೇವೆರೆನಾ ಪ್ರಸಾದ’ ಎಂದು ಬಂದವರಆಯಾಸ, ದನಿವು ತಣಿಸುವ ಕಾರ್ಯದಲ್ಲಿ ತೊಡಗಿದವರು ಕಪಿತಾನಿಯಾ ನಿವಾಸಿ, ಬಂದರಿನ ಪ್ರಕಾಶ್ ಇಂಜಿಯರಿಂಗ್ ವರ್ಕ್ಸ್ಮಾಲೀಕ ಪ್ರಕಾಶ್. ಹಿರಿಯರಾದರೂ ಸ್ವಲ್ಪವೂ ವಿರಾಮ ಪಡೆಯದೇ ಇಡೀ ದಿನ ನಗು ನಗುತ್ತಾ ನೀರು ನೀಡುವ ಕಾಯಕದಲ್ಲಿತೊಡಗಿದ್ದ ಅವರ ಸೇವೆ ಅವಿಸ್ಮರಣೀಯ ಮತ್ತು ಯುವಜನತೆಗೆ ಮಾದರಿ. ಇವರಿಗೆ ಇಂತಹ ಇನ್ನಷ್ಟು ಸೇವೆ ಮಾಡಲು ಕಂಕನಾಡಿಬ್ರಹ್ಮಬೈದರ್ಕಲು, ಸಪರಿವಾರ ದೇವರು ಅನುಗ್ರಹ ಕರುಣಿಸಲಿ ಎಂದು ಹಾರೈಸುವ….
– ಪದ್ಮರಾಜ್ ಆರ್. ಕೋಶಾಧಿಕಾರಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ