ಅಂದು ನಾರಾಯಣ ಗುರುಗಳು ಮೇಲ್ವರ್ಗದ ದಾಸ್ಯತ್ವದಿಂದ ಮುಕ್ತಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾಲ. ತುಳುನಾಡಿನ ಇತಿಹಾಸದಲ್ಲಿ ನಾಗರಾಧನೆ ದೈವಾರಾಧನೆ ದೇವತಾರಾಧನೆ ಸನಾತನ ಧರ್ಮ ಕೊಂಡಿಯಾಗಿ ರೂಪುಗೊಂಡಿದ್ದುಅಂತು ಸತ್ಯ….
ನಾರಾಯಣ ಗುರು ಪರಂಪರೆಯ ಶಾಂತಿ ಗಳು ಪೂಜೆ ಪುರಸ್ಕಾರ ಮಾಡುವವರು ಒಂದು ಕಡೆಯಾದರೆ ಬಿಲ್ಲವ ಪೂಜಾರಿಎಂದೊಡನೆ ಮದ್ದು ನೀಡುವ ಬೈದ್ಯ ವೈದ್ಯನಾಗಿ ದೈವ ಚಾಕರಿಯ ಪೂಜಾರಿ ಯಾಗಿ ನಾಗದರ್ಶನ ದ ಪಾತ್ರಿಯಾಗಿ ಇರುವುದುಪೂರ್ವಕಾಲಘಟ್ಟದಿಂದಲೂ…. ಅದರಲ್ಲೂ ಗತ ವೈಭವಕ್ಕೆ ಮರುಜೀವ ಮೂಡಿ ಬಂದದ್ದು ಕಂಕನಾಡಿ ಗರಡಿ
“” ನಾಗಬ್ರಹ್ಮ ಮಂಡಲೋತ್ಸವ“”.
ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು ಹೊಸ ಭಾಷ್ಯ ಬರೆದವರು…. ಮಂತ್ರವಾದ ನಾಗಪಾತ್ರಿ ಮನೆತನದ ಸೋಮಪ್ಫಪೂಜಾರಿ ತೊಕ್ಕೊಟ್ಟು ಇವರ ಮೊಮ್ಮಗ ಶಾಂತರಾಮ ಪೂಜಾರಿ ಮತ್ತು ಗೀತಾ ದಂಪತಿಗಳ ಪುತ್ರ ಮನೋಜ್ ಶಾಂತಿ.. ಎಳವೆಯಲ್ಲೆಅಧ್ಯಾತ್ಮಿಕದ ಒಲವು ಇದ್ದ ಮನೋಜ್ 11 ನೇ ವರ್ಷ ಪ್ರಾಯಕ್ಕೆ ತಂದೆಯ ಮೂಲಕ ನಾರಾಯಣ ಗುರು ತತ್ವದಡಿಯಲ್ಲಿಬ್ರಹ್ಮೋಪದೇಶ ಪಡೆದು ನಂತರ ತಂದೆಯ ಅಕಾಲಿಕ ಮರಣ… ಕಂಕನಾಡಿ ಗರಡಿಯ ಅರ್ಚಕರಾದ ಗಂಗಾಧರ ಶಾಂತಿ ಶಿಷ್ಯತ್ವಸ್ವೀಕರಿಸಿ ನಾರಾಯಣ ಗುರು ಪರಂಪರೆಯ ದೇವತಾಸತ್ಕರ್ಮ ಮಾಡುವ ಇವರು ಪೂರ್ವ ಜನ್ಮ ಪುಣ್ಯ ದ ಫಲ ಎನ್ನುವಂತೆನಾಗದರ್ಶನಕ್ಕೆ ನಾಗಪಾತ್ರಿಯ ದೀಕ್ಷೆ ಪಡೆದು ಬಿಲ್ಲವ ಸಮಾಜದ ಒಬ್ಬ ಯುವ ತರುಣ ನಾಗಪಾತ್ರಿಯಾದರು…. ಹತ್ತು ಹಲವು ಕಡೆನಾಗದರ್ಶನ ಸೇವೆ ನೀಡಿದ ಇವರು ಈ ಬಾರಿ ಕಂಕನಾಡಿ ಗರಡಿ 150 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ದ ಸಂದರ್ಭ “”ನಾಗಬ್ರಹ್ಮಮಂಡಲೋತ್ಸವ “” ನಾಗ ಪಾತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಇತಿಹಾಸದಲ್ಲಿಯೇ ಪ್ರಥಮ ಬಿಲ್ಲವ ಎನ್ನಬಹುದು. ನಾಗಕನ್ನಿಕೆನರ್ತಕರಾಗಿ ಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಸಹೋದರರು….
ಇವರ “” ಭಕ್ತಿಯ ಸೇವೆ ಗೆ ಶಕ್ತಿ ಅನುಗ್ರಹ “”” ಅಗಿದೆ.
ಕ್ರಾಂತಿಕಾರಿ ಹೆಜ್ಜೆಗೆ ಅಂದು ನಾರಾಯಣ ಗುರುಗಳನ್ನೆ ಬಿಡದ ಸಮಾಜದ… ಇಂದು ಜನಸಾಮಾನ್ಯರಾದ ನಮ್ಮನ್ನು ಬಿಟ್ಟಿತ್ತೇ….
ಜೈ ಗುರುವರ್ಯ
HSP