ಯಾವುದೇ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲು ಮುಖ್ಯ ಕಾರಣ ನಿರೂಪಣೆ, ಹೀಗೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕಂಚಿನ ಕಂಠದ ತುಳು ನಿರೂಪಕ ಉಡುಪಿ ಅಂಬಾಗಿಲಿನ ಸಚೇಂದ್ರ ಅಂಬಾಗಿಲು ರಮೇಶ್ ಸಾಲಿಯಾನ್ ಮತ್ತು ಶ್ರೀಮತಿ ಲೀಲಾ ದಂಪತಿಗಳ ಪ್ರೀತಿಯ ಮಗ, ಸಣ್ಣ ಪ್ರಾಯದಲ್ಲಿಯೇ ತುಳು ಭಾಷೆಯಲ್ಲಿ ಎಲ್ಲಿ ಇಲ್ಲದ ಅಭಿಮಾನ.
ಪ್ರಾಥಮಿಕ ಶಿಕ್ಷಣವನ್ನು ಆದಿ ಉಡುಪಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಗಿಸಿದ ಇವರು ಐಟಿಐ ಟ್ರಿನಿಟಿ ಕಾಲೇಜ್ ಉದ್ಯಾವರ ಇಲ್ಲಿ ಎಮ್. ಆರ್. ಎ. ಸಿ ಮುಗಿಸಿ ನಂತರ ಕದ್ರಿ ಹಿಲ್ಸ್ ಐ.ಟಿ. ಐ ಮಂಗಳೂರ ಮತ್ತು ಎನ್. ಎ. ಸಿ ಯನ್ನು ಕೆ. ಎಮ್. ಎಫ್ ನಲ್ಲಿ ಮುಗಿಸಿದ ಇವರು ಪ್ರಸ್ತುತ ಟ್ರಿನಿಟಿ ಐ.ಟಿ.ಐ ಕಾಲೇಜ್ ಉದ್ಯಾವರದಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರು ಶ್ರೀ ಜನತಾ ವ್ಯಾಯಾಮ ಶಾಲೆ ಅಂಬಾಗಿಲು ಇಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ ಸಮಿತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಹಾಗೆಯೇ ಎ. ಆರ್ ಫ್ರೆಂಡ್ ಅಂಬಾಗಿಲು 10 ವರ್ಷದಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಉಡುಪಿ, ಮಂಗಳೂರು, ಚಿಕ್ಕಮಂಗಳೂರ, ಶಿವಮೊಗ್ಗ ಹೀಗೆಯೇ ವಿವಿಧ ಕಡೆಗಳಲ್ಲಿ ತಮ್ಮ ನಿರೂಪಣೆಯ ಸೊಗಡುನ್ನು ತೋರಿಸಿದ್ದಾರೆ. ತುಳುಭಾಷೆಯ ಮೇಲೆ ಇದ್ದ ಅಭಿಮಾನಕ್ಕೆ ಮತ್ತು ವಾಕ್ ಚಾತುರ್ಯಕ್ಕೆ ಶ್ರೀ ಕ್ಷೇತ್ರ ಕಾಣಿಯೂರ್ ಸ್ವಾಮಿ ಇವರಿಗೆ ತುಳುನಾಡ ಸ್ವರ ತುಡರ್ ಎನ್ನುವ ಬಿರುದನ್ನು ನೀಡಿದ್ದಾರೆ. ಮಕ್ಕಿ ಮನೆ ಕಲಾವೃಂದ ಸಂಭ್ರಮ 2019ರಲ್ಲಿ ಗೌರವ ಪುರಸ್ಕಾರ ನೀಡಿ ಗೌರವಿಸಿತ್ತು ಮತ್ತು ಹಳೆ ವಿದ್ಯಾರ್ಥಿಗಳ ಸಂಘ ನಿಟ್ಟೂರ್ ಇಲ್ಲಿಯೂ ಅಭಿನಂದನ ಪತ್ರ ನೀಡಿ ಗೌರವಿಸಿದರು.
ತುಳುಭಾಷೆಯ ಸಂಸ್ಕೃತಿಯನ್ನು ತಮ್ಮ ನಿರೂಪಣೆಯಲ್ಲಿ ಬಿತ್ತರಿಸಿದ ಇವರ ಮೊದಲು ವೀರಾಂಜನೇಯ_ಗುಡಿ ಅಂಬಾಗಿಲುಯಲ್ಲಿ ಹನುಮಾನ್ ಜಯಂತಿ ದಿನ ತುಳು ವಾಕ್ ಚಾತುರ್ಯಕ್ಕೆ ಎಲ್ಲರ ಮನ ಗೆದ್ದ ಇವರು ತನ್ನದೇ ಅಭಿಮಾನಿ ಬಳಗ ಹೊಂದಿದ್ದಾರೆ.
ಕುಡ್ಲ ಚಾನಲ್ ಕಂಬಳ ಹೀಗೆ ಅನೇಕ ಸಾಂಸ್ಕ್ರಿತಿಕ ಕಾರ್ಯಕ್ರಮದಲ್ಲಿ ತನ್ನ ಮಾತಿನ ಚತುರತೆಯನ್ನು ತೋರಿಸಿದ್ದಾರೆ. ಹೀಗೆ ನಿರೂಪಣೆ ಅಲ್ಲದೆ ತಾಲೀಮ್ ನಲ್ಲಿ ತನ್ನ ಪ್ರತಿಭೆ ಯನ್ನು ತೋರಿಸಿ ವ್ಯಾಯಾಮ ಶಾಲೆ ಅಂಬಾಗಿಲು ಇಲ್ಲಿ 5ವರ್ಷ ದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ತುಳು ಭಾಷೆ, ಸಂಸ್ಕೃತಿಯನ್ನು ಜನರ ಮನಮುಟ್ಟುವಂತೆ ಮಾಡಿದ ಇವರು ಅನೇಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಇವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ
ನಿರೂಪಣೆ ಇವರಿಗೆ ಇನ್ನಷ್ಟು ಹೆಸರು ತರಲಿ ತುಳು ಭಾಷೆ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ತುಳುನಾಡ ದೈವ ದೇವರುಗಳ ಆಶೀರ್ವಾದ ಸದಾ ಇರಲಿ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುವ.
By: ಪ್ರಶಾಂತ್ ಅಂಚನ್ ಮಸ್ಕತ್ತ್
Email us: billavaswarriors@gmail.com