ಮನೆಯ ಜವಾಬ್ದಾರಿ ಉದ್ಯಮಕ್ಕಾಗಿ ದೂರದ ಮುಂಬೈಗೆ ಬಂದು ರಾತ್ರಿ ಹಗಲೆನ್ನದೆ ದುಡಿದು, ಕಷ್ಟ ದುಃಖ ಬಡತನಅವಮಾನಗಳನ್ನು ಎದುರಿಸಿ ಯಾವುದೇ ಅಡ್ಡದಾರಿಯನ್ನು ಹಿಡಿಯದೆ ದುಡಿಮೆಯೇ ದೇವರು ಎನ್ನುವ ಮಾರ್ಗದಿಂದಮುಂದುವರೆದು ಯುವ ಉದ್ಯಮಿಯಾಗಿ ದೇಶದ ಹಲವೆಡೆ ತನ್ನ ಉದ್ಯಮದಿಂದ ಗುರುತಿಸಿಕೊಂಡಿರುವ ಗೋವಿಂದ ಪೂಜಾರಿಯವರಿಗೆ ದೇವರ ಕೃಪೆಯೋ ಎನೋ ದುಡಿಮೆಯನ್ನು ಅರಸಿಬಂದ ವ್ಯಕ್ತಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವ ಯಶಸ್ವಿಉದ್ಯಮಿಯಾಗಿದ್ದಾರೆ ಚೆಫ್ ಟಾಕ್, ಮೀನಿನ ಚಿಪ್ಸ್ ಹೀಗೆ ಹಲವಾರು ಉದ್ಯಮಗಳನ್ನು ಪರಿಚಯಿಸಿದ ಮಹಾನ್ ಉದ್ಯಮಿಗೋವಿಂದ ಬಾಬು ಪೂಜಾರಿ
ಇವರು ಉದ್ಯಮದಲ್ಲಿ ಯಶಸ್ವಿಯಾಗಿ ಎಷ್ಟು ಎತ್ತರಕ್ಕೆ ಬೆಳೆದರೋ ಅದಕ್ಕಿಂತಲೂ ಹೆಚ್ಚಾಗಿ ಜನರ ಹೃದಯದಲ್ಲಿ ಬೆಳೆಯುತ್ತಿದ್ದಾರೆ. ಲಾಕ್ ಡೌನ್ ಸಂಧರ್ಭದಲ್ಲಿ ಜನರಿಗೆ ಆಹಾರ ಕಿಟ್ ಗಳನ್ನು, ವಸತಿ, ಆರ್ಥಿಕ ಸಹಕಾರ ಹೀಗೆ ತನ್ನಲ್ಲಿ ಆಗುವಂತಹ ಹಲವಾರುಸೇವೆಯನ್ನು ಜನರಿಗೆ ಅರ್ಪಿಸಿ ಜನರ ಪ್ರೀತಿವಾತ್ಸಲ್ಯವನ್ನು ಪಡೆದಿರುವ ಜನಸೇವಕ ಗೋವಿಂದ ಪೂಜಾರ್ಲು.
ಬದುಕುನಿಂತ ನೀರಾಗಬಾರದು ಹರಿಯುವ ನದಿಯಾಗಬೇಕು ಎನ್ನುವಂತೆ ತನ್ನ ಸ್ವ ಉದ್ಯಮದಿಂದ ಬೆಳೆದ ಇವರ ಜೀವನಗಥೆಪ್ರತಿಯೊಬ್ಬರಿಗೂ ಮಾದರಿಯಾಗಲಿ ಇವರಲ್ಲಿರುವ ಸೇವಮನೋಭಾವಕ್ಕೆ ಆ ಭಗವಂತನ ಕೃಪೆಯಿರಲಿ ಎಂದು ಹಾರೈಸುತ್ತಾ Govinda Babu Poojari ಇವರಿಗೆ ನಮ್ಮ ಬಿಲ್ಲವ ಪೇಜಿನ ಎಲ್ಲಾರ ಪರವಾಗಿ ಜನುಮದಿನದ ಶುಭಾಶಯಗಳು
©BillawasGurupuraKaikamba