ಕಳೆದ ವರ್ಷದಂತೆ ಮಂಗಳೂರು-ಪುತ್ತೂರು ದೀಪಾವಳಿ ಟೂರ್ ಪ್ಯಾಕೇಜ್ ಜೊತೆ ಈ ವರ್ಷ ಹೊಸದಾಗಿ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಅಕ್ಟೋಬರ್ 19,20,21,22,23,24 ಕ್ಕೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್ ಏರ್ಪಡಿಸುವುದಾಗಿ ಮಂಗಳೂರು ಕೆ. ಎಸ್. ಆರ್. ಟಿ. ಸಿ. ಪ್ರಮುಖ ನಿಯಂತ್ರಣ ಅಧಿಕಾರಿ(D C) ತಿಳಿಸಿದ್ದಾರೆ.
ಮಂಗಳೂರು ಕೆ. ಎಸ್. ಆರ್. ಟಿ. ಸಿ ವಿಭಾಗ ಕಳೆದ ವರ್ಷದಂತೆ ಈ ವರ್ಷ ಕೂಡ ಮಂಗಳೂರು ದಸರಾ ದರ್ಶನ ಹಮ್ಮಿಕೊಂಡಿದ್ದು ಕಳೆದ ವರ್ಷ ದೀಪಾವಳಿಗೆ ಮಂಗಳೂರು – ಪುತ್ತೂರು ಟೂರ್ ಪ್ಯಾಕೇಜ್ ಹಮ್ಮಿಕೊಂಡಿದ್ದು ದೀಪಾವಳಿ ಸಂಧರ್ಭದಲ್ಲಿ ವಿಟ್ಲ ಪಂಚಲಿಂಗೇಶ್ವರ, ಪುತ್ತೂರಿನ ಮಹಾಲಿಂಗೇಶ್ವರ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಸೇರಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಟೂರ್ ಪ್ಯಾಕೇಜ್ ಹಮ್ಮಿಕೊಳ್ಳಲಾಗಿತ್ತು. ಈ ವರ್ಷ ಕೂಡ ದೀಪಾವಳಿಗೆ ಮಂಗಳೂರು- ಪುತ್ತೂರು ದೀಪಾವಳಿ ಟೂರ್ ಪ್ಯಾಕೇಜ್ ನಿಗದಿಯಾಗಿದೆ ಎಂದು ಮಂಗಳೂರಿನ ಕೆ.ಎಸ್.ಆರ್. ಟಿ. ಸಿ. ಪ್ರಮುಖ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿಯವರು ಪದ್ಮರಾಜ್ ಆರ್ ಜೊತೆ ಮಾತುಕತೆ ಸಂಧರ್ಭ ತಿಳಿಸಿದ್ದಾರೆ. ಪದ್ಮರಾಜ್ ರವರು ಮಂಗಳೂರು-ಪುತ್ತೂರು ಟೂರ್ ಪ್ಯಾಕೇಜನ್ನು ನವರಾತ್ರಿಯ ಅಕ್ಟೋಬರ್ 16 ರಿಂದ 24 ರವರೆಗೆ ನಡೆಸಿಕೊಡುವಂತೆ ವಿನಂತಿಸಿದರು. ಗೆಜ್ಜೆಗಿರಿ ಕ್ಷೇತ್ರಾ ಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆಯವರು ಕೂಡ ಈ ಬಗ್ಗೆ ವಿನಂತಿಸಿದ್ದರು. ಕೆ.ಎಸ್. ಆರ್. ಟಿ. ಸಿಯ ಸರಳ ಸಜ್ಜನ ಅಧಿಕಾರಿಯಾದ ರಾಜೇಶ್ ಶೆಟ್ಟಿ ಯವರು ದೀಪಾವಳಿ ಮಂಗಳೂರು-ಪುತ್ತೂರು ಟೂರ್ ಪ್ಯಾಕೇಜ್ ಜೊತೆ ಈ ವರ್ಷ ಹೊಸದಾಗಿ ದಸರಾ ಪ್ಯಾಕೇಜ್ ನಲ್ಲಿ ಮಂಗಳೂರು-ಪುತ್ತೂರು ಸೇರಿಸಿ ರುವುದಕ್ಕೆ ಕೆ. ಎಸ್. ಆರ್. ಟಿ. ಸಿ. ಗೆ ಅಭಿನಂದನೆಗಳು.