TOP STORIES:

“ಕಸ್ತೂರಿ ಕನ್ನಡ” ಬಹರೈನ್ ಎಫ್.ಎಂ. ರೇಡಿಯೋ ಕಾರ್ಯಕ್ರಮದ ರೂವಾರಿ ಕಮಲಾಕ್ಷ ಅಮೀನ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ


ಬಹರೈನ್ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕದಿಂದ ಕನ್ನಡತುಳು ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದ ಶ್ರೀಕಮಲಾಕ್ಷ ಅಮೀನ್ ರವರ ಬಹುಮುಖೀ ಸೇವೆಯನ್ನು ಸರಕಾರವು ಗುರುತಿಸಿ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿರಾಜ್ಯೋತ್ಸವಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. 1991ರಲ್ಲಿ ಬಹರೈನ್ ಗೆ ಬಂದಿದ್ದಕಮಲ್ನಂತರ ಹಿಂದೆ ತಿರುಗಿ ನೋಡಿಲ್ಲ. ಕನ್ನಡ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸುಧೆ, ಕನ್ನಡತುಳು ಸಮ್ಮೇಳನಗಳು, ಹೀಗೆ ಎಲ್ಲಾಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಬಹರೈನ್ ಉತ್ಕೃಷ್ಟ ನಿರೂಪಕನೆಂಬ ಹೆಗ್ಗಳಿಕೆಗಳ ಮಧ್ಯೆ ಬಹರೈನ್ರೇಡಿಯೋದಲ್ಲಿಕಸ್ತೂರಿ ಕನ್ನಡವೆಂಬ ಕನ್ನಡ ಎಫ್.ಎಂ. ರೇಡಿಯೋವನ್ನೂ ಪ್ರಾರಂಭಿಸಿದ ಕೀರ್ತಿ ಇವರದ್ದು. ಇದೇ ಎಫ್.ಎಂ. ನಲ್ಲಿ  ಜಯಮಾಲಾ ಹಾಗೂ ಆಗ ಕಾರ್ಮಿಕ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ರನ್ನು ಸಂದರ್ಶಿಸಿದ್ದರು. ಇವರ ಸ್ಪಷ್ಟ ಹಾಗೂಶುದ್ಧ ಕನ್ನಡದ ನಿರೂಪಣೆಯನ್ನು ಮೆಚ್ಚಿಕೊಂಡವರ ಸಾಲಿನಲ್ಲಿ ಶ್ರೀ ಬಿ. ಎಸ್. ಯೆಡಿಯೂರಪ್ಪ, ಶ್ರೀ ಅಭಯಚಂದ್ರ ಜೈನ್, ಕ್ಯಾಪ್ಟನ್ಗಣೇಶ್ ಕಾರ್ಣಿಕ್, ಮುಂತಾದವರು ಸೇರುತ್ತಾರೆ.

ಕರಾವಳಿ ಜಿಲ್ಲೆಗಳ ಕೆಲವೊಂದು ಕುಟುಂಬಗಳಿಗಾಗಿ ದ್ವೀಪದಲ್ಲಿ ಧನ ಸಂಗ್ರಹಿಸಿ ನೆರವಾದ ಹಿನ್ನೆಲೆಯೂ ಇವರದ್ದಾಗಿದೆ. ಕನ್ನಡ ಭಾಷೆಹಾಗೂ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ಕನ್ನಡದ ಕಂಪನ್ನು ಬಹರೈನ್ ದೇಶದಲ್ಲಿ ಪಸರಿಸುವಲ್ಲಿ ಇವರ ಕೊಡುಗೆದೊಡ್ಡಮಟ್ಟದಲ್ಲಿದೆ. ಕನ್ನಡ ಸಿನೆಮಾ ರಂಗದಲ್ಲಿ ಬಹಳಷ್ಟು ಮೇರು ಕಲಾವಿದರೊಡನೆ ಇವರಿಗೆ ನಿಕಟ ಸಂಪರ್ಕವಿದೆ.

ಕಳೆದ ದಶಕದಲ್ಲಿ ಇವರು ಗೆಳೆಯರೊಡನೆ ಹುಟ್ಟು ಹಾಕಿದನಮ್ಮ ಕನ್ನಡವೇದಿಕೆಯು ಬಹರೈನ್ ನಲ್ಲಿ ಉತ್ಕೃಷ್ಟ ಮಟ್ಟದ ಕನ್ನಡಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದೆ. ಸ್ಯಾಂಡಲ್ ವುಡ್ ಶ್ರೀನಾಥ್, ನೆನಪಿರಲಿ ಪ್ರೇಮ್, ಗುರು ಕಿರಣ್, ದರ್ಶನ್, ರವಿ ಶಂಕರ್, ಅನುರಾಧ ಭಟ್ ರಂತಹಾ ದಿಗ್ಗಜರನ್ನು ಆಹ್ವಾನಿಸಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಡದಿ ಸೋನಲ್, ಮಕ್ಕಳಾದ ರಿಶಾನ್ ಮತ್ತು ಚಿರಾಗ್ ರನ್ನೊಳಗೊಂಡ ಸುಖೀ ಸಂಸಾರ ಇವರದ್ದು. ಬಹರೈನ್ ನಿಂದದಕ್ಷಿಣಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಇವರು.

ಅಭಿನಂದನೆಗಳು ಕಮಲ್. ಬಹರೈನ್ ಕನ್ನಡಿಗರ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಇತಿಹಾಸ ತಾನಾಗಿನಿರ್ಮಾಣವಾಗುವದಿಲ್ಲ. ಸಾಧಕರಿಂದ ನಿರ್ಮಿಸಲ್ಪಡುತ್ತದೆ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »