ವೃತ್ತಿಯಲ್ಲಿ ಶಿಕ್ಷಕಿಯಾಗಿ, ನಾಟಕರಂಗದ ಕಲಾವಿದೆಯಾಗಿ ರಾಷ್ಟ್ರ ಮಟ್ಟದಲ್ಲಿ ಬಂಗಾರದ ಪದಕವನ್ನು ಮಡಿಲಿಗೇರಿಸಿಕೊಂಡಿರುವ ಕಾವ್ಯಶ್ರೀ ಜೋಡುಕಲ್ಲು. ಇದೀಗ ಕೇರಳ ರಾಜ್ಯ ಮಟ್ಟದ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜಯ ಬಟ್ಯ ಪೂಜಾರಿ ಯವರ ಸುಪುತ್ರಿ ಕಾವ್ಯಶ್ರೀ ಜೋಡುಕಲ್ಲು ಇವರನ್ನು ಕಾಸರಗೋಡು ಬಿಲ್ಲವ ಸಂಘಗಳ ಒಕ್ಕೂಟ ದ ವತಿಯಿಂದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ದೇರಂಬಲ, ಕೋಶಾಧಿಕಾರಿ ಅಶೋಕ್ ಎಂ ಸಿ ಲಾಲ್ಬಾಗ್ ಮತ್ತು ಪದಾಧಿಕಾರಿಗಳಾದ ಚಂದ್ರಹಾಸ ಕಡಂಬಾರ್, ಅಶ್ವಿನಿ ಕಲ್ಲಗದ್ದೆ, ರಾಮಕೃಷ್ಣ ಸಂತಡ್ಕ, ಮನೀಶ್ ಸುಣ್ಣಾರ ಮೊದಲಾದವರು ಸೇರಿ ಗೌರವಿಸಿದರು.
ADVT: