ಕೇಪು ವಲಯ ಸಮಿತಿಯ ಕಾರ್ಯಧ್ಯಕ್ಷರಾಗಿ ಸಮಾಜ ಸೇವಕ ಸುಧಾಕರ ಪೂಜಾರಿ ಬಡಕೋಡಿ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ
ವಿಟ್ಲದ ಕೇಪುವಿನಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು. ಧರ್ಮದರ್ಶಿಗಳು ಕ್ಷೇತ್ರದ ಜೀರ್ಣೋದ್ಧಾರ ಹಾಗೂಬ್ರಹ್ಮಕಲಶೋತ್ಸವದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಧಾಕರ ಪೂಜಾರಿ ಬಡಕೋಡಿ ಯವರು ಕೇಪು ವಲಯದಿಂದ ಕ್ಷೇತ್ರದಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.ವೇದಿಕೆಯಲ್ಲಿ ಪದ್ಮನಾಭ ಕಲ್ಲಂಗಳ, ಸಂತೋಷ್ ಮೈರ, ಚಂದ್ರಶೇಖರ್ವಳಕಟ್ಟೆ, ಸುರೇಶ್ ಕಾಪಿಕಾಡ್, ಧನಂಜಯ ಅತಿಕ್ರಯಬೈಲು, ಹರೀಶ್ ಗೌಡ ಕೊರತಿಗದ್ದೆ , ಬಾಲಕೃಷ್ಣ ಪೂಜಾರಿ ಪೆಲ್ತಡಿ ಹಾಗೂಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ತಾರಿದಾಳ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.
ಕೇಪು ವಲಯ ಸಮಿತಿಯ ಕಾರ್ಯಧ್ಯಕ್ಷರಾಗಿ ಸಮಾಜ ಸೇವಕ ಸುಧಾಕರ ಪೂಜಾರಿ ಬಡಕೋಡಿ ಒಮ್ಮತದಿಂದ ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಪೆಲ್ತಡಿ
ಉಪಾಧ್ಯಕ್ಷರು 1 ಪದ್ಮನಾಭ ಕಲ್ಲಂಗಳ , 2 ಯೋಗೀಶ್
3 ಚಂದ್ರಶೇಖರ ವಳಕಟ್ಟೆ.
ಕಾರ್ಯದರ್ಶಿಯಾಗಿ 1 ಸತೀಶ್ ಕೇಪು
2 ಶ್ರೇಯಸ್ ಕಲ್ಲಂಗಳ
3 ಧನಂಜಯ ಅತಿಕ್ರಯಬೈಲು
4 ಹರೀಶ್ ಕೊರತಿ ಗದ್ದೆ
ಕೋಶಾಧಿಕಾರಿಯಾಗಿ ಶ್ರೀಮತಿ ಭವ್ಯ ಬಡಕೋಡಿ ಹಾಗೂ ಸುಮಾರು 50 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನಾರೋಗ್ಯದಿಂದಿರುವ ಶರಣ್ ರೈ ಕೇಪುರವರ ಧರ್ಮಪತ್ನಿಗೆ ಕ್ಷೇತ್ರದ ವತಿಯಿಂದ ಧನಸಹಾಯವನ್ನುನೀಡುವುದಾಗಿ ಧರ್ಮದರ್ಶಿಗಳು ಭರವಸೆ ನೀಡಿದರು
ನವೀನ್ ಕುಮಾರ್ ಬಿ ಸ್ವಾಗತಿಸಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ರವಿ ಎಸ್.ಎಂ. ಕುಕ್ಕಾಜೆ ವಂದಿಸಿದರು.
ಪತ್ರಕರ್ತ ರಾದ , ಕಿರಣ್ ಕೋಟ್ಯಾನ್ ಕೇಪು , ವಿಷ್ಣುಗುಪ್ತ ಉಪಸ್ಥಿತಿ ಉಪಸ್ಥಿತರಿದ್ದರು.