ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮ ನಡೆಯಿತು. ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ನಿಧಿಸಂಚಯನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ ಕ್ಷೇತ್ರದ ಬೆಳವಣಿಗೆ ಅಭಿವೃದ್ದಿಯಲ್ಲಿ ಅಡಗಿದೆ. ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಲಿದೆ. ಇಚ್ಚಾ ಶಕ್ತಿ, ಕ್ರೀಯಾ ಶಕ್ತಿ, ಜ್ಞಾನ ಶಕ್ತಿ ಇದರಲ್ಲಿ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯ ಎಂದರು.
ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ಅವರು ಮಾತನಾಡಿ ಒಳ್ಳೆಯ ಮನಸ್ಸಿದ್ದವರು ಸಿರಿವಂತಮಾಗಲು ಸಾಧ್ಯ. ಹಿರಿಯರ ಸಾಧನೆಯ ಫಲವಾಗಿ ಕ್ಷೇತ್ರ ಇಷ್ಟೊಂದು ಬೆಳಗಲು ಸಾಧ್ಯವಾಗಿದೆ. ಬಡ ಬಗ್ಗರ ನಿಸ್ವಾರ್ಥ ಸೇವೆ ಕ್ಷೇತ್ರಕ್ಕೆ ಅಪಾರವಿದೆ. ನೀವೆಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಕ್ಷೇತ್ರದ ಜೀರ್ಣೋದ್ಧಾರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ಹೇಳಿದರು. ಬಾಳೆಕಲ್ಲು ಗರಡಿ ಮನೆಯ ಮೊಕ್ತೇಸರರಾದ ಕೊರಗಪ್ಪ ಪೂಜಾರಿ ಕಾರ್ಯಕ್ರಮವನ್ನು ದೀಪಬೇಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲ್, ಕುಕ್ಕಾಜೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕಾರಾಜೆ, ವಕೀಲರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕ್ಷೇತ್ರದ ಮೊಕ್ತೇಸರರಾದ ಎಂ.ಕೆ. ಕುಕ್ಕಾಜೆ, ಮಾಣಿಲ ಮುರುವ ಪಂಜುರ್ಲಿ ದೈವಸ್ಥಾನದ ಶ್ರೀಕಾಂತ್ ಮಾಣಿಲತ್ತಾಯ, ಮಾಣಿಲ ಗ್ರಾ.ಪಂ. ಅಧ್ಯಕ್ಷರಾದ ವನಿತಾ ತಾರಿದಳ ಮೊದಲಾದವರು ಉಪಸ್ಥಿತರಿದ್ದರು.