ಶ್ರೀ ನಾರಾಯಣ ಗುರುಗಳ ಅನುಯಾಯಿಗಳಿಗೆ ಸಂದ ಜಯ ಹಾಗೂ ಸಮಾಜದ ಅಭಿವೃದ್ಧಿಗಾಗಿ ನಡೆಸುವ ಕಾರ್ಯಚಟುವಟಿಕೆಗಳಿಗಾಗಿ ಬ್ರಹ್ಮಶ್ರೀ ನಾರಾಯಣಗುರು ದೇವರ ಅನುಗ್ರಹಕ್ಕಾಗಿ ವಿಶೇಷ ಗುರು ಪೂಜೆ ಶನಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು.
ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕೋಶಾಧಿಕಾರಿ ಆರ್.ಪದ್ಮರಾಜ್, ಪ್ರಮುಖರಾದ ಸತ್ಯಜಿತ್ ಸುರತ್ಕಲ್, ರಕ್ಷಿತ್ ಶಿವರಾಂ, ಎಂ. ಜಿ. ಹೆಗ್ಡೆ, ರವಿಪೂಜಾರಿ ಚಿಲಿಂಬಿ, ಸತೀಶ್ ಕುಮಾರ್ ಬಜಾಲ್, ಕಾರ್ಪೊರೇಟರ್ ಅನಿಲ್ ಪೂಜಾರಿ, ಲೊಕೇಶ್ ಕೊಡಿಕೆರೆ, ಪದ್ಮನಾಭ ಅಮೀನ್, ರಾಜೇಂದ್ರ ಚಿಲಿಂಬಿ, ಅನ್ವಿತ್ ಕಟೀಲ್, ಪವನ್, ಪ್ರಭಾಕರ್, ಆನಂದ ಕಾಟಿಪಳ್ಳ, ಪ್ರವೀಣ್ ಅಂಚನ್, ಶೋಭಾ ಕೇಶವ ಮೊದಲಾದವರು ಉಪಸ್ಥಿತರಿದ್ದರು.