TOP STORIES:

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ


ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

ತೊಂಭತ್ತರ ದಶಕದಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಚಿಕ್ಕ ದೇವಸ್ಥಾನವಾಗಿದ್ದ ಶೀಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಇಡೀ ವಿಶ್ವದ ಗಮನವನ್ನು ಶ್ರೀಕ್ಷೇತ್ರದತ್ತ ಸೆಳೆಯುವಂತೆ ಅಭಿವೃದ್ಧಿ ಪಡಿಸಿದರು.ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರೂ ರಾಷ್ಟ್ರ ಮಟ್ಟದ ರಾಜಕೀಯ ಮತ್ಸದ್ಧಿಯೂ ಆಗಿರುವ  ಶ್ರೀ ಬಿ ಜನಾರ್ದನ ಪೂಜಾರಿ ಯವರಿಗೆ ಬಹುಶಃ  ಶ್ರೀ ನಾರಾಯಣ ಗುರುಗಳೇ ನೀಡಿದ ಪ್ರೇರಣೆಯೋ ಶ್ರೀ ಗೋಕರ್ಣನಾಥನ ಇಚ್ಛೆಯೋ?  ಅಥವಾ ಹಿಂದುಳಿದ ವರ್ಗದ ಸಮಸ್ತ ಜನತೆಯ ಆಶೋತ್ತರವೋ ಎಂಬಂತೆ ಇಚ್ಛಾಶಕ್ತಿಯೊಂದು ಹೃದಯಾಂತರಾಳದಿಂದ ಮೂಡಿ ಸಾಕಾರ ಗೊಂಡಿತು. ಈ ಕ್ಷೇತ್ರವನ್ನು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಸಾಮಾಜಿಕ ಸುಧಾರಣಾ ಕೇಂದ್ರವಾಗಿ ಜಾತ್ಯಾತೀತ ಕ್ಷೇತ್ರವಾಗಿ ನವನಿರ್ಮಾಣ ಮಾಡಲು ಪೂಜಾರಿಯವರು ಸಂಕಲ್ಪ ಮಾಡಿದರು.

ಇಂದು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಸನ್ನಿಧಾನವು ದೇವಲೋಕವೇ ಧರೆಗಿಳಿದಂತೆ ಸೌಂದರ್ಯವನ್ನು ತುಂಬಿಕೊಂಡು, ಭಕ್ತರ ಹೃದಯದಲ್ಲಿ ಭಕ್ತಿಯ ಆಲೆಯನ್ನು ಸೃಷ್ಟಿಸಿ, ಭಕ್ತರು, ಜಿಜ್ಞಾಸುಗಳು ಪ್ರವಾಸಿಗರು ಸೇರಿದಂತೆ ಕೋಟ್ಯಾಂತರ ಮಂದಿಯನ್ನು ಆಕರ್ಷಿಸುತ್ತಿದೆಯೆಂದರೆ, ಅದರ ಹಿಂದಿರುವ ಅಗಾಧ ಸಂಕಲ್ಪ ಶಕ್ತಿ, ಚೇತನ ಶಕ್ತಿ ಸನ್ಮಾನ್ಯ ಜನಾರ್ದನ ಪೂಜಾರಿಯೆಂದರೆ ಅತಿಶಯೋಕ್ತಿಯಲ್ಲ. ಸುಮಾರು 34 ವರ್ಷಗಳ ಹಿಂದೆ ಶ್ರೀಕ್ಷೇತ್ರದ ನವೀಕರಣಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸಿ ಕೇವಲ ಅಲ್ಪ ಅವಧಿಯಲ್ಲೇ ನವೀಕರಣದ ಕೆಲಸ ಕಾರ್ಯ ಮುಗಿಯುವಂತೆ ನೋಡಿಕೊಂಡು, 1991 ರಲ್ಲಿ ನವೀಕರಣಗೊಂಡು ಪವಾಡಸದೃಶವಾಗಿ ಶ್ರೀಕ್ಷೇತ್ರ ಕಂಗೊಳಿಸುವಂತೆ ಮಾಡಿದ ಸನ್ಮಾನ್ಯ ಜನಾರ್ದನ ಪೂಜಾರಿಯವರ ಅವಿರತ ಪರಿಶ್ರಮ, ಸಮಗ್ರ ಚಿಂತನೆ, ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿದ ಪರಿ ಭಕ್ತರನ್ನು ವಿಸ್ಮಯಗೊಳಿಸಿದೆ. ಕ್ಷೇತ್ರ ದಿನಗಳೆದಂತೆ ಭಕ್ತ ಸಮೂಹವನ್ನು ದೇಶ ವಿದೇಶಗಳಿಂದ ತನ್ನೆಡೆಗೆ ಆಕರ್ಷಿಸತೊಡಗಿದ್ದು ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.   ನವರಾತ್ರಿ ಸಂದರ್ಭದ ದಸರಾ ಮಹೋತ್ಸವವು ಇಂದು ಮಂಗಳೂರು ದಸರಾವೆಂದು ಜಗದ್ವಿಖ್ಯಾತವಾಗಿದೆ.

✍️ರಾಜೇಂದ್ರ ಚಿಲಿಂಬಿ


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »