ಬ್ರಹ್ಮ ಶ್ರೀ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ಯುವವಾಹಿನಿ(ರಿ) ಕಂಕನಾಡಿ ಘಟಕ ಇದರ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಕಂಕನಾಡಿಯ ಸಮೃದ್ಧಿ ಸಭಾಭವನದಲ್ಲಿ ಜರಗಿತು.
ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾಧರ್ಶಗಳ ಬಗ್ಗೆ ಮಾತನಾಡಿದ ರಾಮಚಂದ್ರ ಪೂಜಾರಿ ಯವರು ಗುರುಗಳು ಕೇವಲ ವ್ಯಕ್ತಿಯಲ್ಲ ಸಮಾಜದಲ್ಲಿರುವ ದೇವರು ಮತ್ತು ಧರ್ಮದ ಹೆಸರಿನಲ್ಲಿ ರುವ ಅಂಧಕಾರವನ್ನು ಹೋಗಲಾಡಿಸಿ ಜಾತಿ ಭೇಧ ಮತ ದ್ವೇಷ ಇಲ್ಲದ ಮಾನವೀಯ ನಾರಾಯಣ ಗುರು ಧರ್ಮವನ್ನು ಜಗತ್ತಿಗೆ ಸಾರಲು ಬಂದ ಪರ ಬ್ರಹ್ಮ ಸ್ವರೂಪ. ದೇವರು ಮನುಷ್ಯನ ರೂಪದಲ್ಲಿ ಬಂದು ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡಿದ ವಿಶ್ವಗುರು ಬ್ರಹ್ಮ ಶ್ರೀ ನಾರಾಯಣ ಗುರು ಎಂದರು. ನಾವೆಲ್ಲರೂ ಗುರುಗಳ ತತ್ವಗಳನ್ನು ಅನುಸರಿಸುವ ಮೂಲಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಾಧನೆ ಯನ್ನು ಮಾಡ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಿಶೋರ್ ಉಜೋಡಿ, ಜಗದೀಶ್ ಸುವರ್ಣ, ರವೀಂದ್ರ ಪೂಜಾರಿ, ಸುಮಾವಸಂತ್, ಹರೀಶ್ ಕೆ ಸನಿಲ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.