‘ಸಂಘಟನೆಯಿಂದ ಬಲಯುತರಾಗಿ’ ಎಂಬ ಗುರುಗಳ ಸಂದೇಶದಂತೆ ಕೋಡಿಕಲ್ ಗುರುನಗರ ಪರಿಸರದಲ್ಲಿ ನಾರಾಯಣಗುರುಗಳ ತತ್ವದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ಹಳೆಬೇರು ಹೊಸಚಿಗುರುಗಳು ಸಂಘಟನಾತ್ಮಕವಾಗಿ ಸೇರಿಕೊಂಡು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರವನ್ನು ಬಹಳ ಸುಂದರ ಮತ್ತು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ.
ಕೇವಲ 10 ಸೆಂಟ್ಸ್ ಜಮೀನಿನಲ್ಲಿ ಸುಸಜ್ಜಿತ ಮಂದಿರ ಮತ್ತುಸಭಾಂಗಣ ನಿರ್ಮಾಣ ಮಾಡಬಹುದು ಎಂಬುದನ್ನು ಕೋಡಿಕಲ್ ಪರಿಸರದ ಎಸ್‌ಎನ್‌ಡಿಪಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ಇಂತಹ ಕಾರ್ಯ ಪ್ರಶಂಸನೀಯ. ಈ ಮಂದಿರ ಜಾತಿ ಮತ ಭೇದ ಮರೆತು ನಾವೆಲ್ಲರೂ ಒಂದೇ ಎನ್ನುವ ತತ್ವ ಪಸರಿಸುತ್ತ ಮುಂದಿನ ದಿನಗಳಲ್ಲಿ ಜ್ಞಾನ ಮಂದಿರವಾಗಿ ಬೆಳಗಲಿ ಎನ್ನುವ ಸದಾಶಯ ನನ್ನದು.
ಶಿವಗಿರಿಯ ಮನೋಜ್ ತಂತ್ರಿ ನೇತೃತ್ವದಲ್ಲಿ ಮಹೇಶ್ ಶಾಂತಿ ಮತ್ತು ನವೀನ್ ಶಾಂತಿ ವೈದಿಕತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಿಂಬ ಪ್ರತಿಷ್ಠಾಪನೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನ್ನ ಪಾಲಿನ ಸುಯೋಗವೇ ಸರಿ. ಮಂದಿರ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಕಿಶೋರ್ ಕುಮಾರ್, ಶಾಸಕರಾದ ಭರತ್ ಶೆಟ್ಟಿ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸಾಯಿರಾಂ, ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಎಸಿಪಿ ಮಹೇಶ್ ಕುಮಾರ್, ಕಾರ್ಪೋರೆಟರ್‌ಗಳಾದ ಕಿರಣ್‌ಕುಮಾರ್, ಅನೀಲ್ ಕುಮಾರ್, ವೇದಾವತಿ, ಮನೋಜ್‌ಕುಮಾರ್, ಪ್ರಮುಖರಾದ ಸುಮಲತಾಸುವರ್ಣ, ರೋಹಿಣಿ, ಪದ್ಮನಾಭ ಕೋಟ್ಯಾನ್, ಲೀಲಾಕ್ಷ ಕರ್ಕೇರ, ದಯಾಮಣಿ ವಿ. ಕೋಟ್ಯಾನ್, ಜಯಂತಿ ದುಗ್ಗಪ್ಪ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.