TOP STORIES:

ಕೋವಿಡ್ ಗುಣವಾಯ್ತಾ? ಹಾರ್ಟ್ ಚೆಕಪ್ ಮಾಡಿಸದಿದ್ರೆ ಅಪಾಯ ಇನ್ನೂ ಇದೆ!


  • ಬೆಂಗಳೂರು : ಕೋವಿಡ್ ಗುಣಮುಖರಾದ ನಂತರ ಅಬ್ಬಾ ಅಂತೂ ಬದುಕಿಕೊಂಡೆ ಅಂತ ನಿಟ್ಟುಸಿರು ಬಿಡುತ್ತಿರುವ ಅನೇಕರು ನಂತರವೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಅದರಲ್ಲೂ ಹೃದಯದ ಪರೀಕ್ಷೆಯನ್ನಂತೂ ಖಂಡಿತಾ
    ತಪ್ಪಿಸಬಾರದು ಎನ್ನುತ್ತಾರೆ ವೈದ್ಯರು.
  • ಕೋವಿಡ್ ನಿಂದ ಬಳಲಿ ನಂತರ ಸಂಪೂರ್ಣವಾಗಿ ಗುಣಮುಖರಾದ ಅನೇಕರಲ್ಲಿ ಹೃದಯ ಮತ್ತು ರಕ್ತನಾಳ ಸಂಬಂಧಿ ಸಮಸ್ಯೆಗಳು ಕಂಡುಬಂದಿವೆ. ಅನೇಕ ಪ್ರಕರಣಗಳಲ್ಲಂತೂ ಬಹಳ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಸಾಕಷ್ಟಿವೆ. ಹಾಗಾಗಿ ತಪ್ಪದೇ ಕನಿಷ್ಟ 3 ತಿಂಗಳಿಗೆ ಒಂದು ಸಲವಾದರೂ ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಇದರಿಂದ ದಿಢೀರನೆ ಹೃದಯಾಘಾತವಾಗುವುದನ್ನು ತಪ್ಪಿಸಬಹುದು.
  • ಕೋವಿಡ್ ನಂತರದ ಹೃದ್ರೋಗಗಳು ಸಣ್ಣ ವಯಸ್ಸಿನವರನ್ನು ಕಾಡುತ್ತಿರುವುದು ಆತಂಕಕಾರಿ ವಿಚಾರ. ಅದರಲ್ಲೂ 50 ವರ್ಷದೊಳಗಿನವರಾದರೆ ಹೃದ್ರೋಗ ಇರಲಿ, ಇಲ್ಲದಿರಲಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎನ್ನುತ್ತಾರೆ
ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಆರ್ ಕೇಶವ.
ಕೋವಿಡ್ ಗೂ ಹೃದಯಾಘಾತಕ್ಕೂ ಏನು ಸಂಬಂಧ?

ಇತ್ತೀಚೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕೋವಿಡ್ನಿಂದ ಗುಣಮುಖರಾದ 3-4 ವಾರಗಳ ಬಳಿಕ ಹೃದಯಾಘಾತ ಹೆಚ್ಚಳವಾಗುತ್ತಿರುವ ಬಗ್ಗೆ ತಿಳಿದುಬಂದಿದೆ. ಅದರಲ್ಲೂ ಎರಡನೇ ಅಲೆಯಲ್ಲಿ ಸಣ್ಣ ವಯಸ್ಸಿನವರನ್ನೇ ಹೆಚ್ಚಾಗಿ ಕೋವಿಡ್ ಬಾಧಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರು ನಂತರವೂ ದೀರ್ಘಕಾಲದವರಗೆ ಸಂಪೂರ್ಣ ನಿಶ್ಶಕ್ತಿ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಹೃದಯಾಘಾತ ಸಂಭವ ಹೆಚ್ಚಿರುತ್ತದೆ ಎನ್ನುತ್ತಾರೆ ವೈದ್ಯರು.
ಎಚ್ಚರಿಕೆ ವಹಿಸುವುದು ಹೇಗೆ?
ಒಂದು ಸಲ ಕೋವಿಡ್ ಬಂದರೆ ದೇಹ ಸಹಜವಾಗಿಯೇ ಸುಸ್ತಾಗಿರುತ್ತದೆ. ಅದು ರೋಗಲಕ್ಷಣ ಇಲ್ಲದಿರುವ ಏಸಿಂಪ್ಟಮ್ಯಾಟಿಕ್ ಸ್ಥಿತಿ ಇರಲಿ ಅಥವಾ ತೀವ್ರವಾದ ಸೋಂಕು ತಗುಲಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇರಬೇಕಾಗಿ ಬಂದ ಗಂಭೀರ ಪ್ರಕರಣವಿರಲಿ ದೇಹವನ್ನು ಕೋವಿಡ್ ಹೈರಾಣು ಮಾಡಿ ಹಾಕಿರುವುದಂತೂ ಸತ್ಯ. ಇದೇ ಗೊಂದಲದಲ್ಲಿ ಇರುವ ಜನ ಹೆಚ್ಚಾಗಿ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ಕೋವಿಡ್ನಿಂದ ಗುಣವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುತ್ತದೆ. ಹೀಗಾಗಿ, ದೇಹಕ್ಕೆ ಅಗತ್ಯ ಪ್ರೋಟಿನ್ಯುಕ್ತ ಆಹಾರ ನೀಡುವುದು, ವ್ಯಾಯಾಮ, ಯೋಗ, ಧ್ಯಾನ ಮಾಡುವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು, ಜಂಕ್ ಫುಡ್ ಸೇವನೆ ನಿಯಂತ್ರಣ ಸೇರಿದಂತೆ ಇತರೆ ಅನಾರೋಗ್ಯಕರ ಹವ್ಯಾಸವನ್ನು ತ್ಯಜಿಸಿ, ಹೃದಯದ ಆರೈಕೆಗೆ ಒತ್ತು ನೀಡಬೇಕು. ಅಲ್ಲದೆ, ಕೆಲಸದ ಒತ್ತಡ ಕೂಡ ಹೃದಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಕನಿಷ್ಠ 3 ತಿಂಗಳು ಹೃದಯದ ಆರೋಗ್ಯದತ್ತ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಸಣ್ಣ ವಯಸ್ಸಿನವರಲ್ಲಿ ಹೃದಯ ಸಮಸ್ಯೆ ಹೆಚ್ಚಳ
ಮೊದಲೆಲ್ಲಾ ನಿವೃತ್ತಿ ಹೊಂದಿದವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡುಬರುತ್ತಿತ್ತು. ಆದ್ರೆ ಇತ್ತೀಚೆಗೆ ಯುವಕರಲ್ಲೇ ಹೆಚ್ಚೆಚ್ಚು ಹೃದಯಾಘಾತ ಮತ್ತು ಅದಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. ಚಿದರಲ್ಲು 20ರಿಂದ 45 ವರ್ಷದೊಳಗಿನವರಲ್ಲಿ ಈ ಪ್ರಕರಣ ಮತ್ತಷ್ಟು ಹೆಚ್ಚು ಎನ್ನಲಾಗಿದೆ. 2017ರಲ್ಲಿ ನಡೆದ ಅಧ್ಯಯನ ಒಂದರ ಪ್ರಕಾರ ವರ್ಷಕ್ಕೆ 4 ಲಕ್ಷ ಮಧ್ಯವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರಂತೆ.
ಲಸಿಕೆಯಿಂದ ಹೃದಯಕ್ಕೂ ಪ್ರಯೋಜನ ಇದೆಯಾ?
ಕೋವಿಡ್ ಬರದಂತೆ ಅಥವಾ ಬಂದರೂ ಹೆಚ್ಚು ಹಾನಿ ಮಾಡದಂತೆ ತಡೆಯುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವುದು ಈಗಾಗಲೇ ತಿಳಿದಿರುವ ವಿಚಾರ. ಹಾಗಾಗಿ ದೇಹದ ಮೇಲಾಗುವ ಅಪಾಯವನ್ನು ಕಡಿಮೆ ಮಾಡಿದರೆ ಸಹಜವಾಗಿಯೇ ಹೃದಯದ ಆರೋಗ್ಯವನ್ನೂ ಕಾಪಾಡುವ ಅವಕಾಶ ಸಿಕ್ಕಂತಾಗುತ್ತದೆ. ಹಾಗಾಗಿ ಲಸಿಕೆ ಪಡೆಯುವುದು ಬಹಳ ಅವಶ್ಯಕ ಎನ್ನುತ್ತಾರೆ ವೈದ್ಯರು. ಕೇವಲ ಕೋವಿಡ್ ನಿಂದ ಕಾಪಾಡುವುದು ಮಾತ್ರವಲ್ಲ, ಲಸಿಕೆ ಹೃದಯದ ಮೇಲಾಗುವ ವಿಪರೀತ ಪರಿಣಾಮಗಳನ್ನೂ ಆ ಮೂಕಲ ತಡೆಯಲು ಸಹಕಾರಿ ಎನ್ನಲಾಗಿದೆ. ಈಗಾಗಲೇ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಎಲ್ಲರೂ ಸಾಕಷ್ಟು ಏಟು ತಿಂದಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಆರೋಗ್ಯವಂತ ಜೀವನಶೈಲಿ ರೂಢಿಸಿಕೊಂಡರೆ ಮೂರನೇ ಅಲೆಯ ಅಪಾಯ ತಪ್ಪಿಸಬಹುದು ಎನ್ನುವುದು ತಜ್ಞರ ಅಭಿಮತ.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »