ತುಳುನಾಡಿನ ಪ್ರಸಿದ್ಧ ಕೊರಗಜ್ಜ,ಕೊರಗರ ಪಂಜುರ್ಲಿ, ಪಿಲಿಚಾಮುಂಡಿ ಕಾರಣಿಕ ಕ್ಷೇತ್ರ ಜಾರಿಗೆಕಟ್ಟೆ,ಶಿರ್ವ.ಈ ಕಾರಣಿಕ ಕ್ಷೇತ್ರದಪಾತ್ರಿ, ಧರ್ಮದರ್ಶಿಗಳಾದ ದಿವಾಕರ ಪೂಜಾರಿ,ಪುತ್ರ ಧೀರಜ್ ಮತ್ತು ಕುಟುಂಬ ಸಮೇತರಾಗಿ ಬಂದು ತಾಯಿ ದೇವಿಮಾತೆಯಸೇವೆಗೈದು ಮೂಲಸ್ಥಾನ ಗರಡಿಯಲ್ಲಿ ಸಾಯನ ಬೈದ್ಯರೊಂದಿಗೆ ಆರಾಧನೆ ಪಡೆಯುತ್ತಿರುವ ಬ್ರಹ್ಮಬೈದ್ಯೆರುಗಳ ದರುಶನ ಪಡೆದುಪುನಿತರಾಗಿ ಅತೀವ ಸಂತಸ ವ್ಯಕ್ತಪಡಿಸಿದ್ದರು.ಜಾರಿಗೆಕಟ್ಟೆ ಭಕ್ತರ ಇಷ್ಟಾರ್ಥ ನೆರವೇರಿಸುವ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿ ಪ್ರತಿಸೋಮವಾರ ಪ್ರಶ್ನೆ ಕೇಳಿ ಅದೇಷ್ಟೋ ಭಕ್ತರು ತಮ್ಮ ಜೀವನದ ಸಂಕಷ್ಟ ಬಗೆಹರಿಸಿಕೊಂಡ ಭವ್ಯವಾಗಿ ನಿರ್ಮಾಣ ಕೊಂಡಿರುವ ಕ್ಷೇತ್ರವಾಗಿದೆ.ಇಲ್ಲಿಯ ಧರ್ಮದರ್ಶಿಗಳಾದ ದಿವಾಕರ ಪೂಜಾರಿ ಪರಿವಾರ ಸಮೇತರಾಗಿ ಬಂದು ತಾಯಿಗೆ ಹರಿಕೆ ತೀರಿಸಿ ಈ ದಿನ ಸಂತುಷ್ಟರಾದರು.ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಗೌರವ ಪೂರ್ವಕವಾಗಿ ಪ್ರಸಾದ ನೀಡಿ ಹರಸಲಾಯಿತು.