ಗರಡಿಗಳು, ಗುತ್ತು ಮನೆತನ ಬರ್ಕೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಇತಿಹಾಸ ತಜ್ಞ, ವಿದ್ವಾಂಸ, ಸಂಶೋಧಕರಾದ ಬಾಬುಶಿವ ಪೂಜಾರಿ ಯವರು ಈ ಬಗ್ಗೆ ಹಲವಾರು ಕೃತಿಗಳ ರಚನೆಮಾಡಿದ್ದಾರೆ.
ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಹಳ ಪ್ರಮುಖ ಕೃತಿಶ್ರೀ ನಾರಾಯಣ ಗುರು ವಿಜಯದರ್ಶನದ ಲೇಖಕರಾದ ಇವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಹಾ ಅನ್ನದಾನಸೇವೆಗೆ ತಮ್ಮ ಕಾಣಿಕೆಯನ್ನು ಸಲ್ಲಿಸಿದರು. ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಗ್ಗೆ ಅಪಾರನಂಬಿಕೆ ಮತ್ತು ಭಕ್ತಿಯನ್ನು ಹೊಂದಿರುವ ಶ್ರೀಯುತ ರು ಪ್ರತೀ ವರ್ಷ ಮುಂಬೈ ಯಿಂದ ಗೆಜ್ಜೆಗಿರಿಗೆ ಆಗಮಿಸುತ್ತಾರೆ, ಇವರ ಸ್ವಂತಊರು ಬಾರ್ಕೂರು. ಇವರನ್ನು ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಗೌರವಿಸಿದರು.