ಗಾನ ಗಾರುಡಿ
ಭಾರತ ಚಿತ್ರರಂಗ ಕಂಡ ಮಹಾನ್ ಹಾಡುಗಾರ
ಉಸಿರ ತೊರೆದು ಮರೆಯಾಗಿ ಹೋದ ನಾಟಕಕಾರ
ಸಾವಿರಾರು ಗಾನ ರಸಿಕರ ಮನಗೆದ್ದ ಜಾದೂಗಾರ
ಗಾಯನ ಲೋಕದಿ ನಿಮ್ಮಯ ಹೆಸರು ಅಜಾರಮರ
ಹದಿನಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿ
ಸಂಗೀತ ಕ್ಷೇತ್ರದಿ ಮಿಂಚಿನಂತೆ ಮಾಡಿದಿರಿ ಮೋಡಿ
ನಿಮ್ಮೀ ಹಾಡುಗಳ ಕೇಳುತ್ತಾ ಮೈಮರೆತು ನೋಡಿ
ಅಭಿಮಾನಿಗಳ ಪಾಲಿಗೆ ನೀವಾದಿರಿ ಗಾನ ಗಾರುಡಿ
ಸಂಗೀತ,ನಟನೆ,ನಿರ್ಮಾಪಣೆಗೆ ಸೈ ಎಂದು ಸಾಧಿಸಿ ಹಠ
ಕನ್ನಡ ತೆಲುಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ನಟ
೪ ಭಾಷೆಗಳಲ್ಲಿ ಆರು ಪ್ರಶಸ್ತಿ ಪಡೆದ ಸಂಗೀತ ಸಾಮ್ರಾಟ
ಇಹ ಲೋಕ ತ್ಯಜಿಸಿದರೂ ಮರೆಯಲಾಗದ ಛಾಯೆ ದಿಟ
ಮನಸೂರೆಗೊಳಿಸುವ ಮಧುರ ಕಂಚಿನ ಕಂಠ ಸಿರಿಯಲಿ
ಎದೆ ತುಂಬಿ ಬಂದ ಪ್ರೇಮದ ಕಾದಂಬರಿ ಬರೆದೆನು ಕಣ್ಣಿರಲಿ
ಗಾನ ನಿಧಿ-ದಿಗ್ಗಜ ಎಂಬ ಸ್ವರ ಮಾಣಿಕ್ಯ ಲೀನವಾಯಿತಿಲ್ಲಿ
ಪಯಣ ಮುಗಿದೇ ಹೋದರೂ ಈ ಬಂಧನ ಮುಗಿಯದಿರಲಿ ಓಂ ಶಾಂತಿಃ .
✍️ರಶ್ಮಿ ಸನಿಲ್