ಪುತ್ತೂರು: ದೇಯಿ ಬೈದೆತಿ, ಕೋಟಿ–ಚೆನ್ನಯ್ಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸೋಣ ಸಂಕ್ರಮಣದ ಪ್ರಯುಕ್ತ ವಿಶೇಷಪೂಜೆ ಹಾಗೂ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಯಕ್ಷಗಾನ ಮೇಳದ ಕರಪತ್ರ ಬಿಡುಗಡೆ ಆ.17ರಂದುನಡೆಯಲಿದೆ.
ಆ.17 ರ ಬುಧವಾರ ಸಿಂಹ ಸೋಣ ಸಂಕ್ರಮಣದಂದು, ಬೆಳಗ್ಗೆ 8 ರಿಂದ ದ್ವಾದಶ ನಾರಿಕೇಳ ಗಣಪತಿಯಾಗ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಗುರುಪೂಜೆ, ನಂತರ 10.30 ಕ್ಕೆ ಕ್ಷೇತ್ರದ ಎಲ್ಲ ಶಕ್ತಿ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.ಬಳಿಕ “ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ” ಇದರ ನೂತನ ಮೇಳದ ಕಲಾವಿದರ ವಿವರಹಾಗೂ ಪ್ರಸಂಗಗಳ ಮಾಹಿತಿ ಕರಪತ್ರವನ್ನು ಗಣ್ಯರು ಬಿಡುಗಡೆಯಾಗಲಿದೆ.
ಬೆಳಿಗ್ಗೆ 11:30 ಕ್ಕೆ ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ 12:00 ಗಂಟೆಗೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಎಲ್ಲ ಮಾಹಿತಿಗಳನ್ನು ನಿರಂತರವಾಗಿ “ನಮ್ಮ ಕುಡ್ಲ 24×7” ವಾಹಿನಿ ಪ್ರಕಟಿಸಲಿದೆ. ಹೆಚ್ಚಿನಮಾಹಿತಿಗಾಗಿ ಕ್ಷೇತ್ರದ ಕಛೇರಿ ದೂರವಾಣಿಯನ್ನು ಸಂಪರ್ಕಿಸಬಹುದು: ಮೊ– 9148894088