ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಲ್ಲಿ ಮಾರ್ಚ್ 3 ರಿಂದ 7 ರವರೆಗೆ ಜರಗಿದಜಾತ್ರಾಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮವಹಿಸಿ ದುಡಿದ ನಮ್ಮ ಸಮಾಜದ ಎಲ್ಲಾಬಂಧುಗಳಿಗೆ, ಬಿಲ್ಲವ ಸಂಘಗಳು, ಶ್ರೀ ನಾರಾಯಣ ಗುರುಸಂಘಗಳು ಬಿಲ್ಲವ ಯುವ ಸಂಘಟನೆಗಳಿಗೆ, ಸಂಘ ಸಂಸ್ಥೆಗಳಿಗೆ, ಸ್ವಯಂ ಸೇವಕರಿಗೆ, ಕಚೇರಿಯ ಸಿಬ್ಬಂದಿಗಳಿಗೆ, ವೈದಿಕ ವಿಧಿವಿಧಾನಗಳನ್ನು ಯಶಸ್ವಿಯಾಗಿ ನಡೆಸಿದ ಸಮಾಜದ ಶಾಂತಿಗಳಿಗೆ, ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಶ್ರೀ ಕ್ಷೇತ್ರದ ಭಕ್ತರು ನೀಡಿದ ಸಹಕಾರ ಮತ್ತು ತನು ಮನ ಧನಗಳಿಂದ ಸಹಕರಿಸಿದ ಎಲ್ಲ ಭಕ್ತರುಗಳಿಗೆ ಜಾತ್ರೋತ್ಸವ ಮತ್ತು ನೇಮೋತ್ಸವವನ್ನು ಅತ್ಯಂತ ಪಾರದರ್ಶಕವಾಗಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿಯಸರ್ವಶಕ್ತಿಗಳು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕ್ಷೇತ್ರಾಡಳಿತ ಸಮಿತಿ ಮತ್ತು ಜಾತ್ರೋತ್ಸವ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ