TOP STORIES:

FOLLOW US

ಚರಿತ್ ಬಾಳಪ್ಪ ಪೂಜಾರಿ ಯಾನೆ ಮುದ್ದುಲಕ್ಷ್ಮೀ ಡಾ॥ಧ್ರುವಂತ್ ಇವರ ಸಾಧನೆಯಕಥೆ


ಪೂಜಾರಿ ಯಾನೆ ಧ್ರುವಂತ್ ಇವರ
ಸಾಧನೆಯ ಕಥೆ

ಕಣ್ಣು ಬಿಟ್ಟಿರುವಷ್ಟು ದಿನ ನಾವು ಪ್ರಪಂಚವನ್ನು ನೋಡಬಹುದು. ಆದರೆ, ಕಣ್ಣು ಮುಚ್ಚಿದ ನಂತರ ನಮ್ಮನ್ನು ಪ್ರಪಂಚ ನೋಡುವಂತೆ ಮಾಡುವುದೇ ಸಾಧನೆ. ತಾನು ಅದೆಷ್ಟೋ ಕಷ್ಟ ಪಟ್ಟು ಅವಕಾಶಗಳಿಗೆ ವಂಚಿತನಾಗಿ, ಸಾಧನೆಯ ಪಣತೊಟ್ಟು , ಹಂತ ಹಂತವಾಗಿ ಸಾಧಿಸುತ್ತಾ, ಇಂದು ಎಲ್ಲರ ಮನ ಮನೆಗಳಲ್ಲಿ ಮನೆ ಮಾಡಿರುವಂತಹ, ಸಾಧಕರ ಹಾದಿಯ ಸಾಧಕ “ಚರಿತ್ ಬಾಳಪ್ಪ ಪೂಜಾರಿ” ಇವರ ಸಾಧನೆಯ ಕಥೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನಲ್ಲಿ ಬಾಳಪ್ಪ ಪೂಜಾರಿ ಮತ್ತು ಪ್ರೇಮ ಬಾಳಪ್ಪ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಮೊದಲನೆಯವರಾಗಿ ಜನಿಸಿದರು. ಇವರ ಪತ್ನಿ ಮಂಜುಶ್ರೀ ಚರಿತ್.
ಇವರು ತನ್ನ ಎಲ್ ಕೆ ಜಿ ಮತ್ತು ಯು ಕೆ ಜಿ ಶಿಕ್ಷಣವನ್ನು ಬಂಟ್ವಾಳದಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಶನಿವಾರ ಸಂತೆ ಕಾಲೇಜಿನಲ್ಲಿ, ಪದವಿ ಮತ್ತು ಉನ್ನತ ವ್ಯಾಸಂಗ(ಬಿಬಿಎಂ)ವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಮುಗಿಸಿ, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇಂಟರ್ನ್ಯಾಷನಲ್ ಬ್ಯಾಂಕ್ “ಹೆಚ್ ಎಸ್ ಬಿ ಸಿ”ಯಲ್ಲಿ ಕೆಲಸ ದೊರೆಯುತ್ತದೆ.

ಬಡ ಕುಟುಂಬದಲ್ಲಿ ಜನಿಸಿದ ಇವರ ತಂದೆ ಕಾಫಿ ಪ್ಲಾಂಟರ್ ಆಗಿ ಕೆಲಸ ಮಾಡುತ್ತಾ ಮತ್ತು ತಾಯಿ ಗೃಹಿಣಿಯಾಗಿ ಇವರನ್ನು ಬೆಳೆಸಿದ್ದಾರೆ. ಇವರು ಬಂಟ್ವಾಳದಲ್ಲಿ ತನ್ನ ಅಜ್ಜ ಅಜ್ಜಿಯ ಜೊತೆಗೆ ತುಂಟಾಟ ಆಡುತ್ತಾ, ತಂದೆ ತಾಯಿಯ ನೆನಪುಗಳನ್ನು ಬಚ್ಚಿಟ್ಟು ಎಲ್‌ಕೆಜಿ ಮತ್ತು ಯು.ಕೆ.ಜಿ ಶಿಕ್ಷಣವನ್ನು ಪಡೆಯುತ್ತಾರೆ. ಇವರ ಅಜ್ಜ “ತಾರನಾಥ್ ಬಂಗೇರ”, ಅಜ್ಜನ ಬಗ್ಗೆ ಹೇಳುವುದಾದರೆ, ಇವರೊಬ್ಬ ಕುಸ್ತಿ ಪಟು. ಇವರು ಬಂಟ್ವಾಳಲ್ಲಿ ಒಬ್ಬ ಹೆಸರುಗಳಿಸಿರುವ ವ್ಯಕ್ತಿ. ಚರಿತ್ ರವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಸರತ್ತು, ಈಜು, ಕುಸ್ತಿ ಇವನ್ನೆಲ್ಲಾ ಕಲಿಸಿಕೊಟ್ಟ ಉತ್ತಮ ಕ್ರೀಡಾಪಟು. ಇದೇ ಕಾರಣಕ್ಕೆ ಚರಿತ್ ರವರೂ ಕೂಡ ಒಬ್ಬ ಉತ್ತಮ ಕುಸ್ತಿ ಮತ್ತು ಕ್ರೀಡಾ ಪಟು. ನಂತರ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕೊಡಗಿನ ಕೊಡ್ಲಿಪೇಟೆಯಲ್ಲಿ ಇವರ ತಂದೆ ತಾಯಿಯ ಜೊತೆಯಲ್ಲಿ ಮುಂದುವರಿಸುತ್ತಾರೆ.
ಶನಿವಾರ ಸಂತೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ವನ್ನು ಮುಗಿಸುತ್ತಾರೆ. ನಂತರ ಡಿಗ್ರಿ ಮತ್ತು ಬಿಬಿಎಮ್ ಪದವಿಯನ್ನು ಪಡೆಯಲು ಕಾರ್ಕಳದ ನಿಟ್ಟೆಗೆ ತೆರಳಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯುತ್ತಾರೆ.

ಇವರ ತಂದೆಗೆ ಇವರೊಬ್ಬ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಮನೆಯಲ್ಲಿ ಕಲಿಕೆಗೆ ಒಂದು ಬಿಟ್ಟರೆ ಬೇರೆ ಯಾವುದೇ ವಿಷಯಕ್ಕೂ ಪ್ರೋತ್ಸಾಹ ಇರಲಿಲ್ಲ. ಶಾಲೆ ಕಾಲೇಜುಗಳಲ್ಲಿ ಸಾಂಸ್ಕೃತಿಕ ವಿಷಯದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಿದ್ದರು. ಬಾಲ್ಯದಲ್ಲಿ ಇವರಿಗೆ ವೇದಿಕೆಯ ಮೆಟ್ಟಿಲು ಏರೋದಂದ್ರೆ ತುಂಬಾನೇ ಖುಷಿ. ಹಾಗಾಗಿಯೇ ಯಾವುದೇ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕ್ರೀಡೆಗಳಲ್ಲಿ ಭೇಷ್ ಎನಿಸಿಕೊಂಡು ವೇದಿಕೆಯಲ್ಲಿ ಗಣ್ಯಾತಿಗಣ್ಯರಿಂದ ಬಹುಮಾನ ಸ್ವೀಕಾರ ಮಾಡಿ ಆನಂದ ಪಡುತ್ತಿದ್ದರು. ಮುಖ್ಯವಾಗಿ ವೇದಿಕೆಗೆ ಹೋದಾಗ ಜನರಿಂದ ಸಿಗೋ ಚಪ್ಪಾಳೆ ಮತ್ತು ಶಿಳ್ಳೆಗಳೆ ಇವರಿಗೆ ಪ್ರೋತ್ಸಾಹ. ಇವತ್ತು ಇವರು ಈ ಮಟ್ಟಕ್ಕೆ ಬೆಳೆಯಲು ಜನರ ಪ್ರೋತ್ಸಾಹವೇ ಕಾರಣ. ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಯ ಹಾದಿ ಹಿಡಿದವರು. ಹೆಸರು ಗಳಿಸ್ಬೇಕು, ಇವರಿಂದಾಗಿ ಇವರ ತಂದೆ ತಾಯಿಯನ್ನು ಗುರುತಿಸಬೇಕು ಎಂಬುದು ಇವರ ಅತಿ ದೊಡ್ಡ ಕನಸು.

ಇವರು ಅಭಿನಯಿಸಿದ ಮೊದಲನೇ ಧಾರವಾಹಿ “ಝೀ ಕನ್ನಡ” ಚಾನೆಲ್ ನಲ್ಲಿ ಪ್ರಸಾರವಾದ “ಲವಲವಿಕೆ”, ಎರಡನೇ ಧಾರವಾಹಿ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾದ “ಅಮ್ಮ”, ಮೂರನೇ ಧಾರವಾಹಿ “ಕಲರ್ಸ್” ಚಾನೆಲ್ ನಲ್ಲಿ ಪ್ರಸಾರವಾದ “ಸರ್ಪ ಸಂಬಂಧ”, ನಾಲ್ಕನೇ ಸೂಪರ್ ಹಿಟ್ ಧಾರವಾಹಿ ಈಗ “ಸ್ಟಾರ್ ಸುವರ್ಣ” ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ “ಮುದ್ದು ಲಕ್ಷ್ಮೀ”. ಇವರು ಅಭಿನಯಕ್ಕೆ ಎರಡು ಧಾರಾವಾಹಿ ಗಳಲ್ಲಿ ಪ್ರಶಸ್ತಿ ಮತ್ತು ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ರಾಜ್ಯಮಟ್ಟಗಳಲ್ಲಿ ಇವರು ಸನ್ಮಾಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಲೇಜ್ ಮತ್ತು ಕಂಪನಿಗಳಲ್ಲಿಯೂ ಅವಾರ್ಡ್ ಗಳನ್ನು ಪಡೆದಿದ್ದಾರೆ.

ಇವರಿಗೆ ಪ್ರೋತ್ಸಾಹ ನೀಡುವವರು ಯಾರೂ ಇರಲಿಲ್ಲ. ಇವರೇ ಎಲ್ಲ ವಿಷಯಗಳನ್ನು ತಿಳಿದುಕೊಂಡು ಇವರದ್ದೇ ಆದ ಸ್ವಂತ ದಾರಿಯಿಂದ ನಡೆದು ಯಾವುದೇ ಕಷ್ಟಗಳು ಕಣ್ಮುಂದೆ ಬಂದರೂ, ಮನೆಯೇ ಇಲ್ಲದಿದ್ದರೂ ಈ ಯಾವ ನೋವನ್ನು ತಂದೆ ತಾಯಿಗೆ ಕಾಣಿಸದೆ ಸಾಧನೆ ಮಾಡಬೇಕೆಂಬ ಒಂದೇ ಒಂದು ಧ್ಯೇಯವನ್ನು ಮನದಲ್ಲಿರಿಸಿಕೊಂಡು, ಎಲ್ಲ ಕಷ್ಟಗಳನ್ನು ಎದುರಿಸಿ, ಇವತ್ತು ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿ ಆಗಿದ್ದಾರೆ. ಇದು ಇವರ ಪ್ರಾರಂಭ ಅಷ್ಟೇ. ಇನ್ನು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬೇಕೆಂಬ ಛಲದಿಂದ ಮುನ್ನಡೆಯುತ್ತಿದ್ದಾರೆ. ಇವರ ಬೆನ್ನ ಹಿಂದೆ ನಿಂತು ನಿನಗೆ ನಾವಿದ್ದೇವೆ ನೀನು ಸಾಧನೆ ಮಾಡು ಎಂದು ಹೇಳುವವರು ಯಾರು ಇಲ್ಲ. ಈಗ ತಂದೆ ತಾಯಿಯ ಒಪ್ಪಿಗೆಯೂ ಇದೆ, ಪ್ರೋತ್ಸಾಹವೂ ಇದೆ. ಮುಖ್ಯವಾಗಿ ಇವರ ಕೈ ಹಿಡಿದ ಪತ್ನಿಯ ಸಂಪೂರ್ಣ ಸಹಕಾರ, ಬೆಂಬಲದಿಂದಾಗಿ ಇವರಿಗೆ ಇವತ್ತು ಯಾವ ಕಷ್ಟನೂ ಕಷ್ಟ ಅನ್ನಿಸುತ್ತಿಲ್ಲ. ಸಾಧನೆಯ ಗುರಿ ಇನ್ನಷ್ಟು ಹತ್ತಿರವೆನಿಸುತ್ತಿದೆ.

ಸಾಧಿಸುವವನಿಗೆ ಸಾವಿನ ಭಯ ಇರಲ್ಲ. ಅದರ ಬದಲು ಸಾವಿಗೇ ಸವಾಲೊಡ್ಡುತ್ತಾನೆ. ಸಾವನ್ನೇ ಗೆದ್ದು ನಿಲ್ಲುತ್ತಾನೆ. ಅಂತಹ ಅಪಾರ ಸಾಧಕರಲ್ಲಿ ಒಬ್ಬರಾದ ಇವರು ಇನ್ನಷ್ಟು ಸಾಧನೆಯನ್ನು ಸಾಧಿಸಲಿ ಎಂದು ಆಶಿಸೋಣ.
ನಮ್ಮ ಕಲಾವಿದರು ನಮ್ಮ ಹೆಮ್ಮೆ

✍️ ಸಾಯಿ ದೀಕ್ಷಿತ್ ಪುತ್ತೂರು
             ಸಾಧಕರ ಹಾದಿ

Charith Baalappa poojary Yaane
Dhruvant’s achievement story

We could see our world untill our eyes are alive. The real achievement is when the whole world looks at us afterall we aren’t alive. Under the several difficulty, lack of opportunity , he wanted to prepare a way for his success . And now finally he had stayed in the minds of each and every people And that great achiever is “Mr Charith Balappa Poojary” and his life story.

He was from Dakshina kannada District, Bantwal taluk son of “Balappa Poojary” and “Prema Balappa Poojary”. He is the first son out of two. His wife is “Manjushree Charith” .

He completes kg sections in Bantwal. Primary and highschool education in Kodagu . And Puc in Shanivara santhe Kodagu. BBM in nitte, Karkala and gets selected in campus selection in international bank ‘HSBC’ .

He was born in a poor family and his father was coffee planter and his mother was housewife. This man grows up with his grandparents in Bantwal by his mesmerizing naughtiness. Here he goes for his kg classes. His grandpa “Tharanath Bangera” Wrestler and well known person of his place. Charithi’s Grandpa taught him a swimming, wrestling and many other activities. That is the reason why Charith is also a good sportsmen and wrestler. He completed his studies from 1 standard to 10 th std at Kodlipete in Kodagu. At this time he was with his parents. He completes his PUC in Shanivara santhe in Kodagu. Then he completes his degree and BBM in Nitte ,Karkala. Where he gets his education lead a way for his job

His dad wanted him to be a engineer or a doctor. He only had a support for studies in his home. He achieved many awards in his collage days. He had great intrest in getting into the stage. And that is why he used to get appreciation from all. And used to receive award from the arrived guests. This gave him lots of happiness. He loved to hear a claps and whistles from audience. Todays he states that this might be the reason for his success. He had a dream where his parents are identified by his success.

His first serial was presented in Zee kannada “Lavalavike”. Secondly Star Suvarna presents Serial named “Amma”. And the third one is Colors Channel “Sarpa Sambanda”. And the fourth Super hit serial was Star Suvarna’s “Muddu laxmi”. He had been awarded for his acting in 2 serials. He was been faliciated at nationak levels. Even he secured award in collage days and in company.

There was no one to support him. He himself paved a way for his great success. He had many difficulties and never minded it and went forward. He had no home even during those times he had only a dream of success. By facing all the difficulties now he is a person whom the whole Karnataka recognises. He still wants to achieve more and more. Now even his parents encourages him and importantly his wife gives him a total support and strengthen him thats why he never feel any difficulties. He feels that his goal is too near.

Achiever never fear for his death rather than gives a challenge for it. Gets a victory towards it. And out of those greatest achievers he is the one. May he gets still more success in his life.

Our achievers Our Pride

Sai Deekshith Puttur
English transferred
Shivani Pethri
Saadakara_Haadi


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »