ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್(ರಿ) ಇದರ ಸ್ಥಾಪಕ ಅಧ್ಯಕ್ಷ ರಾಗಿದ್ದು ಅಸೋಸಿಯೇಷನ್ ಶಿಕ್ಷಣ ಸಂಘಟನೆ ಅಭಿವೃದ್ಧಿಯ ಮೂಲಕ ಉತ್ತಮ ಸಮಾಜದ ನಿರ್ಮಾಣ ಕ್ಕೆ ಕೆಲಸ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1965 -1985 ರ ಮೂರು ದಶಕಗಳ ಕಾಲ ರೈತ ಕಾರ್ಮಿಕ ಕ್ರಾಂತಿಕಾರಿ ಕಮ್ಯುನಿಸ್ಟ್ ಚಳುವಳಿಯಲ್ಲಿ ಭಾಗವಹಿಸಿ ಸಮ ಸಮಾಜದ ನಿರ್ಮಾಣದ ಹೋರಾಟ ದಲ್ಲಿದ್ದರು. ನಂತರ ಪಕ್ಷ ರಾಜಕೀಯ ದಿಂದ ದೂರು ಉಳಿದು ಜನರ ಮೂಲಭೂತ ಅವಶ್ಯಕತೆ ಗಳ ಬಗ್ಗೆ ಸಮಾಜಸೇವೆಯಲ್ಲಿ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಂಡಿದ್ದರು. ಅಧ್ಯಯನ ಶೀಲರು ಆಗಿದ್ದ ಇವರು ಯಾವುದೇ ವಿಷಯ ಇದ್ದರೂ ಅದನ್ನು ಆಳವಾಗಿ ಅಧ್ಯಯನ ಮಾಡುವವರಾಗಿದ್ದರು.
ಕೇರಳದ ಬ್ರಹ್ಮಶ್ರೀ ನಾರಾಯಣ ಗುರುದೇವರ ಸಮಕಾಲೀನರು ಹಾಗೂ ಶ್ರೀ ನಾರಾಯಣ ಗುರುಗಳಿಂದ ಶಿಷ್ಯತ್ವ ವನ್ನು ಪಡೆದ ಬ್ರಹ್ಮ ಶ್ರೀ ಶುಭಾನಂದ ಗುರುದೇವರು ಸ್ಥಾಪಿಸಿದ ಶುಭಾನಂದ ಆಶ್ರಮದ ಆತ್ಮಭೋಧೋದಯ ಸಂಘದ ಮೂಲಕ ಸತ್ಯ ಉಪದೇಶ, ಜನ್ಮಾಂತರ ಜ್ಞಾನ ಉಪದೇಶವನ್ನು ಪಡೆದುಕೊಂಡು ಜಾತಿ ಮತ ಧರ್ಮ ಲಿಂಗ ಭೇಧವಿಲ್ಲದ ಅದ್ವೈತ ವೇದಾಂತದ ಆಧ್ಯಾತ್ಮಿಕ ಚಳುವಳಿಯಲ್ಲಿ ತೊಡಗಿಸಿಕೊಂಡು ಆತ್ಮಜ್ಞಾನದ ನಾಮಸಂಕೀರ್ತನೆಯ ಮೂಲಕ ಮೋಕ್ಷ ಸಾಧನೆ ಮಾಡುವ ಆಧ್ಯಾತ್ಮಿಕ ಸಾಧನೆ ಯಲ್ಲಿ ತೊಡಗಿಸಿಕೊಂಡಿದ್ದರು.
ಪತ್ನಿ ಕೃಷ್ಣಮ್ಮ, ಮಕ್ಕಳಾದ ರಾಜೇಂದ್ರ ಚಿಲಿಂಬಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸುಳ್ಯ ತಾಲೂಕು ಯೋಜನಾಧಿಕಾರಿ ಚೆನ್ನಕೇಶವ, ಅಜಿತ, ಅನಿತ, ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
ಸ್ವಗ್ರಹ ಚಿಲಿಂಬಿ ಆದರ್ಶನಗರ ದಲ್ಲಿ ಮಧ್ಯಾಹ್ನ 12.30 ಕ್ಕೆ ಅಂತಿಮ ಯಾತ್ರೆ