ರಂಗೋಲಿ ಎಂಬುದು ಕಲೆ. ರಂಗೋಲಿ ರಂಗು ಇದ್ದರೇನೇ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು, ಚುಕ್ಕಿಗಳ ಮೂಲಕ ರಂಗೋಲಿ ಬಿಡಿಸುವುದು ಒಬ್ಬ ವ್ಯಕ್ತಿಗೆ ತಾಳ್ಮೆ ಇದ್ದರೆ ಮಾತ್ರ ಮನಸ್ಸಲ್ಲಿ ಹೂಹಿಸಿದ ಚಿತ್ರ ಬಿಡಿಸಲು ಸಾದ್ಯ. ರಂಗೋಲಿ ಬಿಡಿಸುವುದು ಮಹಿಳೆಯರಿಗಷ್ಟೇ ಸೀಮಿತವಾಗಿತ್ತು, ಆದರೆ ಈಗ ಪುರುಷರೂ ದೇವರ ಪೂಜೆ, ಹಬ್ಬ, ಇನ್ನಿತರ ಶುಭ ಸಂದರ್ಭಗಳಲ್ಲಿ ರಂಗೋಲಿ ಹಾಕಿ ಅಲಂಕಾರ ಮಾಡುತ್ತಾರೆ. ಭಿನ್ನವಾಗಿ ಯೋಚಿಸಿ, ರಂಗೋಲಿ ಕೇವಲ ಚುಕ್ಕಿ ಚಿತ್ತಾರವಲ್ಲ, ಅದರೊಳಗೊಂದು ಅಧ್ಯಾತ್ಮದ ಸಂದೇಶವಿದೆ. ರಂಗೋಲಿ ಚಿತ್ರ ಬರೆದ ಪ್ರತಿಭೆ ರಾಜೇಶ್ ಎಸ್ ಬಂಗೆರ, ಈ ಅಧ್ಯಾತ್ಮದ ಸಂದೇಶವಿರುವ ರಂಗೋಲಿ ಚಿತ್ತಾರದಲ್ಲಿ ಮೂಡಿಬಂದ ಚಿತ್ರ ಉದಯ್ ಪೂಜಾರಿ.ಕರ್ನಾಟಕದ ಕರಾವಳಿ, ಬೆಂಗಳೂರು, ಮುಂಬೈ ಮಹಾನಗರ ಹಾಗೂ ದುಬೈ ನಗರಗಳಲ್ಲಿ ಮನೆಮಾತಾಗಿರುವ ಬಲಿಷ್ಠ ಯುವಪಡೆಯ ಬಿರುವೆರ್ ಕುಡ್ಲ ಸಂಘಟನೆಯನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿ, ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹಕೊಟ್ಟು, ಸಮಾಜದ ಕಷ್ಟದಲ್ಲಿರುವ ಜನತೆಯ ಕೈಹಿಡಿಯುತ್ತಿರುವ ಸಂಘಟನೆಯಾಗಿದ್ದು ಇದನ್ನು ಉತ್ತಮ ರೀತಿಯಲ್ಲಿ ನಡೆಸುವಂತ ಸಾರಥಿ ಉದಯ್ ಪೂಜಾರಿ.ರಂಗೋಲಿ ಚುಕ್ಕಿ ಚಿತ್ತಾರ ಮಾಡಿದ ಪ್ರತಿಭೆ ರಾಜೇಶ್ ಎಸ್ ಬಂಗೆರ ಮೂಲತಃ ಪೂಂಜಾಲ್ ಕಟ್ಟೆ ನಿವಾಸಿ. ಸದ್ಯಕ್ಕೆ ದೇವರ ಪೂಜೆಯ ಕೆಲಸ ಮಾಡುತ್ತಿರುವ ಇವರು, ರಂಗೋಲಿ ಬಿಡಿಸುವುದು ಕಲಿತು, ಬಿಡುವಿನ ಸಮಯದಲ್ಲಿ ವಿಭಿನ್ನ ರೀತಿಯಲ್ಲಿ ರಂಗೋಲಿ ಬಿಡಿಸುತ್ತಾ ತನ್ನ ಪ್ರತೀಭೆಯನ್ನು ತೋರಿಸುತ್ತಿದ್ದಾರೆ. ಈಗಾಗಲೇ ಇವರು ರಾಮ ಮಂದಿರ, ಶ್ರೀ. ನಾರಾಯಣ ಗುರು, ಉದಯ್ ಪೂಜಾರಿ ಹಾಗು ಮೊದಲಾದವರ ದೇವರ ಚಿತ್ರಗಳನ್ನು ಬರೆದು ಎಲ್ಲರಿಂದ ಭೇಷ್ ಎನ್ನಿಸಿಕೊಂಡಿದ್ದಾರೆ. ರಂಗೋಲಿ ಬಿಡಿಸುವುದನ್ನು ಹವ್ಯಾಸವಾಗಿದೆ.
ಬರಹ: ಪುಷ್ಪರಾಜ್ ಪೂಜಾರಿ – Billavaswarriors.com