ಮೂಲ್ಕಿ: ಕಾರ್ನಾಡು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸುಜಾತಾ ರವರು ದಿನ ದ ಊಟ ಕ್ಕೂ ಕಷ್ಟ ಪಡುತ್ತಿದ್ದು, ಬದುಕು ಸಾಗಿಸಲು ವ್ಯಥೆ ಪಡುತ್ತಿರುವ ಸಂದರ್ಭದಲ್ಲಿ ನಮ್ಮ ಬಿರುವೆರ್ ಕುಡ್ಲ ಮೂಲ್ಕಿ ಘಟಕ ವು ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ರವರ ನೇತೃತ್ವದಲ್ಲಿ ಶೀಘ್ರವೇ ಸ್ಪಂದಿಸಿ ಸುಮಾರು 3000/ ವೆಚ್ಚ ದ ದಿನ ಬಳಕೆಯ ದಿನಸಿ ಸಾಮಗ್ರಿಗಳನ್ನು ನೀಡಲಾಯ್ತು, ಅದರೊಂದಿಗೆ ಇನ್ನಿತರ ಅಗತ್ಯ ವಸ್ತುಗಳ ಖರೀದಿ ಮಾಡುವಂತೆ ಆರ್ಥಿಕ ಸಹಾಯ ಮಾಡಲಾಯ್ತು.
ಈ ಸಂದರ್ಭ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಉಪಾಧ್ಯಕ್ಷ ಯಾದವ್ ಕೊಟ್ಯಾನ್, ಸಲಹೆಗಾರ ಉಮೇಶ್ ಮಾನಂಪಾಡಿ, ಜೊತೆ ಕಾರ್ಯದರ್ಶಿ ರಿತೇಶ್ ಅಂಚನ್, ಸಂಘಟನ ಕಾರ್ಯದರ್ಶಿ ರಮಾನಾಥ್ ಸುವರ್ಣ, ತಾರನಾಥ್ ಮೂಲ್ಕಿ, ವಿಜಯ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.