TOP STORIES:

ಜೀವನದ ಸುದೀರ್ಘ ವರ್ಷಗಳನ್ನು ಕಾರಿನಲ್ಲಿ ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ…


ಹುಟ್ಟಿದ್ದು ಗುರುಪುರದಲ್ಲಿ. ಜೀವನದ ಸುದೀರ್ಘ ವರ್ಷಗಳನ್ನು  ಚಾಲಕನಾಗಿ ಕಳೆದದ್ದು ವೇಣೂರಿನಲ್ಲಿ. ಸರಿ ಸುಮಾರು 56 ವರ್ಷಗಳ ನಿರಂತರ ಚಾಲಕನಾಗಿ ಸೇವೆ ಸಲ್ಲಿಸಿದ್ದು ವೇಣೂರಿನ ಮಹಾಜನತೆಗೆ !

ಭೈರಣ್ಣನೇ ಹೇಳುವಂತೆ ಅವರು ವೇಣೂರಿಗೆ ಬಂದದ್ದು ಎಪ್ರಿಲ್ 9 , 1967 ರಂದು.  ವೇಣೂರಿನ ಖ್ಯಾತ ವರ್ತಕರಾದ   ಕಿಟ್ಟೆರ್  ಎಂದೇ ಖ್ಯಾತರಾದ  ಶ್ರೀ ಖಂಡಿಗ ನರಸಿಂಹ ಪೈ ( ಕೆ.ಎನ್. ಪೈ)ಯವರ ಚಾಲಕನಾಗಿ. ವೇಣೂರಿಗೆ ಬಂದ ಮೇಲೆ ಮತ್ತೆ ಗುರುಪುರಕ್ಕೆಮರಳಲು ಮನಸಾಗದೆ ವೇಣೂರಿನಲ್ಲೇ ಕಾರು ಚಾಲಕನಾಗಿ ನೆಲೆಯಾದವರು ಭೈರಣ್ಣ.

ಕಿಟ್ಟರ ಕಾರಿನ ಬಳಿಕ ಶ್ರೀ ನಾರಾಯಣ ಹೆಗ್ಡೆಯವರ ಕಾರಿನಲ್ಲಿ ಡ್ರೈವರ್ ಆಗಿ, ನಂತರ 1970 ರಿಂದ 1974 ವರೆಗೆ  ಕೆಳಗಿನಪೇಟೆಯ ಸಹನಾ ಟೆಕ್ಸ್ ಟೈಲ್ಸ್   ಮಾಲೀಕರಾದ ಶ್ರೀಸಂಜೀವ ಸಾಲ್ಯಾನ್ ಚಾಲಕರಾಗಿದ್ದ ಭೈರಣ್ಣ ನಂತರ ಸ್ವಂತ ಕಾರು ಖರೀದಿಸಿಬಾಡಿಗೆಗೆ ಕಾರು ಓಡಿಸಲು ಆರಂಭಿಸಿದರು.

ಭೈರಣ್ಣ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಮನೆಯಲ್ಲಿ ಬಡತನವಿದ್ದ ಕಾರಣ ಮೊದಲು ಕೂಲಿ ಕೆಲಸ, ಬಳಿಕವಾಮಂಜೂರಿನಲ್ಲಿ ಸ್ವಲ್ಪ ಸಮಯ ಜೊಕಿಂ ಸೆರಾವೊ ಅವರಲ್ಲಿ ಕೆಲಸ, ಮಂಗಳೂರಿನ ಕೊಟ್ಟಾರದಲ್ಲಿ ಮಾಲಿಂಗ ಶೆಟ್ಟಿಯವರಮನೆಯಲ್ಲಿ ಕಾರು ತೊಳೆದು ಅದನ್ನು ಓಡಿಸಲು ಅಭ್ಯಾಸ ಮಾಡಿ ಪರಿಣತಿ ಪಡೆದವರು.

ಭೈರಣ್ಣ ಹೇಳುವಂತೆ ಅವರು ಹುಟ್ಟಿದ್ದು 1938ನೇ ವರ್ಷದ ಮಾಯಿಡ್ ಪದಿಮೂಜಿ ಪೋಯಿನಾನಿ. ತಂದೆ ಫಕೀರ ಪೂಜಾರಿ. ತಾಯಿ ಗೌರಿ. ದಂಪತಿಗಳ ನಾಲ್ವರು ಮಕ್ಕಳಲ್ಲಿ ಭೈರಣ್ಣ ಒಬ್ಬರು.  ಗುರುಪುರದಲ್ಲಿ ಒಂದೂಕಾಲು ಎಕರೆ ಜಾಗ ಅವರ ತಂದೆಗಿದ್ದಆಸ್ತಿ.

ಭೈರಣ್ಣ ವೇಣೂರಿಗೆ ಬಂದ ಮೇಲೆ ಅನೇಕ ಮಂದಿಯ ಪ್ರಾಣವನ್ನು ಉಳಿಸಿದ ಕೀರ್ತಿ ಅವರದು. 1970 ರಿಂದ 1990   ಕಾಲದಲ್ಲಿವೇಣೂರಿನಲ್ಲಿ ಬಾಡಿಗೆ ಕಾರು ಅಂದರೆ ಅದು ಭೈರಣ್ಣನ ಕಾರು ಅನ್ನುವಷ್ಟು ಪ್ರಸಿದ್ಧರಾಗಿದ್ದವರು ಅವರು. ಅತ್ಯಂತ ವಿನಯಶೀಲ, ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವುದೇ ಹೊತ್ತಿನಲ್ಲಿ ಹೋಗಿ ಕರೆದರೂ ಸೇವೆಗೆ ಸದಾ ಸಿದ್ಧರಾಗಿದ್ದ ಭೈರಣ್ಣ ಯಾರೊಂದಿಗೂಸಿಡುಕಿದವರಲ್ಲ. ಎಷ್ಟೋ ಮಂದಿಯ ಮದುವೆ ದಿಬ್ಬಣ, ಆಫೀಸು ಕೆಲಸ, ಪುಣ್ಯಕ್ಷೇತ್ರ ದರ್ಶನ, ಕಾಜೂರು ಉರೂಸ್, ಅತ್ತೂರುಚರ್ಚ್ ಜಾತ್ರೆಗೆ ಜನರನ್ನು ಕರೆದೊಯ್ಯುವ ಕಾರ್ಯ,ಹಲವಾರು ಮಂದಿ ಗರ್ಭಿಣಿಯರನ್ನು ಹಾಗೂ ಅನಾರೋಗ್ಯ ಪೀಡಿತರನ್ನುಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಪಾಡಿದ ಕೀರ್ತಿ ಭೈರಣ್ಣನದ್ದು.

ಕೆಲವೊಮ್ಮೆ ಭೈರಣ್ಣನ ಅಂಬಾಸಿಡರ್ ಕಾರ್ ನಿಧಾನವಾಗಿ ಹೋಗುತ್ತಿದೆಯೆಂದರೆ ಯಾರಿಗೋ ಏನೋ ಆಗಿದೆಯೆಂದೋ, ಮಣಿಪಾಲ ಆಸ್ಪತ್ರೆಗೆ ಹೊರಟಿದೆಯೆಂದೋ ಒಂದು ರೀತಿಯ ಅನೂಹ್ಯ ಭಯವೂ ಅಗುವುದಿತ್ತು!

ಕಳೆದ ಕೆಲವು ವರ್ಷಗಳಿಂದ ಕುಟುಂಬದವರು ಬಂದು ವಾರ್ಧಕ್ಯದ  ಸಮಯದಲ್ಲಿ ಗುರುಪುರದ ಮನೆಗೆ ಬರುವಂತೆಕೇಳಿಕೊಂಡರೂ ಅತ್ತ ಹೋಗಲು ಮನಸಾಗದೇ ವೇಣೂರಿನಲ್ಲಿ  ಶ್ರೀ ಕೇಶವ ಕಾಮತರ ಅಂಗಡಿಯ ಮೇಲಿದ್ದ ರೂಮಿನಲ್ಲೇವಾಸವಿದ್ದರು. ಶ್ರೀ ಕೇಶವ ಕಾಮತರ ಸುಪುತ್ರ ಶ್ರೀ ವೆಂಕಟರಮಣ ಕಾಮತರು ಕೊನೆಯವರೆಗೂ ಅವರಿಗೆ ಆಶ್ರಯವಿತ್ತುಸಹೃದಯತೆಯನ್ನು ತೋರಿದವರು. ಭೈರಣ್ಣನ ಶಿಷ್ಯರಾದ ಇಬ್ರಾಹಿಂರವರು ಭೈರಣ್ಣನನ್ನು ಅನಾರೋಗ್ಯದ ಸಮಯದಲ್ಲಿನೋಡಿಕೊಂಡು ಗುರುಭಕ್ತಿಯನ್ನು ಮೆರೆದಿದ್ದಾರೆ.

ಅವಿವಾಹಿತರಾಗಿಯೇ ಉಳಿದಿದ್ದ ಭೈರಣ್ಣ ಕೊನೆಯ ತನಕವೂ ವೇಣೂರಿನಲ್ಲಿಯೇ ಯಾರಿಗೂ ಹೊರೆಯಾಗದಂತೆ ಉಳಿದು   ಜೂನ್ 9, 2023ರಂದು ತಮ್ಮ 85 ನೇ ವಯಸ್ಸಿನಲ್ಲಿ ಭಗವಂತನ ಪಾದವನ್ನು ಸೇರಿದರು.

ವೇಣೂರಿನಲ್ಲಿ 56 ವರ್ಷಗಳ ಕಾಲ ಜನರಿಗೆ ಕಾರಿನ ಮೂಲಕ ಸೇವೆಯನ್ನು ನೀಡಿದ ಭೈರಣ್ಣನನ್ನು ಯಾವುದೇ ಸಂಘಸಂಸ್ಥೆಗಳಾಗಲೀ, ಶಾರದೋತ್ಸವ, ಗಣೇಶೋತ್ಸವ ಸಮಿತಿಯವರಾಗಲೀ ಗುರುತಿಸಿ ಗೌರವಿಸದೇ ಇದ್ದುದ್ದು ಮಾತ್ರ ವಿಷಾದನೀಯ.

ವೇಣೂರಿನ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಭೈರಣ್ಣನಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ. ಸುಬ್ರಹ್ಮಣ್ಯ ಭಟ್, ಕಜೆ ಮನೆ ವೇಣೂರು

ಮಾಹಿತಿ ಆಧಾರ:

. 23-09-2022 ರಂದು ನಾನು ನಡೆಸಿದ ಮೌಖಿಕ ಸಂದರ್ಶನದ ದಾಖಲಾತಿ

. ಶ್ರೀಮತಿ ಶಶಿಪ್ರಭಾ ಟೀಚರ್ ಅವರ ಮೌ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »