TOP STORIES:

FOLLOW US

ಜೀವನದ ಸುದೀರ್ಘ ವರ್ಷಗಳನ್ನು ಕಾರಿನಲ್ಲಿ ಚಾಲಕನಾಗಿ ಕಳೆದ ವೇಣೂರಿನ ಭೈರಣ್ಣನಿಗೊಂದು ನುಡಿ ನಮನ…


ಹುಟ್ಟಿದ್ದು ಗುರುಪುರದಲ್ಲಿ. ಜೀವನದ ಸುದೀರ್ಘ ವರ್ಷಗಳನ್ನು  ಚಾಲಕನಾಗಿ ಕಳೆದದ್ದು ವೇಣೂರಿನಲ್ಲಿ. ಸರಿ ಸುಮಾರು 56 ವರ್ಷಗಳ ನಿರಂತರ ಚಾಲಕನಾಗಿ ಸೇವೆ ಸಲ್ಲಿಸಿದ್ದು ವೇಣೂರಿನ ಮಹಾಜನತೆಗೆ !

ಭೈರಣ್ಣನೇ ಹೇಳುವಂತೆ ಅವರು ವೇಣೂರಿಗೆ ಬಂದದ್ದು ಎಪ್ರಿಲ್ 9 , 1967 ರಂದು.  ವೇಣೂರಿನ ಖ್ಯಾತ ವರ್ತಕರಾದ   ಕಿಟ್ಟೆರ್  ಎಂದೇ ಖ್ಯಾತರಾದ  ಶ್ರೀ ಖಂಡಿಗ ನರಸಿಂಹ ಪೈ ( ಕೆ.ಎನ್. ಪೈ)ಯವರ ಚಾಲಕನಾಗಿ. ವೇಣೂರಿಗೆ ಬಂದ ಮೇಲೆ ಮತ್ತೆ ಗುರುಪುರಕ್ಕೆಮರಳಲು ಮನಸಾಗದೆ ವೇಣೂರಿನಲ್ಲೇ ಕಾರು ಚಾಲಕನಾಗಿ ನೆಲೆಯಾದವರು ಭೈರಣ್ಣ.

ಕಿಟ್ಟರ ಕಾರಿನ ಬಳಿಕ ಶ್ರೀ ನಾರಾಯಣ ಹೆಗ್ಡೆಯವರ ಕಾರಿನಲ್ಲಿ ಡ್ರೈವರ್ ಆಗಿ, ನಂತರ 1970 ರಿಂದ 1974 ವರೆಗೆ  ಕೆಳಗಿನಪೇಟೆಯ ಸಹನಾ ಟೆಕ್ಸ್ ಟೈಲ್ಸ್   ಮಾಲೀಕರಾದ ಶ್ರೀಸಂಜೀವ ಸಾಲ್ಯಾನ್ ಚಾಲಕರಾಗಿದ್ದ ಭೈರಣ್ಣ ನಂತರ ಸ್ವಂತ ಕಾರು ಖರೀದಿಸಿಬಾಡಿಗೆಗೆ ಕಾರು ಓಡಿಸಲು ಆರಂಭಿಸಿದರು.

ಭೈರಣ್ಣ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಮನೆಯಲ್ಲಿ ಬಡತನವಿದ್ದ ಕಾರಣ ಮೊದಲು ಕೂಲಿ ಕೆಲಸ, ಬಳಿಕವಾಮಂಜೂರಿನಲ್ಲಿ ಸ್ವಲ್ಪ ಸಮಯ ಜೊಕಿಂ ಸೆರಾವೊ ಅವರಲ್ಲಿ ಕೆಲಸ, ಮಂಗಳೂರಿನ ಕೊಟ್ಟಾರದಲ್ಲಿ ಮಾಲಿಂಗ ಶೆಟ್ಟಿಯವರಮನೆಯಲ್ಲಿ ಕಾರು ತೊಳೆದು ಅದನ್ನು ಓಡಿಸಲು ಅಭ್ಯಾಸ ಮಾಡಿ ಪರಿಣತಿ ಪಡೆದವರು.

ಭೈರಣ್ಣ ಹೇಳುವಂತೆ ಅವರು ಹುಟ್ಟಿದ್ದು 1938ನೇ ವರ್ಷದ ಮಾಯಿಡ್ ಪದಿಮೂಜಿ ಪೋಯಿನಾನಿ. ತಂದೆ ಫಕೀರ ಪೂಜಾರಿ. ತಾಯಿ ಗೌರಿ. ದಂಪತಿಗಳ ನಾಲ್ವರು ಮಕ್ಕಳಲ್ಲಿ ಭೈರಣ್ಣ ಒಬ್ಬರು.  ಗುರುಪುರದಲ್ಲಿ ಒಂದೂಕಾಲು ಎಕರೆ ಜಾಗ ಅವರ ತಂದೆಗಿದ್ದಆಸ್ತಿ.

ಭೈರಣ್ಣ ವೇಣೂರಿಗೆ ಬಂದ ಮೇಲೆ ಅನೇಕ ಮಂದಿಯ ಪ್ರಾಣವನ್ನು ಉಳಿಸಿದ ಕೀರ್ತಿ ಅವರದು. 1970 ರಿಂದ 1990   ಕಾಲದಲ್ಲಿವೇಣೂರಿನಲ್ಲಿ ಬಾಡಿಗೆ ಕಾರು ಅಂದರೆ ಅದು ಭೈರಣ್ಣನ ಕಾರು ಅನ್ನುವಷ್ಟು ಪ್ರಸಿದ್ಧರಾಗಿದ್ದವರು ಅವರು. ಅತ್ಯಂತ ವಿನಯಶೀಲ, ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಯಾವುದೇ ಹೊತ್ತಿನಲ್ಲಿ ಹೋಗಿ ಕರೆದರೂ ಸೇವೆಗೆ ಸದಾ ಸಿದ್ಧರಾಗಿದ್ದ ಭೈರಣ್ಣ ಯಾರೊಂದಿಗೂಸಿಡುಕಿದವರಲ್ಲ. ಎಷ್ಟೋ ಮಂದಿಯ ಮದುವೆ ದಿಬ್ಬಣ, ಆಫೀಸು ಕೆಲಸ, ಪುಣ್ಯಕ್ಷೇತ್ರ ದರ್ಶನ, ಕಾಜೂರು ಉರೂಸ್, ಅತ್ತೂರುಚರ್ಚ್ ಜಾತ್ರೆಗೆ ಜನರನ್ನು ಕರೆದೊಯ್ಯುವ ಕಾರ್ಯ,ಹಲವಾರು ಮಂದಿ ಗರ್ಭಿಣಿಯರನ್ನು ಹಾಗೂ ಅನಾರೋಗ್ಯ ಪೀಡಿತರನ್ನುಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಪಾಡಿದ ಕೀರ್ತಿ ಭೈರಣ್ಣನದ್ದು.

ಕೆಲವೊಮ್ಮೆ ಭೈರಣ್ಣನ ಅಂಬಾಸಿಡರ್ ಕಾರ್ ನಿಧಾನವಾಗಿ ಹೋಗುತ್ತಿದೆಯೆಂದರೆ ಯಾರಿಗೋ ಏನೋ ಆಗಿದೆಯೆಂದೋ, ಮಣಿಪಾಲ ಆಸ್ಪತ್ರೆಗೆ ಹೊರಟಿದೆಯೆಂದೋ ಒಂದು ರೀತಿಯ ಅನೂಹ್ಯ ಭಯವೂ ಅಗುವುದಿತ್ತು!

ಕಳೆದ ಕೆಲವು ವರ್ಷಗಳಿಂದ ಕುಟುಂಬದವರು ಬಂದು ವಾರ್ಧಕ್ಯದ  ಸಮಯದಲ್ಲಿ ಗುರುಪುರದ ಮನೆಗೆ ಬರುವಂತೆಕೇಳಿಕೊಂಡರೂ ಅತ್ತ ಹೋಗಲು ಮನಸಾಗದೇ ವೇಣೂರಿನಲ್ಲಿ  ಶ್ರೀ ಕೇಶವ ಕಾಮತರ ಅಂಗಡಿಯ ಮೇಲಿದ್ದ ರೂಮಿನಲ್ಲೇವಾಸವಿದ್ದರು. ಶ್ರೀ ಕೇಶವ ಕಾಮತರ ಸುಪುತ್ರ ಶ್ರೀ ವೆಂಕಟರಮಣ ಕಾಮತರು ಕೊನೆಯವರೆಗೂ ಅವರಿಗೆ ಆಶ್ರಯವಿತ್ತುಸಹೃದಯತೆಯನ್ನು ತೋರಿದವರು. ಭೈರಣ್ಣನ ಶಿಷ್ಯರಾದ ಇಬ್ರಾಹಿಂರವರು ಭೈರಣ್ಣನನ್ನು ಅನಾರೋಗ್ಯದ ಸಮಯದಲ್ಲಿನೋಡಿಕೊಂಡು ಗುರುಭಕ್ತಿಯನ್ನು ಮೆರೆದಿದ್ದಾರೆ.

ಅವಿವಾಹಿತರಾಗಿಯೇ ಉಳಿದಿದ್ದ ಭೈರಣ್ಣ ಕೊನೆಯ ತನಕವೂ ವೇಣೂರಿನಲ್ಲಿಯೇ ಯಾರಿಗೂ ಹೊರೆಯಾಗದಂತೆ ಉಳಿದು   ಜೂನ್ 9, 2023ರಂದು ತಮ್ಮ 85 ನೇ ವಯಸ್ಸಿನಲ್ಲಿ ಭಗವಂತನ ಪಾದವನ್ನು ಸೇರಿದರು.

ವೇಣೂರಿನಲ್ಲಿ 56 ವರ್ಷಗಳ ಕಾಲ ಜನರಿಗೆ ಕಾರಿನ ಮೂಲಕ ಸೇವೆಯನ್ನು ನೀಡಿದ ಭೈರಣ್ಣನನ್ನು ಯಾವುದೇ ಸಂಘಸಂಸ್ಥೆಗಳಾಗಲೀ, ಶಾರದೋತ್ಸವ, ಗಣೇಶೋತ್ಸವ ಸಮಿತಿಯವರಾಗಲೀ ಗುರುತಿಸಿ ಗೌರವಿಸದೇ ಇದ್ದುದ್ದು ಮಾತ್ರ ವಿಷಾದನೀಯ.

ವೇಣೂರಿನ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಭೈರಣ್ಣನಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಡಾ. ಸುಬ್ರಹ್ಮಣ್ಯ ಭಟ್, ಕಜೆ ಮನೆ ವೇಣೂರು

ಮಾಹಿತಿ ಆಧಾರ:

. 23-09-2022 ರಂದು ನಾನು ನಡೆಸಿದ ಮೌಖಿಕ ಸಂದರ್ಶನದ ದಾಖಲಾತಿ

. ಶ್ರೀಮತಿ ಶಶಿಪ್ರಭಾ ಟೀಚರ್ ಅವರ ಮೌ


Share:

More Posts

Category

Send Us A Message

Related Posts

ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ 14-02-2025 ರಂದು ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಹರೈನ್ ನಲ್ಲಿ ಬಿಡುಗಡೆ


Read More »

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ


Share       ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


Read More »

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »