ತನ್ನ 8ನೇ ವಯಸ್ಸಿನಲ್ಲಿಯೇ ಕಲಾ ಮಾತೆಯನ್ನು ಒಲಿಸಿಕೊಂಡ ಪುಟಾಣಿ ಧೃತಿ ಅಂಚನ್. ಪ್ರಸಾದ್ ಮತ್ತು ಶ್ವೇತಾ ದಂಪತಿಗಳ ಮೊದಲನೆ ಮಗಳು.
ಸಾಧನೆ ಮಾಡಲು ಆತ್ಮ ವಿಶ್ವಾಸ ಬಹಳ ಮುಖ್ಯ. ಆತ್ಮ ವಿಶ್ವಾಸ ಇಲ್ಲದಿದ್ದರೆ ಸಾಧನೆಯ ಗುರಿ ಸೇರಲು ಸಾಧ್ಯವಿಲ್ಲ. ಏನೇ ಅಡ್ಡಿ ಬಂದರು ಎದುರಿಸಿ ನಿಲ್ಲುತ್ತೇವೆ ಎನ್ನುವ ಛಲ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ನಡೆಯಲು ಸಾಧ್ಯ.ಹೀಗೆ ತನ್ನ ಆತ್ಮ ವಿಶ್ವಾಸದಿಂದ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಪುಟಾಣಿ ಪ್ರತಿಭೆ ಧೃತಿ ಅಂಚನ್
ಇವರು ತನ್ನ ವಿದ್ಯಾಭ್ಯಾಸವನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರ್ ಉಳ್ಳಾಲ ಇಲ್ಲಿ ಮಾಡುತ್ತಿದ್ದಾರೆ. ಸಣ್ಣ ಪ್ರಾಯದಲ್ಲಿಯೇ ಕ್ಯಾನ್ವಾಸ್ ಪೈಂಟಿಂಗ್ನಲ್ಲಿ ಆಸಕ್ತಿ ಹೊಂದಿರುವ ಇವರಿಗೆ ಯಾವುದೇ ಪ್ರೋತ್ಸಾಹ ಇರಲಿಲ್ಲ ಆದರೂ ಪೈಂಟಿಂಗ್ ಮಾಡುವುದು ಬಿಡಲಿಲ್ಲ. ಇವರ ಈ ಆಸಕ್ತಿ ಗೆ ತಂದೆ ತಾಯಿ ಬೆನ್ನೆಲುಬಾಗಿ ನಿಂತರು.
ಲಾಕ್ಡೌನ್ ಟೈಮ್ ನ ಬಿಡುವಿನ ವೇಳೆಯಲ್ಲಿ ತನ್ನದೇ ರೀತಿಯಲ್ಲಿ ಅನೇಕ ಚಿತ್ರಕಲೆ ಬಿಡಿಸುತ್ತಿದ್ದರು.ಆ ಸಮಯದಲ್ಲಿ ಹಂನ್ಸಲ್ ಡಿಸೋಜ ಇವರು ಧೃತಿ ಕ್ಯಾನ್ವಾಸ್ ಪೈಂಟಿಂಗ್ ತುಂಬಾ ಚೆನ್ನಾಗಿ ಮಾಡುತ್ತಾಳೆ ಅವರತ್ರ ಒಂದು ಕ್ಯಾನ್ವಾಸ್ ಪೈಂಟಿಂಗ್ ಮಾಡಿಸಿ ಎಂದಾಗ,ಅವಾಗ ಧೃತಿಯ ತಾಯಿ ಅವಳು ಯಾವುದೇ ತರಬೇತಿ ಪಡೆದಿಲ್ಲ ಎಂದರು. ಅವರೇ ತರಬೇತಿ ನೀಡುತ್ತೇವೆ ಎಂದು ಧೃತಿಯ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು. ನಂತರ ಇವರ ಪಯಣ ಹೀಗೆಯೇ ಮುಂದುವರಿಯಿತು ಮೊದಲನೆಯದಾಗಿ ಮಂತ್ರ ದೇವತೆ ಅಪ್ಪೆನ ಪೈಂಟಿಂಗ್ ಮಾಡಿದ ಇವರಿಗೆ ಡ್ಯಾನ್ಸ್ ಟೀಚರ್ ಸೂರಜ್ ಸನಿಲ್ ರವರ ಒಳ್ಳೆಯ ಪ್ರಶಂಸೆ ಪ್ರೋತ್ಸಾಹ ದೊರಕಿತು. ಈ ಪೈಂಟಿಂಗನ್ನು ಅಕ್ಷಯ ಕಲಶರಿಗೆ ತೋರಿಸಿದಾಗ ಅವರು ಅದನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಲಿ ಹಾಕಿ ಎಲ್ಲರ ಮನ ಮುಟ್ಟುವಂತೆ ಮಾಡಿದರು. ಮತ್ತು ನಮ್ಮ ಬಿಲ್ಲವೆರ್ ಪೇಜ್ ನ ವಿಜೇತ್ ಅಣ್ಣ ಅನೇಕ ಪೇಜ್ ನಲ್ಲಿ ಹಾಕಿದಾಗ ಇನ್ನಷ್ಟು ಪ್ರೇರಣೆ ಧೃತಿಗೆ ದೊರಕಿತು.
ಕೊರಗಜ್ಜ, ಕೋಟಿ ಚೆನ್ನಯ, ಅಪ್ಪೆ ಮಂತ್ರ ದೇವತೆ,ಅಪ್ಪೆ ಉಲ್ಲಾಲ್ದಿ ನ, ನಾರಾಯಣ ಗುರುಗಳ, ಅನೇಕ ಪ್ರಾಣಿ ಪಕ್ಷಿ ಗಳ ಚಿತ್ರವನ್ನು ಬಿಡಿಸಿ ತನ್ನ ಪ್ರತಿಭೆಯನ್ನು ಬೆಳೆಸುತ್ತಿದ್ದಾರೆ. ಇವರು ಬಿಡಿಸಿದ ಅನೇಕ ದೇವರುಗಳ ಚಿತ್ರವನ್ನು ನೋಡಿ ಮನಸೋತು ಅನೇಕರು ಖರೀದಿವನ್ನು ಮಾಡಿದ್ದಾರೆ.
ಹೀಗೆ ಈ ಪುಟಾಣಿಗೆ ಕಲೆಯ ಮೇಲಿರುವ ಆಸಕ್ತಿ ಹೀಗೆಯೇ ಮುಂದುವರಿಯಲಿ ಇನ್ನಷ್ಟು ಒಳ್ಳೆಯ ಚಿತ್ರ ಇವರ ಕೈಯಲ್ಲಿ ಮೂಡಿ ಬರಲಿ ಸರಸ್ವತಿ ದೇವಿಯ ಕೃಪೆ ಯಾವಾಗಲು ಧೃತಿಯ ಮೇಲಿರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.
✍️ :ಪ್ರಶಾಂತ್ ಅಂಚನ್ ಮಸ್ಕತ್ತ್.