ಮನಸ್ಸು ಮಾಡಿದರೆ ಒಂದು ಹೆಣ್ಣು ಏನು ಬೇಕಾದರೂ ಮಾಡಬಲ್ಲಲು ಎನ್ನುದಕ್ಕೆ ಇವರೇ ಉದಾಹರಣೆ. ತಾನು ಅಂದುಕೊಂಡಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿಎಮ್ ಸುವರ್ಣ ಕಟಪಾಡಿ .
ಬಡ ಕುಟುಂಬದಲ್ಲಿ ಹುಟ್ಟಲಿಲ್ಲ ಆದರೂ ಬಡ ಜನರ ಕಷ್ಟಕ್ಕೆ ಸದಾ ಸ್ಪಂದಿಸುವ ಮನಸು,ಬಡ ಜನರ ಸೇವೆಯಲ್ಲಿಯೇ ನೆಮ್ಮದಿಕಾಣುವ ಇವರಿಗೆ* ರಾಜಕೀಯದಲ್ಲಿ ಏನಾದರೂ
ಉನ್ನತ ಸ್ಥಾನ ಪಡೆಯಬೇಕು ನಂತರ ಜನರ ಬೇಡಿಕೆಗಳನ್ನು ಈಡೇರಿಸಿ ,ಬಡ ಜನರ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಜನ ನಾಯಕಿಆಗಬೇಕು ಎನ್ನುವ ಆಸೆ ಇದೆ.
ಹುಟ್ಟಿದು ಮಂಗಳೂರಿನ ಬಿಜೈ ನಲ್ಲಿ. ಇವರು ಪ್ರಾಥಮಿಕ ವಿದ್ಯಾಬ್ಯಾಸವನ್ನು ಬಿಜೈ ಲೂಡ್ಸ್ ಹಾಗೂ ಬಜ್ಪೆಯಲ್ಲಿ ನಂತರ ತಂದೆಯಜೊತೆ ಬೆಂಗಳೂರಿನ ಮಾರುತಿ ವಿದ್ಯಾಲಯದಲ್ಲಿ ಮಾಡಿದ ಇವರು ಕಿನ್ನಿಗೋಳಿ ದಾಮಸ್ಕಟ್ಟೆ ಪೊಂಪೈ ಯಲ್ಲಿ ಪದವಿಯನ್ನು ಮಾಡಿಮುಗಿಸಿದರು, ಸಣ್ಣ ಪ್ರಾಯದಲ್ಲಿಯೇ ಸಮಾಜ ಸೇವೆ ಮಾಡುವ ಆಸಕ್ತಿ ಇದ್ದು, ಕಾಲೇಜು ದಿನಗಳಲ್ಲಿ ಎನ್ ಸಿ ಸಿ ಕ್ಯಾಂಪಸನಲ್ಲಿಭಾಗವಹಿಸುತ್ತಿದ್ದರು ತಂದೆ ತಾಯಿಯ ಆಸೆಯಂತೆ ಇವರಿಗೆ ಪದವಿ ಮುಗಿಸಿದ ಕೂಡಲೇ ಮದುವೆಯನ್ನು ಮಾಡಿದರು ಕೈ ಹಿಡಿದಗಂಡ ಇವರ ಆಸೆಗೆ ಬೆನ್ನೆಲುಬಾಗಿ ನಿಂತರು. ಅವರ ಆಸೆಯಂತೆಯೇ ಗಂಡ ಪ್ರೋತ್ಸಾಹ ಒಳ್ಳೆಯ ಮನೆತನ ಸಿಕ್ಕಿತ್ತು. ಇವರಕೆಲಸವನ್ನು ನೋಡಿ ಬಿ ಜೆ ಪಿ ಪಕ್ಷದಲ್ಲಿ ರಾಜ್ಯದ ಕಾರ್ಯಕಾರಿಣಿ ಸದ್ಯಸೆಯಾಗಿ ಹಾಗೂ ಜೊತೆ ಗೆ ಜಿಲ್ಲಾ ಪಂಚಾಯತ್ಸದ್ಯಸೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಪ್ರಸ್ತುತ ಕೆ ಎಫ್ ಡಿ ಸಿ ಯ ಡೈರೆಕ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
1991 ರಲ್ಲಿ ಕಟಪಾಡಿ ಮುದ್ದು ಸುವರ್ಣ ಇವರ ಕೊನೆಯ ಮಗನಾದ ಮಹೇಶ್ ಎಮ್ ಸುವರ್ಣ ಇವರನ್ನುಮದುವೆಯಾದರು.ಪ್ರತಿಷ್ಟಿತ ಮನೆತನ ಇವರ ಆಸೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿತ್ತು ಜೊತೆಗೆ ಮೂರು ಮಕ್ಕಳ ಪ್ರೋತ್ಸಾಹ ಬೆಂಬಲದೊರಕಿತು.
ವಿ ಎಸ್ ಆಚಾರ್ಯ ಇವರ ಬೆಂಬಲದಿಂದ ಇವರ ರಾಜಕೀಯ ಅಡಿಪಾಯ ಸಿಕ್ಕಿತ್ತು .
2020 ಯಲ್ಲಿ ಬಂದ ಕೊರೋಣದಿಂದ ಅನೇಕ ಜನ ಕೆಲಸ ಇಲ್ಲದೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ದಿನಕ್ಕೆ 300 ಜನರಿಗೆ ತಾವೇಊಟವನ್ನು ರೆಡಿ ಮಾಡಿ ಕೊಟ್ಟ ಮಹಾ ತಾಯಿ ಈ ಗೀತಾ ಅಕ್ಕಾ.
ಪಡುಬಿದ್ರೆ ಜಿಲ್ಲಾ ಪಂಚಾಯತ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಐದು ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿ ಕೊಟ್ಟಿದ್ದಾರೆನಂತರ ದಿನಗಳಲ್ಲಿ ಸ್ವತಃ ಕೆಲವು ಯುವ ಜನರರೊಂದಿಗೆ ಸೂರಿನ ವ್ಯವಸ್ಥೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ ಒಬ್ಬನಿಸ್ವಾರ್ಥ ಸೇವಾ ಮಾಣಿಕ್ಯ ಇವರು. ಪ್ರಸ್ತುತ ಆದಿ ಉಡುಪಿಯ ಉಷಾ ಪೂಜಾರಿ ಇವರಿಗೆ ಒಂದು ಸೂರಿನ ವ್ಯವಸ್ಥೆ ಮಾಡಿದರುಇದಕ್ಕೆ ದಾನಿಗಳ ಸಹಕಾರ ತುಂಬಾ ದೊರಕಿದೆ.*
*ಇವರು ಮಾಡುವ ಸಮಾಜ ಸೇವೆಗೆ ವಿವೇಕಾನಂದ ಪ್ರಶಸ್ತಿ ಮತ್ತು ಸಮಾಜ ರತ್ನ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದಾರೆ. ರಾಜಕೀಯಪ್ರವೇಶ ಮಾಡುವ ಮೊದಲೇ ಬಡ ಜನರಿಗೆ ಸೇವೆಯನ್ನು ಮಾಡುತ್ತಿರುವ ಇವರಿಗೆ ಯಾವುದೇ ಜಾತಿ ಭೇದ ಇಲ್ಲದೆ ಸೇವೆಯನ್ನುಮಾಡುತ್ತ ಬಂದಿದ್ದಾರೆ.ಯಾವುದೇ ಸಂದರ್ಭದಲ್ಲಿ ಎಂಥಹ ಕೆಲಸ ಇದ್ದರೂ ತುರ್ತು ಪರಿಸ್ಥಿತಿಯಲ್ಲಿ ಎಲ್ಲವನ್ನು ಬಿಟ್ಟು ಜನರ ಸೇವೆಮಾಡಿದ ನಮ್ಮ ಹೆಮ್ಮೆಯ ನಾಯಕಿ (ಅಕ್ಕ ) ಇವರು. ಇದುವರೆಗೂ 9 ಮನೆಯನ್ನು ಕಟ್ಟಿ ಕೊಟ್ಟು ಬಡ ಜನರ ಸೂರಿನ ಕನಸುನನಸು ಮಾಡಿದ್ದಾರೆ.
ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಮನಸ್ಸು ಅರ್ಥ ಮಾಡಿಕೊಳ್ಳಲು,ಕಷ್ಟ ಪಡುವ ಈ ಕಾಲದಲ್ಲಿ ಅಹಂ ಮತ್ತು ಅಹಂಕಾರ ಇಲ್ಲದಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೂವಿನಂತ ಮನಸ್ಸು ಇರುವ ಇವರಿಗೆ ಕಟೀಲ್ ಅಮ್ಮನ ಅನುಗ್ರಹ ಸದಾ ಇರಲಿ ಇವರುಅಂದುಕೊಂಡ ಕನಸು ರಾಜಕೀಯದ ಮಾಡಬೇಕಾದ ಸಾಧನೆ ಎಲ್ಲವೂ ನನಸಾಗಲಿ ಶುಭವಾಗಲಿ ಅಕ್ಕಾ.
✍ ಬರಹ :ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್ )