ತುಳುಚಿತ್ರರಂಗ ಹಾಗು ಕನ್ನಡ ಸಿನಿಮಾದಲ್ಲಿ ಮಂಗಳೂರ ಸ್ವಸ್ಥಿಕ ಪೂಜಾರಿ ಬೆಳೆಯುತ್ತಿರುವ ಬಿಲ್ಲವ ಪ್ರತೀಭೆಯಾಗಿದ್ದಾರೆ. ಸ್ವಸ್ತಿಕ ಪೂಜಾರಿ ತಂದೆ ದಿ|| ಮಹಾಬಲ – ತಾಯಿ ಭಾರತಿ ಯವರ ಮುದ್ದಿನ ಮಗಳು, ತನ್ನ ಎಮ್ ಕಾಂ ವಿದ್ಯಾಭ್ಯಾಸವನ್ನು ಬೆಸೆಂಟ್ ವಿದ್ಯಾ ಸಂಸ್ಥೆಯಲ್ಲಿ ಮುಗಿಸಿ, ಬ್ಯಾಂಕಿಗ್ ಸಂಸ್ಥೆಯಲ್ಲಿ ಕೆಲಸದಲ್ಲಿದ್ದಾರೆ.
ಇವರು ಬೊಳ್ಳಿಲು, ದಾಗುಲ್ ಬಾಜಿಲ್ ತುಳು ಸಿನಿಮಾದಲ್ಲಿ ಸಪೋರ್ಟ್ ರೋಲ್ ಅಭಿನಯಿಸಿದ್ದು,
ಈಗ ಕನ್ನಡ ಸಿನಿಮಾ “ನಿಶಾಚಾರ” ಎಂಬ ಭಾಸ್ಕರ ಜಿ ಇವರ ನಿರ್ದೇಶನದಲ್ಲಿ ಕನ್ನಡ ಸಿನಿಮಾದಲ್ಲಿ ಹಾಗೆ “ಕನಸು ಮಾರಾಟಕ್ಕಿದೆ ” ಸ್ಮಿತೇಶ್ ಎಸ್ ಬಾರ್ಯ, ನಿರ್ದೇಶನದ ಈ ಚಿತ್ರಕ್ಕೆ ಕಾಮಿಡಿಕಿಲಾಡಿ ಅನೀಶ್ ಪೂಜಾರಿ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ಹಿನ್ನೆಲೆಗಾಯಕಿ ಮಾನಸಹೊಳ್ಳ ಸಂಗೀತದ ಇಂಪು ನೀಡುತ್ತಿದ್ದಾರೆ. ಸಿನೆಮಾಗಳ ಗೀತೆಗೆ ಖ್ಯಾತ ನಿರ್ದೇಶಕ ಕವಿರಾಜ್, ಭರಾಟೆ ನಿರ್ದೇಶಕ ಚೇತನ್,ಸಾಹಿತಿ ಡಾ.ನಾಗೇಂದ್ರ ಪ್ರಸಾದ್ , ಸುಕೇಶ್ ಇವರುಗಳು ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ.
ನಾಯಕನಾಗಿ ಪ್ರಜ್ಞೇಶ್ ಶೆಟ್ಟಿ, ನಾಯಕಿ ಸ್ವಸ್ತಿಕ ಪೂಜಾರಿ ಮಿಂಚಿದ್ದಾರೆ.
ಎರಡು ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಬಿಲ್ಲವ ಪ್ರತಿಭೆ ಸ್ವಸ್ತಿಕ ಪೂಜಾರಿ ಮುಂಬರುವ ದಿನಗಳಲ್ಲಿ ಈ ಸಿನಿಮಾಗಳು ತೆರೆ ಕಾಣಲಿದೆ.