ನಮ್ಮ ತುಳುನಾಡಿನಲ್ಲಿ ಅದೆಷ್ಟೋ ಸೇವಾ ಸಾಧಕರಿದ್ದಾರೆ. ಇವತ್ತು ನಾವು ಪರಿಚಯ ಮಾಡುವ ಸೇವಾ ಮಾಣಿಕ್ಯ ಸತೀಶ್ ಉಳ್ಳಾಲ್ ದುಬೈ.
ಶ್ರೀ ಬಂಟಪ್ಪ ಪೂಜಾರಿ ಮತ್ತು ಶ್ರೀಮತಿ ಮುತ್ತು ಪೂಜಾರಿ ದಂಪತಿಗಳ ಮುದ್ದಿನ ಮೂರನೇ ಮಗ ಸತೀಶ್ ಉಳ್ಳಾಲ್, ಇವರು ಪ್ರಾಥಮಿಕ ಶಿಕ್ಷಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ ಮತ್ತು ಪ್ರೌಢ ಶಿಕ್ಷಣವನ್ನು ಭಾರತ್ ಪ್ರೌಢ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿರುವರು,ವೃತ್ತಿ ಶಿಕ್ಷಣವನ್ನು (ಡ್ರಾಫ್ಟ್ ಮೆಕ್ಯಾನಿಕ್ )ಕೈಗಾರಿಕ ತರಬೇತಿ ಕೇಂದ್ರ ಕದ್ರಿಯಲ್ಲಿ ಮಾಡಿದರು, 1988ರಲ್ಲಿ ಆಂಗ್ಲ ಭಾಷೆ ಬೆರಳಚ್ಚು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರು, ಅದಲ್ಲದೆ ಭಾರತನಾಟ್ಯ ಕಲಾವಿದರು ಆಗಿರುವರು. 1994 ರಲ್ಲಿ ಜ್ಯೋತಿ ಕಾಲೇಜ್ ನಲ್ಲಿ ನಡೆದ ಜೂನಿಯರ್ ವಿಭಾಗದ ಪರೀಕ್ಷೆಯನ್ನು ಬರೆದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಮಂಗಳೂರಿನ ಪುರಭವನ, ಹಾಗೂ ಉಡುಪಿಯ ಹಲವಾರು ಕಡೆ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಇವರು ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಜೀವನಕ್ಕಾಗಿ ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು, ನಂತರ “ಮಝಗಾಂ ಡಾಕ ” 11ವರ್ಷ ಸೇವೆಯನ್ನು ಸಲ್ಲಿಸಿದ ಇವರು 1995ರಲ್ಲಿ ಅಮೇರಿಕಾ ಮೂಲದ “ಮೆಕ್ಡರ್ ಮೋಟ್ ” ಎಂಬ ಸಂಸ್ಥೆಯಲ್ಲಿ ಸೀನಿಯರ್ ಪ್ರಿನ್ಸಿಪಾಲ್ ಡಿಸೈನರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರು ಕೇವಲ ತನ್ನ ಏಳಿಗೆಗಾಗಿ ಮಾತ್ರವಲ್ಲದೆ ಸಮಾಜದ ಏಳಿಗೆಯನ್ನು ಬಯಸಿ ಸಮಾಜ ಸೇವೆಯ ಮಾಡುತ್ತ ಒಬ್ಬ ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿ ಎಂದೆನಿಸಿಕೊಂಡಿರುವರು
ಉಳ್ಳಾಲದ ಗೋಕರ್ಣನಾಥ ಸಂಘದಲ್ಲಿ 10 ವರ್ಷ ಸೇವೆ, ಬಿಲ್ಲವಾಸ್ ದುಬೈ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿ 16 ವರ್ಷ ಸೇವೆ, ಪ್ರಸ್ತುತ ಅಭಿರುದ್ದಿ ಅಧಿಕಾರಿಯಾಗಿ ಸಂಘದ ಮುಖಾಂತರ ಅನೇಕ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವುದರಲ್ಲಿ ಮೊದಲಿಗರು ಆಗಿರುತ್ತಾರೆ. ಬಿರ್ವೆರ್ ಕುಡ್ಲ ದುಬೈ ವಿಂಗ್ ಎಸ್ಕ್ಯೂಟ್ ಆಗಿ, ಮಂಗಳೂರು ಫ್ರೆಂಡ್ಸ್ ದುಬೈ ದೋಸ್ತಿ ಸಂಘದಲ್ಲಿ ಅಧ್ಯಕ್ಷರು ಆಗಿ, ದುಬೈ ವರಮಹಾಲಕ್ಷ್ಮಿ ಪೂಜೆಯ ಸಮಿತಿ ಸ್ಥಾಪಕರಾಗಿ, ಯಕ್ಷಗಾನ ಕೂಟ, ನಾಟಕ ರಂಗ ಧ್ವನಿ ಪ್ರತಿಷ್ಠಾನ, ಯಕ್ಷ ಮಿತ್ರರು, ಗಮ್ಮತ್ ಕಲಾವಿದರು, ತುಳು ಪಾತೆರ್ಗ ತುಳು ಒರಿಪಾಗ ಪ್ರಸ್ತುತ ಬಿಲ್ಲವಾಸ್ ದುಬೈ ಇದರ ವಾಯ್ಸ್ ಪ್ರೆಸಿಡೆಂಟ್ ಆಗಿ ಹೀಗೆಯೇ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ
ಇವರು ಮಾಡಿರುವ ಸೇವೆಗೆ ಅನೇಕ ಗೌರವ ಸನ್ಮಾನವನ್ನು ಪಡೆದಿರುತ್ತಾರೆ. ಉಲ್ಲಾಳೆರೆನ ಶ್ರೀ ನಾರಾಯಣ ಗುರು ಸಂಘ ಕಾಟಿಪಳ್ಳ, ವೀರನಾರಾಯಣ ಗೇಮ್ಸ್ ಟೀಮ್ ಕುಲಶೇಖರ, ಬಿಲ್ಲವಾಸ್ ಸಂಘ ದುಬೈ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇಂತಹ ಹಲವಾರು ಸಂಸ್ಥೆಗಳಿಂದ ಸನ್ಮಾನಕ್ಕೆ ಭಾಜನರಾಗಿರುತ್ತಾರೆ.
ನಟನೆಯಲ್ಲಿ ಆಸಕ್ತಿ ಹೊಂದಿರ ಇವರು ಕಲಾ ಪೋಷಕರು ಆಗಿ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಸರಸ್ವತಿಯ ಸೇವೆಯನ್ನು ಮಾಡುತ್ತಾ ಇರುವರು
ಬಿಲ್ಲವ ಸಮಾಜ ಏಳಿಗೆ ಮಾತ್ರ ಅಲ್ಲದೆ ಎಲ್ಲಾ ಸಮಾಜದಲ್ಲಿಯೂ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ
ಇಷ್ಟು ಮಾತ್ರ ಅಲ್ಲದೆ ಗೆಳೆಯರ ಜೊತೆ ಸೇರಿ 6ಹೆಣ್ಣು ಮಕ್ಕಳಿಗೆ ಮದುವೆಗೆ ಮಾಂಗಲ್ಯ ಸರ ಮತ್ತು ಹಣದ ಸಹಾಯ ಮಾಡಿರುವರು, ಅದೆಷ್ಟೋ ಕೂಲಿ ಕಾರ್ಮಿಕರಿಗೆ ಸರಿಯಾದ ಕೆಲಸ ಸಿಗುವ ವರೆಗೆ ಸಂಪೂರ್ಣ ಖರ್ಚು ಶ್ರೀಯುತರು ನೋಡಿಕೊಂಡಿರುತ್ತಾರೆ.
ಹೊರದೇಶದಲ್ಲಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಜನ ಮನ ಗೆದ್ದಿದ್ದ ಇವರು 2012ರಲ್ಲಿ “ಅಪ್ಪೆ ಭಾಷೆ” ಪುಸ್ತಕ 6 ಜನ ಫ್ರೆಂಡ್ಸ್ ಸೇರಿ 2000 ಪುಸ್ತಕ ಬಿಡುಗಡೆ ಮಾಡಿ ಜನರಿಂದ “ತುಳುವ ಮಾಣಿಕ್ಯ” ಎಂಬ ಬಿರುದು ಪಡೆದರು.ದುಬೈನಲ್ಲಿ ನಡೆದ ತುಳು ಪರ್ಬ ಎಂಬ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಇವರ ಟೀಮ್ ಬಿಲ್ಲವಾಸ್ ದುಬೈ ಪ್ರಥಮ ಸ್ಥಾನ ಪಡೆದಿರುತ್ತದೆ.
ಕೋರೋಣದಿಂದ ಇಡಿ ಜಗತ್ತೇ ತತ್ತರಿಸಿ ಹೋದ ಸಮಯದಲ್ಲಿ ದುಬೈನಲ್ಲಿ ಬ್ಲಡ್ ಸೆಂಟರ್ ರಕ್ತದ ಅವಶ್ಯಕತೆ ಇರುವಾಗ 60ಜನರ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸುವಲ್ಲಿ ಯಶಸ್ವೀಯಾಗಿರುವರು
ಮುಗ್ದ ಮನಸ್ಸಿನ ಇವರು ಮಾಡೋ ಸೇವೆಗೆ ತುಳುನಾಡು, ತುಳುಭಾಷೆ ಮೇಲಿರುವ ಅಭಿಮಾನಕ್ಕೆ ದೇವರ ಅನುಗ್ರಹ ಸದಾ ಇರಲಿ ಕಟೀಲು ದುರ್ಗಾ ಪರಮೇಶ್ವರಿ ಅಮ್ಮ ಇವರಿಗೆ ಆರೋಗ್ಯ ಆಯುಷ್ಯ, ಸಂಪತ್ತು, ಎಲ್ಲಾ ಕೊಟ್ಟು ಕಾಪಾಡಲಿ ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುವ
ಬರಹ:✍️ ಪ್ರಶಾಂತ್ ಅಂಚನ್ ಮಸ್ಕತ್ತ್