ಮಂಗಳೂರು ಬಜ್ಪೆಯ ಪೊರ್ಕೋಡಿ ಯ ದಿವಂಗತ ಶ್ರೀ ಲಕ್ಷ್ಮಣ ಮತ್ತು ಪದ್ಮಾವತಿ ದಂಪತಿಗಳ ಮುದ್ದಿನ ಎರಡನೇ ಮಗನಾಗಿಹುಟ್ಟಿದ ಇವರು ತನ್ನ ವಿದ್ಯಾಭ್ಯಾಸ ಹಿರಿಯ ಪ್ರಾಥಮಿಕ ಶಾಲೆ ಪೊರ್ಕೋಡಿ, ಕೆಂಜಾರು, ಪ್ರೌಢ ಶಿಕ್ಷಣವನ್ನು ಬಾಳ ಕಳವಾರಿನಲ್ಲಿಓದಿರುತ್ತಾರೆ.ನಂತರ ಶಿಕ್ಷಣವನ್ನು ಮೊಟಕುಗೊಳಿಸಿ ಕಷ್ಟದ ದಿವಸದಲ್ಲಿ ಜೀವನಕ್ಕಾಗಿ ಭವಾನಿ ಡೆಂಟಲ್ ಲ್ಯಾಬ್ ನಲ್ಲಿ ಕೆಲಸಕ್ಕೆಸೇರಿಕೊಂಡರು ಅದಾದ ನಂತರ ಮುಂಬೈಯಲ್ಲಿ ಎರಡು ವರ್ಷಗಳ ದುಡಿದರು ನಂತರ ಬೆಂಗಳೂರಿನಲ್ಲಿ ದುಡಿದರು. ಕೇವಲ ತನ್ನಸ್ವಾರ್ಥಕ್ಕಾಗಿ ಅಲ್ಲದೆ ಪರರ ಕಷ್ಟಗಳಿಗೆ ಸ್ಪಂದಿಸಿ ತನ್ನ ಕೈಲಾದಷ್ಟು ಯಾರಿಗೂ ತಿಳಿಯದ ರೀತಿಯಲ್ಲಿ ಸಹಾಯ ಮಾಡುತ್ತಾಬಂದಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತನ್ನ ಮುಖಪುಟದಲ್ಲಿ ಇವರು ಯಾರಾದರೂ ಸಮಾಜ ಸೇವೆಯಲ್ಲಿ, ಕ್ರೀಡೆಯಲ್ಲಿ , ಹಾಡುಗಾರಿಕೆ, ಸಾಹಿತ್ಯ, ಬರಹಗಾರರು ಇದ್ದರೆ ಅವರಿಗೆ ಸ್ಪೂರ್ತಿ ತುಂಬಿ ಅಭಿನಂದನೆ ಸಲ್ಲಿಸುತ್ತಾರೆ ಪ್ರೋತ್ಸಾಹ ನೀಡುತ್ತಾರೆ.
ತನ್ನಿಂದ ಏನಾದರೂ ಸಮಾಜಕ್ಕೆ ಕಿಂಚಿತ್ತೂ ಒಳ್ಳೆಯ ಕೆಲಸ ಮಾಡುವುದಕ್ಕಾಗಿ ರಕ್ತದಾನ,(9ಬಾರಿ ರಕ್ತದಾನ )ಅಂಗಾಂಗ ದಾನ, ಮಾಡುವುದಾಗಿ ಮತ್ತು ಇದರ ಬಗ್ಗೆ ಜನ ಜಾಗ್ರತಿ ಮೂಡಿಸಿದ್ದಾರೆ. ಮುಗ್ದ ಮನಸ್ಸಿನ ನಿರಂಜನ್ ಇವರಿಗೆ ಬೆನ್ನೆಲುಬಾಗಿ ನಿಂತವರುಅಣ್ಣ, ಅಮ್ಮ ಹಾಗೂ ಅವರ ಧರ್ಮ ಪತ್ನಿ. ಹೆಮ್ಮೆಯ ವಿಷಯವೆಂದರೆ ತುಳು ಭಾಷೆಯ ಬಗ್ಗೆ ಎಲ್ಲಿಲ್ಲದ ಒಲವು. ಇವರುನಾಗಬ್ರಹ್ಮಸ್ಥಾನ ಇದರ ಅಧ್ಯಕ್ಷರು ಹಿಂದೂ ಯುವ ಸೇನೆ ಪೇಜಾವರ ಶಾಖೆ, ಸಂಘಟನಾ ಕಾರ್ಯದರ್ಶಿ, ಜೈ ತುಳುನಾಡ್ (ರಿ.) ಸದಸ್ಯರು , ಬಿರುವೆರ್ ಕುಡ್ಲ ಬಜ್ಪೆ ಘಟಕದ ( ರಿ.),ಸದಸ್ಯರು ಯಕ್ಷ ಮಿತ್ರರು ಪೊರ್ಕೋಡಿ (ರಿ )ಸದಸ್ಯರು ಕೇಸರಿ ಯುವ ಶಕ್ತಿಬೆಂಗಳೂರು (ರಿ ) ಸದಸ್ಯರು, ಯುವವಾಹಿನಿ ಬಜ್ಪೆ ಘಟಕ ಸದಸ್ಯರು ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.* *ಅನೇಕ ಕಡೆ ಸನ್ಮಾನವನ್ನು ಸ್ವೀಕರಿಸಿದ ಇವರಿಗೆ ಇನ್ನಷ್ಟು ಸನ್ಮಾನಗಳು ಇವರ ಮುಡಿಗೇರಲಿ .(ಕರ್ನಾಟಕ ತುಳು ಸಾಹಿತ್ಯಅಕಾಡಮಿ ಯ ಪುಗರ್ತೆದ ಓಲೆ,)ಮುಂದಿನ ಕನಸು ಸಮಾಜಸೇವೆಯೇ ಮುಂದಿನ ಗುರಿ. ಇಷ್ಟು ಮಾತ್ರ ಅಲ್ಲದೆ ನಾಟಕದಲ್ಲಿಪಾತ್ರವನ್ನು ನಿರ್ವಹಿಸಿ ತನ್ನಲ್ಲು ಪ್ರತಿಭೆ ಇದೆ ಎಂದು ತೋರಿಸಿದ್ದಾರೆ.(ಬೈಲ ಕುರಲ್, ಈ ಪೊಣ್ಣು ಏರ್?, ಈ ದಾಯೆ ಪಾತೆರುಜಾ? ಗೊತಾವರೇ ಬಲ್ಲಿ, ಬಂಗಾರ್ ಬಾಬು ) ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದಷ್ಟು ವರ್ಷಗಳ ಕಾಲ ಆಟೋ, ಟ್ಯಾಕ್ಸಿಮಾಲಕರಾಗಿದ್ದರು. ಪ್ರಸ್ತುತ ಮಂಗಳೂರು ಏರ್ಪೋರ್ಟ್ ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಪ್ರೈವೇಟ್ ಕಂಪನಿಯಲ್ಲಿ 7 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ತನ್ನ ಜೀವನವನ್ನು ಸಮಾಜ ಒಳಿತಿಗಾಗಿ ಮುಡಿಪಾಗಿರುವ ನಿರಂಜನ್ ಇವರಿಗೆದೇವರ ಅನುಗ್ರಹ ಸದಾ ಇರಲಿ, ಇನ್ನಷ್ಟು ಸೇವೆ ಮಾಡಲು ಅವಕಾಶ ಸಿಗಲಿ ಆ ಭಗವಂತ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿನಿಮ್ಮ ಕನಸು ನನಸಾಗಲಿ ಶುಭವಾಗಲಿ.
ಬರಹ :✍️ ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್)