TOP STORIES:

ತುಳುವಿನಲ್ಲೂ ಸೈ ಎನಿಸಿಕೊಂಡ ’ಕೊಂಕಣಿ ಕೋಮೆಡಿ ಪ್ರಿನ್ಸ್’ ಪ್ರದೀಪ್ ಬಾರ್ಬೋಜಾ


ಮಹೇಶ್, ಅಕಾಶ್ ಭವನ್

ಮಂಗಳೂರು: ಕಳೆದ ವರ್ಷಾಂತ್ಯಕ್ಕೆ ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೋಡಾ ಶರ್ಬತ್ ಹೊಸ ವರ್ಷದ ಶುಭಾರಂಭದಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಿದೆ. ಬಹಳ ಸಮಯದ ನಂತರ ಉತ್ತಮ ಕಥಾಹಂದರವನ್ನು ಹೊಂದಿದ ಚಿತ್ರವೊಂದು ಬಿಡುಗಡೆಯಾದದ್ದು ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುವಂತೆ ಮಾಡಿದೆ. ಇದಕ್ಕಿಂತಲೂ ಮಿಗಿಲಾಗಿ ಸೋಡಾ ಶರ್ಬತ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕ ಹಾಗೂ ನಟನೋರ್ವನ ಪ್ರವೇಶವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡಬಿದಿರೆ ಸಮೀಪದ ಪಾಲಡ್ಕ ನಿವಾಸಿಯಾದ ಪ್ರದೀಪ್ ಬರ್ಬೋಜಾ ಉಧ್ಯೋಗ ನಿಮಿತ್ತ ಕಳೆದ ಹದಿನೈದು ವರ್ಷಗಳಿಂದ ಯುಎಇಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಾಟಕ ರಚನೆ ಹಾಗೂ ಅಭಿನಯದ ಗೀಳು ಹಚ್ಚಿಸಿಕೊಂಡ ಪ್ರದೀಪ್ ಮೂಡಬಿದ್ರೆ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಅತೀ ಕಿರಿವಯಸ್ಸಿನಲ್ಲಿಯೇ ವಿಶೇಷ ಸದ್ದು ಮಾಡಿದ್ದರು. ಅವರು ಬರೆದು ನಿರ್ದೇಶಿಸಿದ ತುಳು ನಾಟಕ ’ಬಂಡಲ್ ಭಾಸ್ಕರೆ’ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ಯುಎಇಗೆ ತಲುಪಿದ ನಂತರ ಅಲ್ಲೂ ನಾಟಕ ರಂಗದಲ್ಲಿ ಸಕ್ರೀಯವಾಗಿದ್ದ ಪ್ರದೀಪ್ ಹಲವಾರು ಕೊಂಕಣಿ ನಾಟಕಗಳನ್ನು ರಚಿಸಿ ನಿರ್ದೇಶಿದ್ದಾರೆ. ವಿದೇಶದಲ್ಲಿ ನೂರಕ್ಕಿಂತಲೂ ಹೊಸ ಕಲಾವಿದರಿಗೆ ರಂಗಕಲೆಯ ಬಗ್ಗೆ ತರಬೇತಿಯನ್ನಿತ್ತು ರಂಗಭೂಮಿಯಲ್ಲಿ ನಂತರ ಸೀರಿಯಲ್/ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಪ್ರದೀಪ್ ಅವರಿಗೆ ಸಲ್ಲುತ್ತದೆ.

ಈ ಮಧ್ಯೆ 2016ರಲ್ಲಿ ’ಏಕ್ ಅಸ್ಲ್ಯಾರ್ ಏಕ್ ನಾ’ ಎಂಬ ಕೊಂಕಣಿ ಸಿನೆಮಾವನ್ನು ನಿರ್ದೇಶಿಸಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಪ್ರದೀಪ್ ಅವರ ಮೊದಲ ಕೊಂಕಣಿ ಸಿನೆಮಾವು ಕೊಂಕಣಿ ಚಿತ್ರರಂಗದ ಅಯಾಮನ್ನೇ ಬದಲಿಸಿತು ಎಂದು ಹೇಳಬಹುದು. ನಾಟಕ ಹಾಗೂ ನಾಟಕೀಯತೆಯನ್ನು ಚಿತ್ರೀಕರಣ ಮಾಡಿ ಸಿನೆಮಾ ಎಂದು ತೋರಿಸುತ್ತಿದ್ದ ಕೊಂಕಣಿ ಜಗತ್ತಿನಲ್ಲಿ ಪ್ರದೀಪ್ ಅವರ ’ಏಕ್ ಅಸ್ಲ್ಯಾರ್ ಏಕ್ ನಾ’ ನೈಜ ಸಿನೆಮಾದತ್ತ ಮುಖಮಾಡುವಂತೆ ಮಾಡಿತು. ಕೊಂಕಣಿ ಮೂಲಭಾಷೆಯಾಗಿದ್ದುಕೊಂಡು ತುಳು-ಕನ್ನಡ ಚಿತ್ರರಂಗಲ್ಲಿ ನಟರೆನಿಸಿಕೊಂಡ ಹೆಚ್ಚಿನ ಮುಖಗಳು ಪ್ರದೀಪ್ ಬಾರ್ಬೋಜಾ ಅವರ ಕೈಕೆಳಗೆ ಪಳಗಿದವರೇ.

ಕೊಂಕಣಿ ಚಿತ್ರದ ನಂತರ ಕೆಲ ಕನ್ನಡ-ತುಳು ಚಿತ್ರಗಳಲ್ಲಿ ನಟಿಸಿದ ಪ್ರದೀಪ್ ಅವರಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಕನಸಿತ್ತು. ಇದೀಗ ಸೋಡಾ ಶರ್ಬತ್ ಮೂಲಕ ಈ ಕನಸು ಈಡೇರಿದಂತಾಗಿದೆ. ಚಿತ್ರದುದ್ದಕ್ಕೂ ತನ್ನ ವಿಭಿನ್ನ ಶೈಲಿಯ ನಟನೆಯೊಂದಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರದೀಪ್ ತುಳು ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದಭಿರುಚಿಯ ಚಿತ್ರಗಳ ಕೊರತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಪ್ರದೀಪ್ ಅವರು ಇಡೀ ಸಮಾಜೆವೇ ಚರ್ಚಿಸುವಂತಹ ಸಿನೆಮಾವೊಂದನ್ನು ಮಾಡಿ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪಾಲಡ್ಕ ಎಂಬ ಪುಟ್ಟ ಹಳ್ಳಿಯಿಂದ ಬಂದ ಪ್ರತಿಭೆ ಮುಂದೊಂದು ದಿನ ತುಳು ಚಿತ್ರರಂಗದಲ್ಲಿ ಇಷ್ಟೊಂದು ಅಬ್ಬರದ ಎಂಟ್ರಿ ಕೊಡಬಹುದು ಎಂದು ಯಾರೂ ನಂಬಿರಲಿಕ್ಕಿಲ್ಲ. ಆದರೆ ಛಲವಾದಿಯಾದ ಪ್ರದೀಪ್ ಅದನ್ನು ಮಾಡಿ ತೋರಿಸಿದ್ದಾರೆ. ಸೋಡಾ ಶರ್ಬತಿನ ಗೆಲುವು ಪ್ರದೀಪ್ ಹಾಗೂ ತಂಡಕ್ಕೆ ಮಾತ್ರವಲ್ಲದೆ ತುಳುಚಿತ್ರರಂಗಕ್ಕೂ ದಕ್ಕಿದ ಗೆಲುವಾಗಿದೆ. ಮೊದಲ ಪ್ರಯತ್ನದಲ್ಲೇ ತುಳು ಸಿನಿಪ್ರಿಯರ ಹೃದಯಗಳನ್ನು ಗೆದ್ದ ಪ್ರದೀಪ್ ಅವರಿಂದ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ ಎಂದು ಆಶಿಸೋಣ.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »