ದಸರೆಗೆ ಮಿಂಚಿದ ಸಿಂಹ ರಿಯಲಿಸ್ಟಿಕ್ ಆರ್ಟ್ ಕಲಾವಿದೆ ಅಂತರಾಷ್ಟ್ರೀಯ ಸೌಂದರ್ಯ ಕಲಾವಿದೆ ಚೇತನಾ ಸಾಲಿಯಾನ್
ನವರಾತ್ರಿ ವಿಶೇಷವಾಗಿ ಪೂಜಿಸಲ್ಪಡುವ ದುರ್ಗಾ ಮಾತೆಯ ವಾಹನವಾಗಿರುವ ಸಿಂಹದ ಮುಖವನ್ನು ಯುವತಿಯ ಮುಖದಲ್ಲಿ ಚಿತ್ರಿಸಿರುವ ನಗರದಅಂತರ್ರಾಷ್ಟ್ರೀಯ ಸೌಂದರ್ಯ ಕಲಾವಿದೆ ಚೇತನಾ ಸಾಲಿಯಾನ್ಸಿಂ ಹದ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ 4 ದಿನದಲ್ಲೇ ಇಪ್ಪತ್ತೈದು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನೂರಾರು ಮಂದಿ ಫೇಸ್ ಬುಕ್ ಸೇರಿದಂತೆ ಕಮೆಂಟ್ ಹಾಕಿರುತ್ತಾರೆ. ಸೆಲೆಬ್ರಿಟಿಗಳಾದ ಪಾರು ಸೀರಿಯಲ್ ನ ಸಾಗರ್,ಅದ್ವಿತಿ ಶೆಟ್ಟಿ, ನಿಯಾ ಸಕ್ಸೇನಾ ಕೂಡ ಲೈಕ್ ಮಾಡಿದ ಪ್ರಮುಖರು.ಚೇತನಾ ಸಾಲಿಯಾನ್ ಅವರು ಇದೀಗ ಸದ್ದಿಲ್ಲದೆ ಸುದ್ದಿ ಆಗಿದ್ದಾರೆ
ಮಂಗಳೂರು ನಗರದ ಬೆಂದೂರ್ ವೆಲ್ ಚೇತನಾ ಬ್ಯೂಟಿ ಲಾಂಗ್ ಆ್ಯಂಡ್ ಆಕಾಡೆಮಿಯ ಮುಖ್ಯಸ್ಥೆ ಅಂತರ್ರಾಷ್ಟ್ರೀಯ ಸೌಂದರ್ಯ ಕಲಾವಿದೆ, ಅಂತರ್ರಾಷ್ಟ್ರೀಯ ಮಟ್ಟದ ಸೌಂದರ್ಯ ರೂಪದರ್ಶಿ ತರಬೇತುದಾರೆ ಚೇತನಾ ಸಾಲಿಯಾನ್ . ಇವರು ಕಾಲೇಜಿನಲ್ಲಿ ಹವ್ಯಾಸವಾಗಿ ಬ್ಯೂಟಿಶಿಯನ್ ಕಲೆಯನ್ನು ಕರಗತ ಮಾಡಿಗೊಂಡ ಬಿ. ಎ ಮನಶಾಸ್ತ್ರಜ್ಞ ಪದವೀದರೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ತರಬೇತಿ ಪಡೆದಿರುವ *ರಷ್ಯಾ, ಸಿಂಗಾಪುರ, ಟರ್ಕಿ, ಜರ್ಮನಿ , ದುಬೈ ವಿದೇಶಗಳಲ್ಲಿ ಇವರು ಬಹು ಬೇಡಿಕೆಯ ಪ್ರಸಿದ್ಧ ಸೌಂದರ್ಯ ಕಲಾವಿದೆ. ಸ್ವಿಜ್ಹರ್ ಲ್ಯಾಂಡ್ ನಲ್ಲಿ ಬ್ಯೂಟಿ ಕಾಸ್ಮೇಟಿಕ್ (Cidesco Zurich)ಸರ್ಟಿಫಿಕೇಶನ್ ಪಡೆದಿರುತ್ತಾರೆ , ಸರ್ಟಿಫಿಕೇಟ್ ಫಸ್ಟ್ ಮಂಗಳೂರು
ಎಕ್ಸ್ಪರ್ಟ್ ಇನ್ ಏರ್ ಬ್ರಶ್ ಮೇಕ್ಆಫ್, ಸ್ಟೇಟೆಡ್ ಬ್ಯೂಟಿ ಪ್ರೋಪೇಶನ್ 1996ರಿಂದ ಪ್ರಾರಂಭಿದರು , ಸರ್ಟಿಪೈಡ್ ಕ್ರೈಲಾನ್ ಪ್ರೊಪೆಶನಲ್ ಮೇಕ್ಆಫ್ ಆಕಾಡೆಮಿ ಬರ್ಲಿನ್, ಮಾಸ್ಟರ್ ಕ್ಲಾಸ್ ಇನ್ ಹೇರ್ ಸ್ಟೈಲ್ ಡಿ ವಾಜ್ಹನ್ ರಷ್ಯಾ, ಮಾಸ್ಟರ್ ಕ್ಲಾಸ್ ಇನ್ ಹೇರ್ ಸ್ಟೈಲ್ ಜಾರ್ಜ್ ಕಾಟ್ ದುಬೈ , ಮಾಸ್ಟರ್ ಕ್ಲಾಸ್ ಇನ್ ಬ್ರೈಡಲ್ ಮೇಕ್ಆಫ್ ಫರ್ಮ್ ಏಷಿಯನ್ ಬ್ರೈಡಲ್(sukhi sanghera) ಮಾಸ್ಟರ್ ಕ್ಲಾಸ್ ಇನ್ ಬ್ರೈಡಲ್ ಮೇಕ್ಆಫ್, ಹೇರ್ ಸ್ಟೈಲ್ ನಯೀಮ್ ಖಾನ್ ಮತ್ತು ಇರ್ಫಾನ್ ಆಲಿ ದುಬೈ ಅನೇಕ ವಿದೇಶಗಳಿಂದ ಪ್ರತಿಷ್ಠಿತ ನುರಿತ ತರಬೇತಿಯ ಪ್ರಶಸ್ತಿ ಹಾಗೇ ಅರ್ಹತಾ ಪತ್ರವನ್ನು ಪಡೆದಿರುತ್ತಾರೆ. ಅವರು ಬ್ಯೂಟಿಷಿಯನ್ ಆಗಿ 24 ವರ್ಷದ ಪರಿಣಿತೆ ಹಾಗೂ ಅನುಭವಿ ಆಗಿದ್ದು ಹಾಗೇ ಇವರು ಹಲವಾರು ಕಡೆ ಮಂಗಳೂರು,ದಾವಣಗೆರೆ,
ಧರ್ಮಸ್ಥಳ, ಬೆಂಗಳೂರು ಬ್ಯೂಟಿ ಕ್ಷೇತ್ರದ ಕುರಿತು ಸೆಮಿನಾರ್ ಕೊಟ್ಟು ಇರುವ ಅಲ್ಲದೆ ಬ್ಯೂಟಿಯನ್ ಶಿಕ್ಷಣದಲ್ಲಿ ಅಪಾರ ಆಸಕ್ತಿ ಇರುವವರಿಗೆ ಅರ್ಹತೆ ಅನುಸಾರವಾಗಿ
ಉಚಿತ ತರಬೇತಿಯ ಆಶಯ ಹಾಗೇ ಪ್ರಸ್ತುತ ಸಾಮಾಜಿಕ ಚಿಂತನೆಯ ಆಕರ್ಷಣೀಯ ಆದರ್ಶ ವ್ಯಕ್ತಿತ್ವ ಇವರದು. ಮೇಕಪ್ ಆರ್ಟ್, ಮೆಹಂದಿ ವಿನ್ಯಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ಇವರು ಇದನ್ನೇ ತಮ್ಮ ವೃತ್ತಿಯನ್ನಾಗಿಸಿದವರು ಏನಾದರೂ ಹೊಸತನವನ್ನು ಮಾಡಬೇಕೆಂಬ ನಿಟ್ಟಿನಲ್ಲಿ ನವರಾತ್ರಿ ಸಂಧರ್ಭದಲ್ಲಿ
ಸಿಂಹದ ಮುಖವನ್ನು ಯುವತಿಯ ಮುಖದಲ್ಲಿ ಚಿತ್ರಿಸಿ, ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿ ಸಾಮಾಜಿಕ ಜಾಲತಾಣದ
ಇನ್ಸ್ಟಾಗ್ರಾಂ,ಫೇಸ್ಬುಕ್ನಲ್ಲಿ ,ದೇಶ,
ವಿದೇಶದಲ್ಲೂ ವಿಡಿಯೋ ವೈರಲ್ ಆಗಿರುತ್ತದೆ.
ರಿಯಾಲಿಸ್ಟಿಕ್ ಆರ್
ಚೇತನಾರವರು ತಮ್ಮ ಶಿಷ್ಯೆ ಶಿವಮೊಗ್ಗ ಮೂಲದ ಶ್ರೇಯಾ ಎಂ. ಭಟ್ ಮುಖದಲ್ಲಿ ರಿಯಾಲಿಸ್ಟಿಕ್ ಆರ್ಟ್ ಬಳಸಿ ಸಿಂಹದ ಚಿತ್ರ ರಚಿಸಿರುವ ಆಕೆಯ ಕೂದಲನ್ನು ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದಾರೆ. ಕಣ್ಣುಗಳನ್ನು ಮುಚ್ಚಿಅದರ ಮೇಲೆ ವ್ಯಾಕ್ಸ್ ಹಚ್ಚಿ ಕಣ್ಣಿನ ಹುಬ್ಬುಗಳ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಿ ಸುಮಾರು ಐದು ಗಂಟೆಗಳ ಅವಧಿಯಲ್ಲಿ ತಮ್ಮ ಕಲಾತ್ಮಕ ಕೈಚಳಕವನ್ನು ಮೆರೆದಿದ್ದಾರೆ. ಈ ಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್ ಸ್ವಿಕೇರಾ ಸೆರೆ ಹಿಡಿದಿದ್ದಾರೆ.
ವಿಶೇಷವೆಂದರೆ ಈ ಕಲೆಯಲ್ಲಿ ಸಿಂಹದ ಮುಖವನ್ನು ನೈಜವಾಗಿ ಚಿತ್ರಿಸಲು ಯಾವುದೇ ರೀತಿಯ ಕೃತಕ ಕೂದಲನ್ನು ಬಳಸಿಲ್ಲ. ಅಪರೂಪದ ಫೇಸ್ ಪೇಯ್ಟಿಂಗ್ ಎಂದೇ ಈ ಕಲೆಯಲ್ಲಿ ಚೇತನಾ ಪ್ರಥಮಪ್ರಯತ್ನದಲ್ಲೇ ಸೈ ಅನ್ನಿಸಿಕೊಂಡಿದ್ದಾರೆ. ಇವರ ಕಲಾಗಾರಿಕೆ ಸಾಧನೆಯನ್ನು ಪ್ರತಿಷ್ಠಿತ ದಿನಪತ್ರಿಕೆಗಳಾದ ಉದಯವಾಣಿ,ವಿಜಯ ಕರ್ನಾಟಕ, ವಾರ್ತಾಭಾರತಿ , ಮಂಗಳೂರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪೇಪರಿನಲ್ಲಿ ಪೀಠಿಕೆಯ ರೂಪದಲ್ಲಿ ಪ್ರಸಾರವಾಗಿರುತ್ತದೆ. ಹಾಗೇ
ಡಿ. ಡಿ,ಸುವರ್ಣ ಟಿವಿ, ದಿಗ್ಗಜ್ಜಯ, ಎನ್. ಎಸ್, ದೈಜಿವಲ್ಡ್, ವಿ. ಕೆ ಟಿವಿ,.ಟಿ.ವಿ.9 ಮಾಧ್ಯಮದವರೂ ಸಂದರ್ಶನ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಪ್ಯಾಂಟಸ್ ಅರ್ಟ್
ಕೋಸ್ಟಲ್ ವುಡ್ ಚಿತ್ರನಟಿ ಸ್ವಸ್ತಿಕ್ ಪೂಜಾರಿ ಅವರ ತಲೆ ಮೇಲೆ 5 ಕೆ. ಜಿ ಭಾರದ ಹಲೋ ಗೋಲ್ಡನ್ ಕ್ರೌನ್
ಇಟ್ಟುಕೊಂಡು 12 ಕ್ಯಾಂಡಲ್ ಹೊತ್ತಿಸಿದ ಏಂಜಲ್ ಮಾದರಿಯ ಫ್ಯಾಂಟಸಿ ಆರ್ಟ್ ನ್ನು ಚೇತನಾರವರ ನಿರ್ದೇಶನದಲ್ಲಿ ರಚಿಸಿದ್ದು ಅದನ್ನು ಅಕ್ಟೋಬರ್ 30 ರಂದು ಬಿಡುಗಡೆ ಮಾಡಿದ್ದಾರೆ. ಅಕ್ಟೋಬರ್ 31ರಂದು ಅಂತರಾಷ್ಟ್ರೀಯ ಹೆಲೋವಿನ್ ಡೇ ಆಚರಿಸಲಾಗುತ್ತದೆ. ಈ ಸಮಸ್ತ ಸಂತರ ಪೂರ್ವದಿನ ಎಂದು ಕರೆಯಲಾಗುವುದರಿಂದ ಈ ದಿನದ ಸಂದೇಶ ಸಾರುವ ಸಲುವಾಗಿ ನಟಿ ಸ್ವಸ್ತಿಕ್ ಪೂಜಾರಿಗೆ ವಿಶೇಷವಾಗಿ ಮೇಕಪ್ ಮಾಡಲಾಗಿದೆ.
ಚೇತನಾ ಸಾಲಿಯಾನ್ ಅವರ ಹೊಸ ರೀತಿಯ ಕಲಾಗಾರಿಕೆ ಯುವಜನತೆಗೆ
ಪ್ರೇರಣೆಯಾಗಲಿ ಇವರ ಸಾಧನೆಗೆ ಇನ್ನಷ್ಟು ಜೀವಂತಿಕೆ ತುಂಬಿ ದೇಶ,ವಿದೇಶದಲ್ಲಿ
ಹೆಸರು, ಶ್ರೇಯಸ್ಸು ಗಳಿಸಿರುವ ಇವರು ತುಳುನಾಡಿಗೆ ಹೆಮ್ಮೆ,ಇವರ ಸಾಧನೆಯ ಹಿರಿಮೆಗೆ ಸದಾ ದೇವರ ಶ್ರೀರಕ್ಷೆ ಇರಲಿ ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್
ಶ್ರೀಮತಿ. ಅರ್ಚನಾ ಎಂ ಬಂಗೇರ
ಕುಂಪಲ