ಬೆಂಗಳೂರು: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮದುವೆ ಸಮಾರಂಭಗಳಿಗೂ ಕೊರೊನಾ ಕಂಟಕ ಎದುರಾಗಿದೆ. ಹಾಗಿದ್ದರೆ ಕೊರೊನಾ ನಡುವೆ ಸಮಾರಂಭಗಳನ್ನು ನಡೆಸುವುದಕ್ಕೂ ಹೊಸ ರೂಲ್ಸ್ ಗಳು ಅನ್ವಯವಾಗುತ್ತದೆ.
ಹಾಗಿದ್ದಾರೆ ಯಾವೆಲ್ಲ ಕಡೆಗಳಲ್ಲಿ ಎಷ್ಟ ಜನರು ಸೇರಬಹುದು ಇಲ್ಲಿದೆ ಮಾಹಿತಿ..
ಮದುವೆ ಸಮಾರಂಭಕ್ಕೂ ನಿರ್ಬಂಧ: ಹೊಸ ವರ್ಷದಲ್ಲಿ ಮದುವೆಯಾಗಬೇಕೆಂದುಕೊಂಡವರು ಈ ರೂಲ್ಸ್ ಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಹೋರಾಂಗಣದಲ್ಲಿ ಆಗುವ ಮದುವೆಗಳಿಗೆ 200 ಜನರ ಮಿತಿಯನ್ನು ವಿಧಿಸಲಾಗಿದೆ. ಒಳಾಂಗಣದಲ್ಲಿ ನಡೆಯುವಂತಹ ಮದುವೆಗಳಿಗೆ 100 ಜನರ ಮಿತಿ ವಿಧಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೂಡಾ ಎರಡು ಡೋಸ್ ಕೋವಿಡ್ ಲಸಿಕೆ ಪೂರ್ಣಗೊಂಡಿರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ. ರಾಜ್ಯದಲ್ಲಿ ಸದ್ಯ ಮದುವೆ ಸೀಜನ್ ಆರಂಭವಾಗುತ್ತಿದ್ದು, ಹೆಚ್ಚಿನ ಜನ ಸೇರುವುದರಿಂದ ಹೆಚ್ಚಿನ ಜನ ಸೇರುತ್ತಾರೆ.
ಈ ನಿಟ್ಟಿನಲ್ಲಿ ಮದುವೆಗಳ ಮೇಲೆ ಸರ್ಕಾರ ವಿಶೇಷ ನಿಗಾ ವಹಿಸಿ ನಿಯಂತ್ರಣಕ್ಕೆ ಸೂಚಿಸಿದೆ.
ದೇವಸ್ಥಾನಗಳಿಗೂ ನಿರ್ಬಂಧ:
ಇನ್ನು ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದೇವಸ್ಥಾನಗಳು, ಮಂದಿರ, ಮಸೀದಿ ಮತ್ತು ಚರ್ಚ್‌ಗಳಲ್ಲಿ ಪೂಜೆ ಪುನಸ್ಕಾರ, ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಅಲ್ಲಿನ ಸೇವೆಗಳು ಎಂದಿನಂತೆ ನಡೆಯುತ್ತವೆ. ಆದರೆ, ಭಕ್ತರ ಪ್ರವೇಶಕ್ಕೆ ಮಾತ್ರ ಮಿತಿ ಇರಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಜಾತ್ರೆಗಳನ್ನು ನಡೆಸುವಂತಿಲ್ಲ:
ಜಾತ್ರೆ ಮತ್ತು ಉತ್ಸವಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಜನಜಂಗುಳಿ ಸೇರುವಂತಹ ಜಾತ್ರೆ ಮತ್ತುಉತ್ಸವಗಳನ್ನು ಈ ಕೂಡಲೇ ರದ್ದು ಮಾಡುವಂತೆ ಎಲ್ಲ ಜಿಲ್ಲೆಗಳಿಗೂ ಸೂಚಿಸಲಾಗಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳು ಮಾತ್ರ ನಡೆಯಬಹುದು. ಆದರೆ, ಜನ ಗುಂಪಾಗಿ ಉತ್ಸವಗಳನ್ನು ನಡೆಸುವುದು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಹರಡುವಿಕೆಯ ತೀವ್ರತೆ ಹೆಚ್ಚಾಗುತ್ತಿರೋದ್ರಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಮಾರಂಭಗಳಲ್ಲೂ ಕೊರೊನಾ ಎಚ್ಚರಿಕೆ ಕ್ರಮಗಳನ್ನು ಪಾಲಿಸೋದು ನಿಮ್ಮ ಆರೋಗ್ಯ ದೃಷ್ಠಿಯಿಂದ ಪಾಲಿಸೋದು ಅತ್ಯಗತ್ಯ.