ಅಖಿಲ ಭಾರತ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಮಂಗಳೂರು, ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿಪ್ರೊಫೆಷನಲ್‌ಗಳ ಸಹಯೋಗದಲ್ಲಿ ಬ್ರೈಡಲ್ ಮೇಕಪ್ ಸ್ಪರ್ಧೆಯನ್ನು ಆಯೋಜಿಸಿದೆ. ಬೆಂದೂರ್ ವೆಲ್ ನ ಮಾಯಾಇಂಟರ್‌ನ್ಯಾಶನಲ್ ಹೋಟೆಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದಿಂದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು. ಬೆಸ್ಟ್ ಓವರ್ ಆಲ್ ಲುಕ್ ಪ್ರಶಸ್ತಿಯನ್ನು ದಿ ಬ್ಯೂಟಿ ಬ್ಲಾಗ್ ಮಾಲಕಿಪ್ರತಿಭಾ ದಯಾ ಕುಕ್ಕಾಜೆಯವರು ತಮ್ಮದಾಗಿಸಿಕೊಂಡರು. ಪ್ರತಿಭಾ ಅವರು ಈ ಹಿಂದೆ 2019 ರ ಬ್ರೈಡಲ್ ಕಾಂಪಿಟೇಶನ್ ನಲ್ಲಿವಿನ್ನರ್ ಆಗಿ ಹೊರ ಹೊಮ್ಮಿದ್ದು, 2021 ರ ಶ್ರೀ ಶಾರದಾ ಮಾತಾ ಫೊಟೋ ಕಂಟೆಸ್ಟ್ ಸ್ಪರ್ಧೆಯಲ್ಲಿ ಪ್ರತಿಭಾ ಅವರ ಶ್ರೀ ಶಾರದೆಯಮೇಕಪ್ ಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಬಹುಮಾನವು ಒಲಿದಿತ್ತು. ಸೌಂದರ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವಪ್ರತಿಭಾ ದಯಾಕುಕ್ಕಾಜೆಯವರು ಸೌಂದರ್ಯ ಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.