TOP STORIES:

FOLLOW US

” ದೀಪಾವಳಿ ಮಾಂಕಾಳಿ ಕುಣಿತ “


ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ (ಪಾಣ) ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರಿಗೆ ಸಂಭಾವನೆಯಾಗಿ ಮನೆಮನೆಯಿಂದ ಹಣ ಸಿಗುವುದಿಲ್ಲ. ಬದಲಿಗೆ ಅಕ್ಕಿ, ಎಣ್ಣೆ, ಉಪ್ಪು, ಮೆಣಸು ದೊರೆಯುತ್ತದೆ.ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.

Watch Video is here:  https://www.facebook.com/watch/?v=698187894157792

ಹಾಡು ಹೇಳುವಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಿದ್ದಂತೆ ಇದರ ಲಯಕ್ಕನುಗುಣವಾಗಿ ನರ್ತಕ ಸಣ್ಣ ಹೆಜ್ಜೆಗಳನ್ನಿಟ್ಟು ಸುತ್ತು ಬರುತ್ತಾನೆ. ತೆಂಬರೆಯ ಬಡಿತ ನಿಧಾನವಾಗಿರುತ್ತದೆ. ಕೈಗಳಲ್ಲಿ ಮುಖವಾಡವನ್ನು ಮುಖಕ್ಕೆ ಎದುರಾಗಿ ಹಿಡಿದುಕೊಂಡಿರುವುದರಿಂದ ಕೈಗಳಲ್ಲಿ ಯಾವುದೇ ಭಂಗಿಯನ್ನು ಅಭಿನಯಿಸುವಂತಿಲ್ಲ. ಮುಖವಾಡವನ್ನೆತ್ತಿ ಕುಣಿತಗಾರ ನೆಲವನ್ನು ನೋಡಬೇಕಾಗಿರುವುದರಿಂದ ಕುಣಿತದಲ್ಲಿ ವೇಗ ಇರುವುದಿಲ್ಲ. ಈ ಸಂದರ್ಭದಲ್ಲಿ ಹೇಳುವ ಹಾಡು ತುಳು ಭಾಷೆಯಲ್ಲಿರುತ್ತದೆ. ಊರಿನ ರೋಗ ರುಜಿನಗಳನ್ನು ಹೋಗಲಾಡಿಸಲು ಘಟ್ಟದಿಂದ ಇಳಿದು ಮಾಂಕಾಳಿ ಬರುತ್ತಾಳೆ ಎಂಬ ನಂಬಿಕೆ ಜನಪದರಲ್ಲಿದೆ. ತುಳು ನಾಡಿನಲ್ಲಿ ಆಚರಣೆಯಲ್ಲಿರುವ ಅಟಿಕಳಿಂಜನು ಊರಿನ ಮಾರಿಯನ್ನು ನಿವಾರಿಸುವುದಕ್ಕಾಗಿ ಆಷಾಢ ಮಾಸದಲ್ಲಿ ವರ್ಷಕ್ಕೆ ಒಂದಾವರ್ತಿ ಗ್ರಾಮದಲ್ಲಿ ಬರುವುದು. ತುಳಸಿ ಪೂಜೆಯ ದಿನ ಮಾಂಕಾಳಿ ಕುಣಿತದ ಅಂತ್ಯ ಪೂಜೆ. ಆ ದಿನ ಸಂಭಾವನೆಯಾಗಿ ದೊರೆತ ಭತ್ತ, ಅಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಮಸಿ, ಮೆಣಸುಗಳನ್ನು ಸರಳೀ ಎಲೆಯಲ್ಲಿ ಸಾಂಕೇತಿಕವಾಗಿ ಮನೆಯ ಪಕ್ಕದಲ್ಲಿ ಬಡಿಸಿಡುತ್ತಾರೆ, ಅದರ ಎದುರು ಮಾಂಕಾಳಿಯ ಮುಖವಾಡವನ್ನಿಟ್ಟು ಊರಿನ ಮಾರಿಯನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ, ಹಾಗೂ ಮುಖವಾಡವನ್ನು ತೆಗೆದು ಹೊಳೆಯಲ್ಲಿ ಬಿಡುತ್ತಾರೆ. ಈ ಮೂಲಕವಾಗಿ ಊರಿನ ಮಾರಿಯನ್ನು ಹೊಳೆ ದಾಟಿಸುವ ಆಶಯವನ್ನು ಕಾಣಬಹುದಾಗಿದೆ.

(ಸಂಪಾದಕರು: ಪ್ರೊ. ಹಿ. ಚಿ. ಬೋರಲಿಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಪುಟ ೨೬.)

Credits: Beauty of Tulunad  facebook page


Share:

More Posts

Category

Send Us A Message

Related Posts

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು


Share       ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಉಡುಪಿ ಜಿಲ್ಲೆಯ ಅಂಬಲಪಾಡಿ ವಿಠೋಬ ರುಕುಮಾಯಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಪೂಜಾರಿಯವರ ನೇತೃತ್ವದಲ್ಲಿ ಫೆಬ್ರವರಿ


Read More »

ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್


Share       ಯುವವಾಹಿನಿ( ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಾಟಕ ಪ್ರದರ್ಶನ ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್ ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ಸಂಘಟನೆಯ ವತಿಯಿಂದ 7ನೇ ವರ್ಷದ ಸಂಭ್ರಮಾಚರಣೆ


Share       ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ದೇಯವಾಕ್ಯದೊಂದಿಗೆ ಹುಟ್ಟಿಕೊಂಡ ಸಂಸ್ಥೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೆರಳಾಗಿ ಸಾಮಾಜಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರವಾದ


Read More »

ಸೌದಿ ಅರೇಬಿಯಾದಲ್ಲಿ ನಡೆದ 17ನೇ ಸಂಸ್ಕೃತಿ ಸಮ್ಮೇಳನದಲ್ಲಿ ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ


Share       ಶಿವಾನಂದ ಕೋಟ್ಯಾನ್ ರಿಗೆ  “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ ಕಟಪಾಡಿ  ಶಿವಾನಂದ ಕೋಟ್ಯನ್ ಎರಡು ದಶಕಗಳ ಕಾಲ ಅನಿವಾಸಿ ಭಾರತೀಯನಾಗಿ ಸಮಾಜಿಕ ಸ್ಪಂದನ ಕಾರ್ಯ, ಹಾಗೂ ನಾಡಿನ ಸಾಂಸ್ಕೃತಿಕ, ಸಾಹಿತ್ಯ ,ನಾಟಕ, ಸಿನೆಮಾ ಅಯೂಜನೆ ಹೀಗೆ


Read More »

ವಿಶ್ವ ಮಾನ್ಯ” ಪ್ರಶಸ್ತಿ 2024 ಭಾಜನರಾದ ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್


Share       ಸೌದಿ ಅರಬಿಯಾ: ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ವಿಶ್ವ ಮಾನ್ಯ” ಪ್ರಶಸ್ತಿ 2024 ನೀಡಿ  ಗೌರವಿಸಲಾಯಿತು. 17 ನೇ ವಿಶ್ವ ಕನ್ನಡ ಸಮ್ಮೇಳನವು ಫೆಬ್ರವರಿ 8 ರಂದು ಸೌದಿ


Read More »

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ


Share       ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ. ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ


Read More »