ಉಡುಪಿಯ ಬೆಳಪು ಸೂರು ಪೂಜಾರಿ- ಪದ್ಮ ಪೂಜಾರಿ ದಂಪತಿಗಳ ಪುತ್ರರಾಗಿ 1962ರಲ್ಲಿ ಜನಿಸಿದ ಸತೀಶ್ ಪೂಜಾರಿ ಅವರು 1986ರಲ್ಲಿ ದುಬಾಯಿಗೆ ಆಗಮಿಸಿ ಪಯೋನಿರ್ ಇನ್ಸೂರೆನ್ಸ್ ಸಂಸ್ಥೆಯ ಟೆಕ್ನಿಕಲ್ ಮೇನೆಜರ್ ಆಗಿ ಉದ್ಯೋಗ ನಿರ್ವಹಿಸ ತೊಡಗಿಕೊಂಡಿದ್ದು ಇದೀಗ ಜನರಲ್ ಮೇನೆಜರ್ ಆಗಿ ಭಡ್ತಿ ಹೊಂದಿ ಸಂಸ್ಥೆಯ ಉನ್ನತಿಗೆ ಕಾರಣೀಭೂತ ರಾಗಿದ್ದಾರೆ.
ಕೊಲ್ಲಿ ರಾಷ್ಟ್ರದ ಇದೀಗಾ ತಮ್ಮದೇ ಸ್ವಂತವಾದ ಹೋಟೆಲ್ ಉದ್ಯಮವನ್ನು ಸ್ಥಾಪಿಸಿದರು. ಅ ಮೂಲಕ ಊರಿನ ಹಲವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು.
ಇವರು ಮುಲ್ಕಿ ವಿಜಯ ಕಾಲೇಜಿನಲ್ಲಿ ಬಿ.ಎ.ಪದವಿ ಶಿಕ್ಷಣ ಪಡೆದಿರುವ ಸತೀಶ್ ಪೂಜಾರಿ ಮುಂಬಯಿಯ ಮಿಥಿಬಾಯಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಹಾಗೂ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯದ ಡಿಪ್ಲೊಮಾ ಪದವಿ ಗಳಿಸಿಕೊಂಡಿದ್ದಾರೆ.ಸತೀಶ್ ಪೂಜಾರಿ ಅವರು ಬಾಲ್ಯ ಕಾಲದಿಂದಲೇ ಕಲೆ -ಸಾಂಸ್ಕೃತಿಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು, ನಾಟಕ-ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿ ಕೊಂಡರು. ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಸತೀಶ್ ಪೂಜಾರಿ ಅವರು ಕರ್ನಾಟಕ ಸಂಘ ಶಾರ್ಜ ಇದರ ಅಧ್ಯಕ್ಷ, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ ಇದರ ಅಧ್ಯಕ್ಷ, ಇನ್ಸೂರೆನ್ಸ್ ಇಂಡಿಯಾದ ಗೌರವ ಸದಸ್ಯ,ಕೆನರಾ ಎಂಟರ್ ಪ್ರೈಸಸ್ ದುಬಾಯಿ ಇದರ ಸದಸ್ಯ,ನಮ್ಮ ತುಳುವೆರ್ ದುಬಾಯಿ ಯ ಸ್ಥಾಪಕ ಸದಸ್ಯ, ಯುಎಇ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯ, ಧ್ವನಿ ಪ್ರತಿಷ್ಠಾನದ ಸದಸ್ಯತ್ವ ಹೀಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಗಲ್ಫ್ ನಾಡಿನಲ್ಲಿ ಕಲೆ, ಸಾಹಿತ್ಯ, ಕ್ರೀಡೆಗಳ ಪ್ರೋತ್ಸಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಕ್ತದಾನ, ಶಿಕ್ಷಣ ಸಹಾಯ, ಚಿಕಿತ್ಸಾ ಸಹಾಯ, ಬಡ ಹೆಣ್ಮಕ್ಕಳ ವಿವಾಹ ಸಹಾಯ ಮೊದಲಾದ ಸಮಾಜ ಸೇವೆಯಲ್ಲೂ ಇವರ ಕೊಡುಗೆ ಅಪಾರ ಬಡವರ ಪಾಲಿನ ಸಂಜೀವಿನಿ ಯಾಗಿದ್ದಾರೆ.
ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದರ ಜೊತೆಗೆ ಶಾರ್ಜ ಕರ್ನಾಟಕ ಸಂಘದ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಹಾಗೂ ಧ್ವನಿ ಪ್ರತಿಷ್ಠಾನ ಯುಎಇ, ಬಿಲ್ಲವಾಸ್ ದುಬೈ ಎಂಡ್ ನಾರ್ಥನ್ ಎಮಿರೇಟ್ಸ್, ಬಿಲ್ಲವರ ಬಳಗ ಅಬುಧಾಬಿ, ಕನ್ಯಾಡಿ ರಾಮಕ್ಷೇತ್ರ, ಬಿಲ್ಲವರ ಸಂಘ ಮುಂಬಯಿ, ಉಡುಪಿ ಮೊದಲಾದೆಡೆಯ ಸನ್ಮಾನಗಳು ಸಂದಿದೆ.ಇವರ ಧರ್ಮಪತ್ನಿಯಾದ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಪತಿಯ ಸಾಮಾಜಿಕ, ಸಾಂಸ್ಕೃತಿಕ ರಂಗದ ಸೇವೆಗೂ ಸಾಥ್ ನೀಡುತ್ತಿದ್ದಾರೆ, ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಅವರು ಕೂಡ ಚಲನಚಿತ್ರ ಅಭಿನಯದಲ್ಲೂ ಸೈ ಎನಿಸಿದ್ದಾರೆ.
ಇಂತಃ ಸೇವಾ ಮನೋಭಾವದ ನಮ್ಮ ಬಿಲ್ಲವ ಸಮಾಜದ ಹಾಗೂ ತುಳುನಾಡಿನ ಹೆಮ್ಮೆಯ ಸಮಾಜ ಸೇವಕ ಸತೀಶ್ ಪೂಜಾರಿ, ತಾಯ್ನಾಡಿನ ಜನರ ಬಗ್ಗೆ ಇರುವ ಕಾಳಜಿ, ಜನರ ಕಷ್ಟಗಳನ್ನು ಆಲಿಸುತ್ತಾ ತನ್ನ ಕೈಯಲ್ಲಾದ ಸಹಾಯ ಮಾಡುತ್ತಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬರಹ: ಪುಷ್ಪರಾಜ್ ಪೂಜಾರಿ