ಹೌದು. ಇಂತಹ ಒಂದು ವಿಶಿಷ್ಟ ಸಂಪ್ರದಾಯವಿರುವುದು ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿ. ಮರಳು ಧೂಮಾವತಿ ಎಂಬ ದೈವ, ಜೋಗಿ ಮಠ ಕ್ಷೇತ್ರದ ದೈವವಾಗಿದ್ದು,ವರ್ಷಂಪ್ರತಿ ನವರಾತ್ರಿಯ ಕೊನೆಯ ದಿನ ಅಂದರೆ ಮಹಾನವಮಿಯಂದು ನಾಥ ಪಂಥದ ಸ್ವಾಮೀಜಿಯವರು ದೈವದ ಮಂಚದಲ್ಲಿ ವಿರಾಜಮಾನರಾಗುವರು.
ಅಲ್ಲದೇ ಆ ಸಂಧರ್ಭದಲ್ಲಿ ಸ್ವಾಮೀಜಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.ಅದರಂತೆ ಈ ಬಾರಿಯೂ ಮಹಾನವಮಿಯಂದು ಜೋಗಿ ಮಠ ನಾಥ ಪಂಥದ ಸ್ವಾಮೀಜಿಗಳಾದ ರಾಜಾ ಯೋಗಿ ನಿರ್ಮಲನಾಥ ಸ್ವಾಮೀಜಿಯವರಿಗೆ ಪೂಜೆ ಸಲ್ಲಿಸಲಾಯಿತು. ಇದೊಂದು ವಿನೂತನ ಮತ್ತು ಅಪರೂಪದ ಪೂಜೆಯಾಗಿದ್ದು ಇಂತಹ ಅನೇಕ ಸಂಪ್ರದಾಯ ಕದ್ರಿಯ ಜೋಗಿ ಮಠದಲ್ಲಿ ನಡೆದುಕೊಂಡು ಬಂದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಾಥ ಪಂಥದ ಅಧ್ಯಕ್ಷರಾಗಿದ್ದು. ಕದ್ರಿಯಲ್ಲಿರುವ ಜೋಗಿ ಮಠದ ರಾಜಾ ಯೋಗಿ ನಿರ್ಮಲನಾಥ ಮಹಾರಾಜರು ನಾಥ ಪಂಥದ ದೇಶದ ಏಕೈಕ ರಾಜರಾಗಿದ್ದಾರೆ.ದೇಶದ ನಾನಾ ಭಾಗದಲ್ಲಿ ಸುಮಾರು 3,500 ಕ್ಕೂ ಹೆಚ್ವು ನಾಥ ಸಂಪ್ರದಾಯದ ಮಠಗಳಿದ್ದು ಮಂಗಳೂರಿನ ಕದ್ರಿಯಲ್ಲಿರುವ ಮಠ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಸಾಧ್ಯವಾದರೆ ಒಂದು ಬಾರಿ ಈ ಮಠಕ್ಕೆ ಭೇಟಿ ನೀಡಿ.
Credits: beautyoftulunad